ಶಾಲಾ ಬಸ್​ನಿಂದ ತಲೆ ಹೊರಹಾಕಿ ಸ್ನೇಹಿತರೊಂದಿಗೆ ಮಾತನಾಡುತ್ತಿರುವಾಗ ಹೊರಟ ಬಸ್, ಕಂಬಕ್ಕೆ ತಲೆ ತಗುಲಿ ಬಾಲಕಿ ಸಾವು

ಶಾಲಾ ಬಸ್​ನಿಂದ ತಲೆ ಹೊರಹಾಕಿ ಸ್ನೇಹಿತರೊಂದಿಗೆ ಮಾತನಾಡುತ್ತಿರುವಾಗ ಬಸ್​ ಹೊರಟಿತ್ತು, ಆಗ ಅಲ್ಲಿಯೇ ಇದ್ದ ಕಂಬಕ್ಕೆ ತಲೆ ತಗುಲಿ ಬಾಲಕಿ ಮೃತಪಟ್ಟಿರುವ ಘಟನೆ ಬ್ರೆಜಿಲ್​ನಲ್ಲಿ ನಡೆದಿದೆ. ಆಗಸ್ಟ್​ 16ರಂದು ಬಾಲಕಿ, ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಬಾಲಕಿಯು ಬಸ್​ನ ಕಿಟಕಿಯಿಂದ ತಲೆ ಹೊರಹಾಕಿದ್ದಳು, ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಳು, ಅದೇ ಸಮಯದಲ್ಲಿ ಬಸ್ ಹೊರಟಿತ್ತು.

ಶಾಲಾ ಬಸ್​ನಿಂದ ತಲೆ ಹೊರಹಾಕಿ ಸ್ನೇಹಿತರೊಂದಿಗೆ ಮಾತನಾಡುತ್ತಿರುವಾಗ ಹೊರಟ ಬಸ್, ಕಂಬಕ್ಕೆ ತಲೆ ತಗುಲಿ ಬಾಲಕಿ ಸಾವು
ಬಾಲಕಿ-ಸಾಂದರ್ಭಿಕ ಚಿತ್ರ
Image Credit source: NDTV

Updated on: Aug 23, 2023 | 10:18 AM

ಶಾಲಾ ಬಸ್​ನಿಂದ ತಲೆ ಹೊರಹಾಕಿ ಸ್ನೇಹಿತರೊಂದಿಗೆ ಮಾತನಾಡುತ್ತಿರುವಾಗ ಬಸ್​ ಹೊರಟಿತ್ತು, ಆಗ ಅಲ್ಲಿಯೇ ಇದ್ದ ಕಂಬಕ್ಕೆ ತಲೆ ತಗುಲಿ ಬಾಲಕಿ ಮೃತಪಟ್ಟಿರುವ ಘಟನೆ ಬ್ರೆಜಿಲ್​ನಲ್ಲಿ ನಡೆದಿದೆ. ಆಗಸ್ಟ್​ 16ರಂದು ಬಾಲಕಿ, ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಬಾಲಕಿಯು ಬಸ್​ನ ಕಿಟಕಿಯಿಂದ ತಲೆ ಹೊರಹಾಕಿದ್ದಳು, ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಳು, ಅದೇ ಸಮಯದಲ್ಲಿ ಬಸ್ ಹೊರಟಿತ್ತು.

ಪಕ್ಕದಲ್ಲಿ ತುಂಬಾ ವಾಹನಗಳಿದ್ದ ಕಾರಣ ಡ್ರೈವರ್ ಬಸ್​ ಸ್ವಲ್ಪ ಎಡ ಭಾಗಕ್ಕೆ ತೆಗೆದುಕೊಂಡರು ಆಗ ಅಲ್ಲಿಯೇ ಇದ್ದ ಕಂಬಕ್ಕೆ ಬಾಲಕಿಯ ತಲೆ ಹೊಡೆದಿದೆ. ಆಗ ತಕ್ಷಣ ಅಲ್ಲಿದ್ದವರು ಚಾಲಕನನ್ನು ಎಚ್ಚರಿಸಿದ್ದಾರೆ, ತಕ್ಷಣ ಬಸ್​ ಅನ್ನು ನಿಲ್ಲಿಸಿದ್ದಾರೆ. ತಕ್ಷಣವೇ ಶಾಲಾ ಆಡಳಿತ ಮಂಡಳಿ ಹಾಗೂ ಆಂಬ್ಯುಲೆನ್ಸ್​ಗೆ ಕರೆ ಮಾಡಿದ್ದಾರೆ.

ಮತ್ತಷ್ಟು ಓದಿ: ಬೆಂಗಳೂರು ಹೊರವಲಯದಲ್ಲಿ ತಡರಾತ್ರಿ 2 ಅಪಘಾತಗಳು, ಒಬ್ಬ ಯುವಕ ಸಾವು

ಬಾಲಕಿಯ ತಲೆಗೆ ಗಂಭೀರವಾದ ಗಾಯಗಳಾಗಿತ್ತು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ. ಆಗಸ್ಟ್​ 17 ರಂದು ಅಂತ್ಯಕ್ರಿಯೆ ನೆರವೇರಿಸಲಾಯಿತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us