ಬ್ರಿಟಿಷ್ ಪ್ರಧಾನಿ ಮೇಲೆ ಹೆಚ್ಚಿದ ಒತ್ತಡ; ರಾಜೀನಾಮೆ ನೀಡುವುದಿಲ್ಲ ಎಂದ ಬೋರಿಸ್ ಜಾನ್ಸನ್

| Updated By: ರಶ್ಮಿ ಕಲ್ಲಕಟ್ಟ

Updated on: Jul 06, 2022 | 8:17 PM

ರಾಜೀನಾಮೆ ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ ಬೋರಿಸ್, ನೀವು ನನಗೆ ಬೃಹತ್ ಜನಾದೇಶವನ್ನು ನೀಡಿದ್ದರಿಂದ ಕಷ್ಟದ ಸಂದರ್ಭಗಳಲ್ಲಿಯೂ ನಾನೂ ಪ್ರಧಾನಿಯ ಕೆಲಸ ಮುಂದುವರಿಸಬೇಕು ಅದನ್ನು ನಾನು ಮಾಡುತ್ತೇನೆ ಎಂದು ಹೇಳಿದ್ದಾರೆ.

ಬ್ರಿಟಿಷ್ ಪ್ರಧಾನಿ ಮೇಲೆ ಹೆಚ್ಚಿದ ಒತ್ತಡ; ರಾಜೀನಾಮೆ ನೀಡುವುದಿಲ್ಲ ಎಂದ ಬೋರಿಸ್ ಜಾನ್ಸನ್
ಬೋರಿಸ್ ಜಾನ್ಸನ್
Follow us on

ಲಂಡನ್: ಹಗರಣದಲ್ಲಿ ಸಿಲುಕಿರುವ ತಮ್ಮ ಸರ್ಕಾರದಿಂದ ರಾಜೀನಾಮೆ ನೀಡಬೇಕು ಎಂದು ಸಂಸದರಿಂದ ಒತ್ತಡವನ್ನು ಎದುರಿಸುತ್ತಿರುವ ಬೋರಿಸ್ ಜಾನ್ಸನ್ (Boris Johnson) ಬ್ರಿಟಿಷ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದ್ದಾರೆ . 58 ವರ್ಷದ ನಾಯಕ ತನ್ನ ಅಧಿಕಾರವನ್ನು ಮುಂದುವರಿಸಲಿದ್ದೇನೆ ಎಂದಿದ್ದಾರೆ. ಮಂಗಳವಾರ ರಾತ್ರಿ ರಿಷಿ ಸುನಕ್  (Rishi Sunak) ಹಣಕಾಸು ಸಚಿವ ಸ್ಥಾನಕ್ಕೆ ಮತ್ತು ಸಾಜಿದ್ ಜಾವಿದ್ (Sajid Javid) ಆರೋಗ್ಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬುಧವಾರ ಸಂಜೆ ಇಬ್ಬರು ಸಚಿವರು ರಾಜೀನಾಮೆ ನೀಡಿದ್ದು ಒಟ್ಟು 30 ಮಂದಿ ಈವರೆಗೆ ರಾಜೀನಾಮೆ ನೀಡಿದ್ದಾರೆ. ನಿಯಮಗಳನ್ನು ಅನುಸರಿಸದೆ  ಸಾರ್ವಜನಿಕರನ್ನು ಕೆರಳಿಸಿದ ಡೌನಿಂಗ್ ಸ್ಟ್ರೀಟ್‌ನಲ್ಲಿ ಲಾಕ್‌ಡೌನ್ ಕಾನೂನು ಉಲ್ಲಂಘನೆ ಸೇರಿದಂತೆ ತಿಂಗಳುಗಳ ಕಾಲ ಜಾನ್ಸನ್‌ರನ್ನು ಹಿಂಬಾಲಿಸಿದ ಹಗರಣದ ಸಂಸ್ಕೃತಿಯನ್ನು ಇನ್ನು ಮುಂದೆ ಸಹಿಸಲಾಗುವುದಿಲ್ಲ ಎಂದು ಇಬ್ಬರೂ ಹೇಳಿದರು. ಸಂಸತ್ತಿನಲ್ಲಿ ಪ್ರಧಾನಿಯವರ ಪ್ರಶ್ನೆಗಳ ಸಾಪ್ತಾಹಿಕ ಅಧಿವೇಶನದಲ್ಲಿ, ಎಲ್ಲಾ ಕಡೆಯ ಸಂಸದರು ಜಾನ್ಸನ್ ಮೇಲೆ ರಾಜೀನಾಮೆಯ ಒತ್ತಡ ಹೇರಿದ್ದಾರೆ.


ರಾಜೀನಾಮೆ ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ ಬೋರಿಸ್, ನೀವು ನನಗೆ ಬೃಹತ್ ಜನಾದೇಶವನ್ನು ನೀಡಿದ್ದರಿಂದ ಕಷ್ಟದ ಸಂದರ್ಭಗಳಲ್ಲಿಯೂ ನಾನೂ ಪ್ರಧಾನಿಯ ಕೆಲಸ ಮುಂದುವರಿಸಬೇಕು ಅದನ್ನು ನಾನು ಮಾಡುತ್ತೇನೆ ಎಂದು ಹೇಳಿದ್ದಾರೆ.

ಹಿರಿಯ ಕನ್ಸರ್ವೇಟಿವ್ ಅನ್ನು ನೇಮಿಸಿದ್ದಕ್ಕಾಗಿ ಜಾನ್ಸನ್ ಕ್ಷಮೆಯಾಚಿಸಿದ ಕೆಲವೇ ನಿಮಿಷಗಳಲ್ಲಿ ಸುನಕ್ ಮತ್ತು ಜಾವಿದ್ ರಾಜೀನಾಮೆ ನೀಡಿದ್ದಾರೆ.. ಹಿರಿಯ ಕನ್ಸರ್ವೇಟಿವ್ ಅವರು ಕಳೆದ ವಾರ ಕುಡಿದ ಮತ್ತಿನಲ್ಲಿ ಇಬ್ಬರು ಪುರುಷರ ಮೇಲೆ ದೌರ್ಜನ್ಯವೆಸಗಿದ ಆರೋಪದಲ್ಲಿ ಹುದ್ದೆ ತೊರೆದಿದ್ದರು.


ಬೋರಿಸ್ ಜಾನ್ಸನ್ ಇಂದು ರಾತ್ರಿ ವಿಶ್ವಾಸ ಮತವನ್ನು ಎದುರಿಸುವ ಸಾಧ್ಯತೆ

ಇಂದು ರಾತ್ರಿ  ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ವಿಶ್ವಾಸ ಮತವನ್ನು ಎದುರಿಸುವ ಸಾಧ್ಯತೆ ಇದೆ  ಎಂದು ಸ್ಕೈ ಪತ್ರಕರ್ತ ಟಾಮ್ ಲಾರ್ಕಿನ್ ಟ್ವೀಟ್ ಮಾಡಿದ್ದಾರೆ. ಪ್ರಸ್ತುತ ಜಾನ್ಸನ್‌ಗೆ ಮುಂದಿನ ವರ್ಷದವರೆಗೆ ವಿಶ್ವಾಸ ಮತದಿಂದ ವಿನಾಯಿತಿ ನೀಡುವ ಸಮಿತಿಯ ನಿಯಮಗಳನ್ನು ಇಂದು ಮಧ್ಯಾಹ್ನ ಬದಲಾಯಿಸುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

Published On - 8:11 pm, Wed, 6 July 22