ನವದೆಹಲಿ: ಕೆಲವು ದೇಶಗಳಲ್ಲಿ ಬುರ್ಖಾ (Burqa) ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ತಿರುಗಾಡುವಂತಿಲ್ಲ ಎಂಬ ನಿಯಮವಿದೆ. ಇನ್ನು ಕೆಲವು ದೇಶಗಳಲ್ಲಿ ಬುರ್ಖಾ ಧರಿಸಲು ಅವಕಾಶವೇ ಇಲ್ಲ. ಇದೀಗ ಸ್ವಿಜರ್ಲೆಂಡ್ ಸರ್ಕಾರ “ಬುರ್ಖಾ ನಿಷೇಧ”ವನ್ನು ಜಾರಿಗೊಳಿಸುವ ಪ್ರಯತ್ನಕ್ಕೆ ಮುಂದಾಗಿದ್ದು, ಸ್ವಿಸ್ ಸರ್ಕಾರವು ಸಂಸತ್ತಿಗೆ ಈ ಕುರಿತ ಕರಡು ಪ್ರತಿಯನ್ನು ಸಲ್ಲಿಸಿದೆ. ಆ ಕರಡಿನ ಪ್ರಕಾರ, ಸ್ವಿಜರ್ಲೆಂಡ್ನಲ್ಲಿ ಬುರ್ಖಾದ ಮೇಲಿನ ನಿಷೇಧವನ್ನು ಉಲ್ಲಂಘಿಸುವವರಿಗೆ ಭಾರತೀಯ ಮೌಲ್ಯದ ಪ್ರಕಾರ ಸುಮಾರು 83,000 ರೂ.ವರೆಗೆ ದಂಡವನ್ನು ವಿಧಿಸಲಾಗುತ್ತದೆ.
ಈ ಕರಡು ಕಾನೂನಿಗೆ 51.2% ಮತದಾರರು ಪ್ರಸ್ತಾವಿತ ನಿಷೇಧವನ್ನು ಅನುಮೋದಿಸಿದರೂ, ಅದು ಇಸ್ಲಾಮೋಫೋಬಿಕ್ ಮತ್ತು ಸ್ತ್ರೀದ್ವೇಷ ಎಂದು ಆ ಸಮಯದಲ್ಲಿ ಟೀಕಿಸಲಾಗಿತ್ತು. ಬಲಪಂಥೀಯ ಸ್ವಿಸ್ ಪೀಪಲ್ಸ್ ಪಾರ್ಟಿ ಸದಸ್ಯರು ಎಗರ್‌ಕಿಂಗರ್ ಸಮಿತಿಯನ್ನು ರಚಿಸಿದ್ದಾರೆ.
ಇದನ್ನೂ ಓದಿ: Shocking News: ಬುರ್ಖಾ ಧರಿಸಲಿಲ್ಲ ಎಂದು ಹಿಂದೂ ಹೆಂಡತಿಯ ಕತ್ತು ಸೀಳಿ ಕೊಂದ ಗಂಡ!
ನಿಷೇಧವನ್ನು ಬೆಂಬಲಿಸಿದವರು ಬುರ್ಖಾವನ್ನು ರಾಜಕೀಯ ಇಸ್ಲಾಂನ ತೀವ್ರತೆಯ ಸಂಕೇತವೆಂದು ವಿವರಿಸಿದ್ದಾರೆ. ಮುಸ್ಲಿಂ ಸಂಘಟನೆಗಳು ಇದನ್ನು ಜನಾಂಗೀಯ ದ್ವೇಷ ಎಂದು ಟೀಕಿಸಿದ್ದಾರೆ. ಅಲ್ಲದೆ, ಈ ಕುರಿತು ಕಾನೂನು ಕ್ರಮದ ಮೊರೆ ಹೋಗುವುದಾಗಿ ತಿಳಿಸಿದ್ದಾರೆ. ಸ್ವಿಜರ್ಲೆಂಡ್‌ನಲ್ಲಿರುವ ಶೇ. 5ರಷ್ಟು ಮುಸ್ಲಿಂ ಜನರು ಬಹುಪಾಲು ಟರ್ಕಿ, ಬೋಸ್ನಿಯಾ ಮತ್ತು ಕೊಸೊವೊದಿಂದ ಬಂದವರಾಗಿದ್ದಾರೆ.
ಈ ಕರಡು ಹಲವಾರು ಕಾನೂನು ವಿನಾಯಿತಿಗಳನ್ನು ಸಹ ಒಳಗೊಂಡಿದೆ. ವಿಮಾನಗಳು, ರಾಜತಾಂತ್ರಿಕ ಸ್ಥಳಗಳು ಮತ್ತು ಧಾರ್ಮಿಕ ಸ್ಥಳಗಳಲ್ಲಿ ಬುರ್ಖಾ ನಿಷೇಧಕ್ಕೆ ವಿನಾಯಿತಿ ನೀಡಲಾಗಿದೆ. ಆರೋಗ್ಯ, ಸುರಕ್ಷತೆ, ಹವಾಮಾನ ಮತ್ತು ಪ್ರಾದೇಶಿಕ ಪದ್ಧತಿಗಳಿಗೆ ಸಂಬಂಧಿಸಿದ ವ್ಯಾಪ್ತಿಗಳಲ್ಲಿ ಕೂಡ ಬುರ್ಖಾ ಧರಿಸಲು ಅನುಮತಿಯಿದೆ.
Published On - 1:03 pm, Fri, 14 October 22