ಬ್ರಿಟಿಷ್ ತೈಲ ಟ್ಯಾಂಕರ್ಗಳನ್ನು ಹೊತ್ತು ಬರುತ್ತಿದ್ದ ಮಾರ್ಲಿನ್ ಲುವಾಂಡಾ (MV Marlin Luanda) ಹಡಗಿನ ಮೇಲೆ ನೆನ್ನೆ ರಾತ್ರಿ (ಜ.26) ಯೆಮೆನ್‌ನ ಹೌತಿ ಬಂಡುಕೋರರು ದಾಳಿಯ ಮಾಡಿದ್ದಾರೆ. ಈ ಹಡಗಿನಲ್ಲಿ 21 ಭಾರತೀಯ ಸಿಬ್ಬಂದಿಗಳು ಹಾಗೂ ಒಬ್ಬ ಬಾಂಗ್ಲಾದೇಶದ ಸಿಬ್ಬಂದಿ ಇದ್ದರು ಎಂದು ಹೇಳಲಾಗಿದೆ. ಮಾರ್ಲಿನ್ ಲುವಾಂಡಾ ಹಡಗು ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಬಗ್ಗೆ ಭಾರತೀಯ ನೌಕದಳಕ್ಕೆ ಕರೆ ಬಂದಿದೆ. ಇದೀಗ ಈ ಕರೆಗೆ ಸ್ಪಂದಿಸಿದ ಭಾರತೀಯ ನೌಕಾಪಡೆಯು (Indian Navy) ತನ್ನ ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕ – INS ವಿಶಾಖಪಟ್ಟಣಂನ್ನು ಏಡೆನ್ ಕೊಲ್ಲಿಯಲ್ಲಿ ನಿಯೋಜಿಸಿದೆ ಎಂದು ಹೇಳಲಾಗಿದೆ.
ದಾಳಿಗೆ ಒಳಾಗಿರುವ ಮಾರ್ಲಿನ್ ಲುವಾಂಡಾ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಎನ್‌ಬಿಸಿಡಿ (Nuclear, Biological and Chemical Defence) ತಂಡವು ಅಗ್ನಿಶಾಮಕ ಸಾಧನಗಳೊಂದಿಗೆ ಮಾರ್ಲಿನ್ ಲುವಾಂಡಾ ಹಡಗಿನತ್ತ ತಲುಪಿದೆ. ಈಗಾಗಲೇ ಬೆಂಕಿಯನ್ನು ಹರಿಸುವ ಕಾರ್ಯಚರಣೆಯನ್ನು ನಡೆಸುತ್ತಿದೆ ಎಂದು ಹೇಳಲಾಗಿದೆ. ಮಾರ್ಲಿನ್ ಲುವಾಂಡಾ ಹಡಗಿನಲ್ಲಿರುವ ಸಿಬ್ಬಂದಿಗಳಿಗೆ ಕ್ಷಿಪಣಿ ವಿಧ್ವಂಸಕ – INS ವಿಶಾಖಪಟ್ಟಣಂ ಸಹಾಯ ಮಾಡುತ್ತಿದೆ ಎಂದು ವರದಿ ಹೇಳಿದೆ.
INS Visakhapatnam, a guided missile destroyer, deployed in the Gulf of Aden responded to a distress call from MV Merlin Luanda on the night of 26 Jan 24. The MV has 22 Indian and 01 Bangladeshi crew onboard: Indian Navy
Based on the request from the MV Merlin Luanda, INS… pic.twitter.com/siwyMUD2r1
— ANI (@ANI) January 27, 2024
ಭಾರತೀಯ ನೌಕಾಪಡೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ರಕ್ಷಣಾ ಕಾರ್ಯಚರಣೆಯನ್ನು ಮುಂದುವರಿಸಿದೆ. ಹಾಗೂ ವ್ಯಾಪಾರಿ ಹಡಗುಗಳನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ ಎಂದು ಯುಎಸ್ ಹೇಳಿದ್ದಾರೆ. ಈ ದಾಳಿಯ ಹೊಣೆಯನ್ನು ಯೆಮೆನ್‌ನ ಹೌತಿ ಬಂಡುಕೋರರು ಹೊತ್ತುಕೊಂಡಿದ್ದಾರೆ. ಇನ್ನು ಈ ದಾಳಿಯನ್ನು ಯೆಮೆನ್‌ನ ಹೌತಿ ಬಂಡುಕೋರರೇ ನಡೆಸಿದ್ದಾರೆ ಎಂದು ಯುನೈಟೆಡ್ ಸ್ಟೇಟ್ಸ್ ದೃಢಪಡಿಸಿದೆ.
ಇದನ್ನೂ ಓದಿ: ಹಿಂದೂ ಮಹಾಸಾಗರದಲ್ಲಿ ಇಸ್ರೇಲ್ ಸರಕು-ಸಾಗಣೆ ಹಡಗಿನ ಮೇಲೆ ಡ್ರೋನ್ ದಾಳಿ
ಜನವರಿ 26 ರಂದು, ಸರಿಸುಮಾರು ರಾತ್ರಿ 7:45 ವೇಳೆ ಇರಾನ್ ಬೆಂಬಲಿತ ಹೌತಿ ಭಯೋತ್ಪಾದಕರು ಮಾರ್ಲಿನ್ ಲುವಾಂಡಾ ಹಡಗನ್ನು ಗುರಿಯಾಗಿಸಿ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ಮಾಡಿದ್ದಾರೆ. ಈ ಬಗ್ಗೆ US ಸೆಂಟ್ರಲ್ ಕಮಾಂಡ್ ಎಕ್ಸ್ನಲ್ಲಿ ಹಂಚಿಕೊಂಡಿದೆ. ದಾಳಿಗೆ ಒಳಗಾಗಿರುವ ಮಾರ್ಲಿನ್ ಲುವಾಂಡಾ ಹಡಗಿನ ಸಹಾಯಕ್ಕೆ USS ಕಾರ್ನಿ (DDG 64) ಮತ್ತು ಇತರ ಹಡಗುಗಳು ಧಾವಿಸಿದೆ. ಇತ್ತೀಚಿನ ದಿನಗಳಲ್ಲಿ ಹಡಗುಗಳ ಮೇಲೆ ದಾಳಿಗಳು ಹೆಚ್ಚಾಗುತ್ತಿದೆ ಎಂದು ಯುಎಸ್ ವರದಿಯನ್ನು ಮಾಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ