Shocking News: ಪ್ರೇಯಸಿಯನ್ನು ಭೇಟಿಯಾಗಲು ಬುರ್ಖಾ ಧರಿಸಿ ಹೋಗಿ ಸಿಕ್ಕಿಬಿದ್ದ ಪ್ರೇಮಿ
ಹೊಸ ಉದ್ಯೋಗಕ್ಕೆ ಹೊರಡುವ ಮೊದಲು ಸೈಫ್ ಅಲಿ ತನ್ನ ಪ್ರೇಯಸಿಯನ್ನು ನೋಡಲು ಬಯಸಿದ್ದ. ಆದರೆ, ಆ ಊರಿನವರು ತನ್ನನ್ನು ಗುರುತು ಹಿಡಿಯಬಹುದು ಎಂಬ ಭಯದಿಂದ ಆತ ಬುರ್ಖಾ ಧರಿಸಿ ತನ್ನ ಗೆಳತಿಯನ್ನು ಭೇಟಿ ಮಾಡಲು ಹೋಗಿದ್ದ.
ನವದೆಹಲಿ: ಇತ್ತೀಚೆಗಷ್ಟೇ ತನ್ನ ಪ್ರೇಯಸಿಯನ್ನು ಭೇಟಿಯಾಗಲು ಲೈನ್ಮ್ಯಾನ್ ಒಬ್ಬ ಇಡೀ ಊರಿನಲ್ಲಿ ಕರೆಂಟ್ ಲೈನ್ ಸಂಪರ್ಕ ಕಟ್ ಕಡಿತಗೊಳಿಸುತ್ತಿದ್ದ ಎಂಬ ವಿಷಯ ಬಯಲಾಗಿತ್ತು. ಅದರ ಬೆನ್ನಲ್ಲೇ ಪ್ರಿಯಕರನೊಬ್ಬ ತನ್ನ ಪ್ರೇಯಸಿಯನ್ನು ಭೇಟಿಯಾಗಲು ತನ್ನ ಗುರುತನ್ನು ಮರೆಮಾಚಲು ಬುರ್ಖಾ (Burqa) ಧರಿಸಿ ಹೋಗಿದ್ದ. ಆದರೆ, ಬುರ್ಖಾ ಧರಿಸಿ ಹೋಗಿದ್ದ ಆ 25 ವರ್ಷದ ಯುವಕನನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಶಹಜಹಾನ್‌ಪುರದ ಸೈಫ್ ಅಲಿ ಎಂಬಾತ ಬುರ್ಖಾ ಧರಿಸಿ, ತನ್ನ ಪ್ರೇಯಸಿಯನ್ನು ನೋಡಲು ಹೋಗಿದ್ದ. ಆದರೆ, ಶಾಂತಿ ಭಂಗದ ಆರೋಪದಡಿ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೊಸ ಉದ್ಯೋಗಕ್ಕೆ ಹೊರಡುವ ಮೊದಲು ಸೈಫ್ ಅಲಿ ತನ್ನ ಗೆಳತಿಯನ್ನು ಕೊನೆಯ ಬಾರಿಗೆ ಮೊಹಮದ್‌ಪುರ ಗ್ರಾಮದಲ್ಲಿ ನೋಡಲು ಬಯಸಿದ್ದ. ಆದರೆ ಆ ಪ್ರದೇಶದಲ್ಲಿ ಆತನಿಗೆ ಪರಿಚಿತ ವ್ಯಕ್ತಿಗಳು ಬಹಳ ಜನ ಇದ್ದುದರಿಂದ ಆತನಿಗೆ ಆಕೆಯನ್ನು ಖಾಸಗಿಯಾಗಿ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಆ ಊರಿನವರು ತನ್ನನ್ನು ಗುರುತು ಹಿಡಿಯಬಹುದು ಎಂಬ ಭಯದಿಂದ ಆತ ತನ್ನ ಗುರುತನ್ನು ಮರೆಮಾಚಲು ಬುರ್ಖಾವನ್ನು ಧರಿಸಿ ತನ್ನ ಗೆಳತಿಯನ್ನು ಭೇಟಿ ಮಾಡಲು ಹೋಗಿದ್ದ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಸಂಜೀವ್ ಬಾಜ್ಪೈ ಹೇಳಿದ್ದಾರೆ.
ಇದನ್ನೂ ಓದಿ: Viral Video: ಸ್ವಾತಂತ್ರ್ಯೋತ್ಸವದ ವೇಳೆ ನಾಗಿಣಿ ಡ್ಯಾನ್ಸ್ ಮಾಡಿದ ಪೊಲೀಸರ ವಿಡಿಯೋ ವೈರಲ್; ಆಮೇಲೇನಾಯ್ತು?
ಆದರೆ, ಬುರ್ಖಾ ಧರಿಸಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆತನನ್ನು ನೋಡಿದ ಜನರು ಬುರ್ಖಾ ತೆಗೆದು ಮುಖ ತೋರಿಸಲು ಕೇಳಿದರು. ಅದಕ್ಕೆ ಆತ ಒಪ್ಪದಿದ್ದಾಗ ಅನುಮಾನಗೊಂಡ ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದರು. ಗ್ರಾಮಸ್ಥರ ದೂರಿಗೆ ಸ್ಪಂದಿಸಿದ ಪೊಲೀಸರು ಆ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಆ ದಂಪತಿಗಳು 4 ವರ್ಷಗಳಿಂದ ಸಂಬಂಧದಲ್ಲಿದ್ದರು. ಆಕೆ ತನ್ನನ್ನು ಭೇಟಿಯಾಗಲು ಬುರ್ಖಾ ಧರಿಸಿ ಬರಲು ತನ್ನ ಪ್ರಿಯಕರನಿಗೆ ಸಲಹೆ ನೀಡಿದ್ದಳು. ಆಕೆಯ ಸಲಹೆಯಂತೆ ಬುರ್ಖಾ ಧರಿಸಿ ಹೋದವನು ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದಾನೆ.