ಚೀನಾದಲ್ಲಿ ಒಮಿಕ್ರಾನ್ ಹೊಸ ರೂಪಾಂತರಿ ಪತ್ತೆ; 13 ಮಿಲಿಯನ್ ಜನರಿರುವ ಕ್ಲಿಯಾನ್ ಲಾಕ್‌ಡೌನ್
ಕಳೆದ ವರ್ಷದ ಕೊನೆಯಲ್ಲಿ ಚೀನಾದ ಐತಿಹಾಸಿಕ ನಗರ ಕ್ಸಿಯಾನ್ ಒಂದು ತಿಂಗಳ ಅವಧಿಯ ಲಾಕ್‌ಡೌನ್ ಅನುಭವಿಸಿತ್ತು
ಕೊರೊನಾವೈರಸ್ ಸೋಂಕು ಮೊದಲು ಪತ್ತೆಯಾಗಿದ್ದ ಚೀನಾದಲ್ಲಿ (China Covid-19 Cases) ಇದೀಗ ಮತ್ತೆ ಕೊವಿಡ್ ರೂಪಾಂತರಿ ಕೇಸುಗಳು (Omicron Subvariant) ಹೆಚ್ಚಾಗುತ್ತಿವೆ. ವ್ಯಾಪಕವಾಗಿ ಹರಡುವ ಒಮಿಕ್ರಾನ್ ಉಪ ರೂಪಾಂತರಿಯಿಂದಾಗಿ ಕೊರೊನಾವೈರಸ್ (COVID-19) ಪ್ರಕರಣಗಳ ಸ್ಫೋಟವನ್ನು ತಪ್ಪಿಸಲು ಪ್ರಾಚೀನ ಚೀನಾದ ನಗರವಾದ ಕ್ಸಿಯಾನ್‌ನ ಕೆಲವು ಭಾಗಗಳನ್ನು ಮತ್ತೆ ಬಂದ್ ಮಾಡಲಾಗಿದೆ. 13 ಮಿಲಿಯನ್ ಜನರು ನೆಲೆಸಿರುವ ಕ್ಸಿಯಾನ್‌ನಲ್ಲಿನ ವ್ಯವಹಾರಗಳು, ಶಾಲೆಗಳು ಮತ್ತು ರೆಸ್ಟೋರೆಂಟ್‌ಗಳನ್ನು ಒಂದು ವಾರ ಮುಚ್ಚಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷದ ಕೊನೆಯಲ್ಲಿ ಚೀನಾದ ಐತಿಹಾಸಿಕ ನಗರ ಕ್ಸಿಯಾನ್ ಒಂದು ತಿಂಗಳ ಅವಧಿಯ ಲಾಕ್‌ಡೌನ್ ಅನುಭವಿಸಿತ್ತು. ಇದೀಗ ಕ್ಲಿಯಾನ್ನಲ್ಲಿ ಶನಿವಾರದಿಂದ ಕ್ಲಸ್ಟರ್‌ನಲ್ಲಿ 18 ಪ್ರಕರಣಗಳು ವರದಿಯಾಗಿವೆ. ಅಧಿಕೃತ ಸೂಚನೆಗಳ ಪ್ರಕಾರ, ಅಮೆರಿಕಾ ಮತ್ತು ಬ್ರಿಟನ್‌ನಲ್ಲಿ ಈಗಾಗಲೇ ಪ್ರಬಲವಾಗಿರುವ ಒಮಿಕ್ರಾನ್ ರೂಪಾಂತರವು ವೇಗವಾಗಿ ಹರಡುವುದರಿಂದ ಹೆಚ್ಚಿನ ಸೋಂಕಿನ ಪ್ರಕರಣಗಳು ಉಂಟಾಗುತ್ತಿವೆ.
ಇದನ್ನೂ ಓದಿ: Omicron Variant: ಭಾರತದಲ್ಲಿ ಒಮಿಕ್ರಾನ್ ಹೊಸ ರೂಪಾಂತರಿ BA.4, BA.5 ಪತ್ತೆ; ಇದು ಕೊವಿಡ್ 4ನೇ ಅಲೆಯ ಮುನ್ಸೂಚನೆಯಾ?
ಕ್ಲಿಯಾನ್ ಅನ್ನು ನಿನ್ನೆ (ಬುಧವಾರ) ಮಧ್ಯರಾತ್ರಿಯಿಂದ ಮುಚ್ಚಲಾಗಿದೆ. ಸರ್ಕಾರದ ಸೂಚನೆಯಂತೆ ಪಬ್‌ಗಳು, ಇಂಟರ್ನೆಟ್ ಕೆಫೆಗಳು ಮತ್ತು ಕರೋಕೆ ಬಾರ್‌ಗಳು ಸೇರಿದಂತೆ ಸಾರ್ವಜನಿಕ ಮನರಂಜನಾ ಸ್ಥಳಗಳನ್ನು ಬಂದ್ ಮಾಡಲಾಗಿದೆ. ರೆಸ್ಟೋರೆಂಟ್‌ಗಳಲ್ಲಿ ಸರ್ವಿಸ್ ಹಾಲ್ ಓಪನ್ ಇರುವುದಿಲ್ಲ. ಆದರೆ, ಟೇಕ್‌ಅವೇ ಸೇವೆಗಳನ್ನು ನೀಡುವುದನ್ನು ಮುಂದುವರಿಸಬಹುದು. ಶಾಲೆ, ವಿಶ್ವವಿದ್ಯಾಲಯಗಳನ್ನು ಕೂಡ ಮುಚ್ಚಲು ಸೂಚಿಸಲಾಗಿದೆ.
13 ಮಿಲಿಯನ್ ಜನರಿಗೆ ನೆಲೆಯಾಗಿರುವ ಚೀನಾದ ವಾಯುವ್ಯ ನಗರವಾದ ಕ್ಸಿಯಾನ್ ಅನ್ನು ಭಾಗಶಃ ಮುಚ್ಚಲಾಗಿದೆ. ಅಮೆರಿಕಾ ಮತ್ತು ಯುರೋಪ್‌ನಲ್ಲಿ ವೇಗವಾಗಿ ಪ್ರಾಬಲ್ಯ ಸಾಧಿಸುತ್ತಿರುವ ಹೆಚ್ಚು ಹರಡುವ ಹೊಸ ಒಮಿಕ್ರಾನ್ ರೂಪಾಂತರಿ ಚೀನಾದಲ್ಲಿ ಮೊದಲ ಬಾರಿಗೆ ಏಕಾಏಕಿ ಪತ್ತೆಯಾಗಿದ್ದು, ಕೊವಿಡ್ ಕೇಸುಗಳ ಸಂಖ್ಯೆ ಹೆಚ್ಚುತ್ತಿದೆ.
ಇದನ್ನೂ ಓದಿ: Omicron: ಕರ್ನಾಟಕದಲ್ಲಿ ಒಮಿಕ್ರಾನ್ ಉಪತಳಿ ಪತ್ತೆ; 4ನೇ ಅಲೆಯ ಆತಂಕ
ಕ್ಲಿಯಾನ್ನಲ್ಲಿ ಶನಿವಾರದಿಂದ ಸೋಮವಾರದವರೆಗೆ 18 ಕೋವಿಡ್ ಸೋಂಕುಗಳು ದಾಖಲಾಗಿವೆ. ಇವೆಲ್ಲವೂ ಓಮಿಕ್ರಾನ್ ಬಿಎ.5.2 ಸಬ್‌ವೇರಿಯಂಟ್‌ನ ಸೋಂಕುಗಳಾಗಿವೆ. ಹೀಗಾಗಿ, ಬಾರ್‌ಗಳು, ಚಿತ್ರಮಂದಿರಗಳು, ಜಿಮ್‌ಗಳು, ಗ್ರಂಥಾಲಯಗಳು ಮತ್ತು ವಸ್ತುಸಂಗ್ರಹಾಲಯಗಳು ಸೇರಿದಂತೆ ಮನರಂಜನೆ, ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಥಳಗಳನ್ನು ಮುಚ್ಚಲಾಗಿದೆ. ಎಲ್ಲಾ ಪೂಜಾ ಸ್ಥಳಗಳನ್ನು ಮುಚ್ಚಲಾಗಿದೆ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ ಎಂದು ನಗರದ ಅಧಿಕಾರಿ ಜಾಂಗ್ ಕ್ಸುಡಾಂಗ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.