Jair Bolsonaro: 10 ದಿನಗಳಿಂದಲೂ ನಿಲ್ಲದ ಬಿಕ್ಕಳಿಕೆ; ಆಸ್ಪತ್ರೆಗೆ ದಾಖಲಾದ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೋನಾರೋ

| Updated By: Lakshmi Hegde

Updated on: Jul 15, 2021 | 6:02 PM

2018ರಲ್ಲಿ ಚುನಾವಣಾ ಪ್ರಚಾರದ ವೇಳೆ ಜೈರ್​ ಬೋಲ್ಸೋನಾರೋ ಚೂರಿ ಇರಿತಕ್ಕೆ ಒಳಗಾಗಿದ್ದರು. ಅದು ಕರುಳಿಗೂ ತಗುಲಿತ್ತು. ಅಂದಿನಿಂದಲೂ ಜೈರ್​ ಆರೋಗ್ಯದ ಬಗ್ಗೆ ಸಹಜವಾಗಿಯೇ ಕಳವಳ ಇದೆ.

Jair Bolsonaro: 10 ದಿನಗಳಿಂದಲೂ ನಿಲ್ಲದ ಬಿಕ್ಕಳಿಕೆ; ಆಸ್ಪತ್ರೆಗೆ ದಾಖಲಾದ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೋನಾರೋ
ಆಸ್ಪತ್ರೆಗೆ ದಾಖಲಾದ ಜೈರ್ ಬೋಲ್ಸೋನಾರೋ
Follow us on

ಬ್ರೆಜಿಲ್​ ಅಧ್ಯಕ್ಷ ಜೈರ್​ ಬೋಲ್ಸೋನಾರೋ (66) ಅವರು ತುರ್ತಾಗಿ ಸರ್ಜರಿಗೆ ಒಳಗಾಗಿರಬೇಕಿರುವ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜೈರ್​ ಅವರಿಗೆ ಕಳೆದ 10 ದಿನಗಳಿಂದಲೂ ಒಂದೇ ಸಮ ಬಿಕ್ಕಳಿಕೆ ಬರುತ್ತಿದ್ದು, ಸದ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಪಾಸಣೆಗಳನ್ನು ಮಾಡಲಾಗಿದ್ದು, ಕರುಳಿಗೆ ಸಂಬಂಧಪಟ್ಟ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವೈದ್ಯಕೀಯ ವರದಿ ಬಂದಿದೆ. ಕೂಡಲೇ ಸರ್ಜರಿ ಆಗಬೇಕಿದೆ.

ಇನ್ನು ಟ್ವೀಟ್ ಮಾಡಿರುವ ಜೈರ್​ ಬೋಲ್ಸೋನಾರೋ, ನಾನು ಆದಷ್ಟು ಶೀಘ್ರವೇ ಹಿಂತಿರುಗುತ್ತೇನೆ ಎಂಬ ನಂಬಿಕೆಯಿದೆ. ಎಲ್ಲವೂ ದೇವರ ಇಚ್ಛೆ ಎಂದು ಹೇಳಿದ್ದಾರೆ. 2018ರಲ್ಲಿ ಚುನಾವಣಾ ಪ್ರಚಾರದ ವೇಳೆ ಜೈರ್​ ಬೋಲ್ಸೋನಾರೋ ಚೂರಿ ಇರಿತಕ್ಕೆ ಒಳಗಾಗಿದ್ದರು. ಅದು ಕರುಳಿಗೂ ತಗುಲಿತ್ತು. ಅಂದಿನಿಂದಲೂ ಜೈರ್​ ಆರೋಗ್ಯದ ಬಗ್ಗೆ ಸಹಜವಾಗಿಯೇ ಕಳವಳ ಇದೆ. ಅಂದು ಜೈರ್​ ಬೋಲ್ಸೋನಾರೋ ತುಂಬ ಗಂಭೀರವಾಗಿ ಗಾಯಗೊಂಡಿದ್ದರು ಮತ್ತು ಅವರ ದೇಹದ ಶೇ.40ರಷ್ಟು ರಕ್ತವನ್ನು ಕಳೆದುಕೊಂಡಿದ್ದರು.

ಅಂದು ಚೂರಿ ಇರಿತಕ್ಕೆ ಒಳಗಾದಾಗಿನಿಂದಲೂ ಹಲವು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ನಿನ್ನೆ ಬುಧವಾರ ಬ್ರೆಸಿಲಿಯಾದಲ್ಲಿರುವ ಮಿಲಿಟರಿ ಆಸ್ಪತ್ರೆಗೆ ತೆರಳಿದ್ದರು. 48 ಗಂಟೆಗಳ ಕಾಲ ಅಬ್ಸರ್ವೇಶನ್​ನಲ್ಲಿರುವಂತೆ ವೈದ್ಯರು ಸೂಚಿಸಿದ್ದರು. ನಂತರ 2018ರಲ್ಲಿ ಜೈರ್​ ಅವರಿಗೆ ಸರ್ಜರಿ ಮಾಡಿದ ವೈದ್ಯರ ಸೂಚನೆ ಮೇರೆಗೆ ಸಾ ಪೌಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊರೊನಾ ಅಲೆ ಶುರುವಾದ ಮೇಲೆ ಜೈರ್​ ಬೋಲ್ಸೋನಾರೋ ಒಟ್ಟು ಮೂರು ಬಾರಿಗೆ ಕೊರೊನಾ ಸೋಂಕಿಗೆ ಒಳಗಾಗಿ, ಯಶಸ್ವಿಯಾಗಿ ಸೋಂಕನ್ನು ಮಣಿಸಿದ್ದರು.

ಇದನ್ನೂ ಓದಿ: ಭಾರತದಿಂದ ಲಸಿಕೆ ಖರೀದಿ ಒಪ್ಪಂದ ರದ್ದುಗೊಳಿಸಿದ ಬ್ರೆಜಿಲ್​​; ಹಗರಣದ ಆರೋಪ ಕೇಳಿಬಂದ ಬೆನ್ನಲ್ಲೇ ಕೊವ್ಯಾಕ್ಸಿನ್​ ಖರೀದಿಗೆ ಹಿಂದೇಟು

Brazil’s President Jair Bolsonaro in hospital Due to chronic hiccups

Published On - 6:01 pm, Thu, 15 July 21