ವಿಮಾನ ನಿಲ್ದಾಣದ ಬಳಿ ಪತ್ತೆಯಾಗಿದೆ Covid-19 ನಂಬರ್ ಪ್ಲೇಟ್ ನ BMW ಕಾರು

| Updated By: ಸಾಧು ಶ್ರೀನಾಥ್​

Updated on: Jul 15, 2020 | 8:36 AM

ಕೊರೊನಾ ಇಡೀ ವಿಶ್ವವನ್ನು ಬೆಚ್ಚಿಬೀಳುವಂತೆ ಮಾಡಿದೆ. ಎಲ್ಲಿ ನೋಡಿದ್ರೂ ಕೊರೊನಾ ಅಟ್ಟಹಾಸವೇ ಕಾಣುತ್ತಿದೆ. ಪ್ರತಿ ದಿನ ಪ್ರತಿ ಕ್ಷಣ ಕೊರೊನಾದೇ ಸುದ್ದಿಗಳು ಹರಿದಾಡುತ್ತಿವೆ. ಈ ಸೋಂಕಿನಿಂದ ಮನುಷ್ಯ ಕುಲ ಮರಗುತ್ತಿದೆ. ಮಾನಸಿಕ ಖಿನ್ನತೆಗೆ ಒಳಗಾಗುತ್ತಿದೆ. ಈ ನಡುವೆ ದಕ್ಷಿಣ ಆಸ್ಟ್ರೇಲಿಯಾದ ರಾಜಧಾನಿಯಲ್ಲಿರುವ ಅಡಿಲೇಡ್ ವಿಮಾನ ನಿಲ್ದಾಣದ ಬಳಿ ಸಿಕ್ಕಿರುವ BMW ಕಾರು ಎಲ್ಲರನ್ನು ಅಚ್ಚರಿಗೊಳಿಸಿದೆ. ಹೀಗೆ ನಿಂತ ಬೆಳಬಾಳುವ ಕಾರು ಜನರನ್ನು ಅಚ್ಚರಿಗೊಳಿಸಿದೆ ಹಾಗೂ ಅನೇಕ ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ. ಕಾರಣ ಆ ಕಾರಿನ ನಂ ಪ್ಲೇಟ್. […]

ವಿಮಾನ ನಿಲ್ದಾಣದ ಬಳಿ ಪತ್ತೆಯಾಗಿದೆ Covid-19 ನಂಬರ್ ಪ್ಲೇಟ್ ನ BMW ಕಾರು
Follow us on

ಕೊರೊನಾ ಇಡೀ ವಿಶ್ವವನ್ನು ಬೆಚ್ಚಿಬೀಳುವಂತೆ ಮಾಡಿದೆ. ಎಲ್ಲಿ ನೋಡಿದ್ರೂ ಕೊರೊನಾ ಅಟ್ಟಹಾಸವೇ ಕಾಣುತ್ತಿದೆ. ಪ್ರತಿ ದಿನ ಪ್ರತಿ ಕ್ಷಣ ಕೊರೊನಾದೇ ಸುದ್ದಿಗಳು ಹರಿದಾಡುತ್ತಿವೆ. ಈ ಸೋಂಕಿನಿಂದ ಮನುಷ್ಯ ಕುಲ ಮರಗುತ್ತಿದೆ. ಮಾನಸಿಕ ಖಿನ್ನತೆಗೆ ಒಳಗಾಗುತ್ತಿದೆ.
ಈ ನಡುವೆ ದಕ್ಷಿಣ ಆಸ್ಟ್ರೇಲಿಯಾದ ರಾಜಧಾನಿಯಲ್ಲಿರುವ ಅಡಿಲೇಡ್ ವಿಮಾನ ನಿಲ್ದಾಣದ ಬಳಿ ಸಿಕ್ಕಿರುವ BMW ಕಾರು ಎಲ್ಲರನ್ನು ಅಚ್ಚರಿಗೊಳಿಸಿದೆ.

ಹೀಗೆ ನಿಂತ ಬೆಳಬಾಳುವ ಕಾರು ಜನರನ್ನು ಅಚ್ಚರಿಗೊಳಿಸಿದೆ ಹಾಗೂ ಅನೇಕ ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ. ಕಾರಣ ಆ ಕಾರಿನ ನಂ ಪ್ಲೇಟ್. ಜನರನ್ನು ಹಿಂಡಿ ಹಿಪ್ಪೆ ಮಾಡಿರೋ Covid-19 ಎಂಬ ನಂಬರ್ ಪ್ಲೇಟ್​ ಅನ್ನು ಈ BMW ಕಾರು ಹೊಂದಿದೆ.

ಅಚ್ಚರಿ ಎಂದರೆ ಈ ಕಾರನ್ನು ಫೆಬ್ರವರಿ ಅಥವಾ ಅದಕ್ಕೂ ಮುನ್ನವೇ ಈ ವಿಮಾನ ನಿಲ್ದಾಣದ ಬಳಿ ಪಾರ್ಕ್ ಮಾಡಲಾಗಿದೆಯಂತೆ. ಇಷ್ಟು ತಿಂಗಳು ಕಳೆದರೂ ಕಾರನ್ನು ತೆಗೆದುಕೊಂಡು ಹೋಗಲು ಮಾಲೀಕ ಬಂದಿಲ್ಲ. ಹಾಗೂ ಈ ಕಾರು ಯಾರಿಗೆ ಸೇರಿದ್ದು, ಎಂಬುದೂ ತಿಳಿದು ಬಂದಿಲ್ಲ. ವಿಶ್ವದಲ್ಲಿ ಕೊರೊನಾ ಅಟ್ಟಹಾಸ ಮೆರೆಯುವ ಮುನ್ನವೇ ವಿಮಾನ ನಿಲ್ದಾಣದಲ್ಲಿ ಕೋವಿಡ್ 19 ಹೆಸರಿನ ನಂ ಪ್ಲೇಟ್ ಹೊಂದಿರುವ ಕಾರು ಪತ್ತೆಯಾಗಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

Published On - 8:06 am, Wed, 15 July 20