AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: ಕಪಿಚೇಷ್ಟೆಯಿಂದ ಕಂಗಾಲು; ಎಮರ್ಜೆನ್ಸಿ ಕಾಲ್ ಬಂತೆಂದು ಝೂಗೆ ಓಡೋಡಿ ಬಂದ ಪೊಲೀಸರಿಗೆ ಶಾಕ್!

ಅಮೆರಿಕಾದ ಸ್ಯಾನ್ ಲೂಯಿಸ್ ಒಬಿಸ್ಪೊ ಕೌಂಟಿ ಶೆರಿಫ್ ಕಚೇರಿಗೆ ಕಳೆದ ಶನಿವಾರ ರಾತ್ರಿ ತುರ್ತು ಕರೆ ಬಂದಿತ್ತು. ಆ ಫೋನ್ ಕರೆಯನ್ನು ಸ್ವೀಕರಿಸುವಷ್ಟರಲ್ಲಿ ಕರೆಯ ಸಂಪರ್ಕ ಕಡಿತಗೊಂಡಿತ್ತು.

Shocking News: ಕಪಿಚೇಷ್ಟೆಯಿಂದ ಕಂಗಾಲು; ಎಮರ್ಜೆನ್ಸಿ ಕಾಲ್ ಬಂತೆಂದು ಝೂಗೆ ಓಡೋಡಿ ಬಂದ ಪೊಲೀಸರಿಗೆ ಶಾಕ್!
ಕೋತಿImage Credit source: Live Mint
TV9 Web
| Edited By: |

Updated on:Aug 18, 2022 | 6:18 PM

Share

ಕ್ಯಾಲಿಫೋರ್ನಿಯಾ: ಮಂಗನಿಂದಲೇ ಮಾನವ ಎಂಬುದು ಈಗಾಗಲೇ ಸಾಬೀತಾಗಿರುವ ವಿಚಾರ. ಕೋತಿಗಳು ಸಾಮಾನ್ಯವಾಗಿ ಮನುಷ್ಯರ ವರ್ತನೆಯನ್ನು ಅನುಕರಿಸುತ್ತವೆ. ಕೋತಿಗಳು ಎಲ್ಲವನ್ನೂ ವೇಗವಾಗಿ ಕಲಿಯುತ್ತವೆ ಮತ್ತು ಮನುಷ್ಯರನ್ನು ಗಮನಿಸುವುದರ ಮೂಲಕ ಅನೇಕ ವಿಷಯಗಳ ಬಗ್ಗೆ ತಿಳಿದುಕೊಳ್ಳುತ್ತವೆ. ಕೋತಿ ಆಕಸ್ಮಿಕವಾಗಿ 911 ನಂಬರ್​ಗೆ ಕರೆ ಮಾಡಿತ್ತು. ಆಗ ಪೊಲೀಸರು ಝೂನಿಂದ ಎಮರ್ಜೆನ್ಸಿ ನಂಬರ್​ಗೆ ಫೋನ್ ಬಂದಿದೆ ಎಂದು ಝೂನತ್ತ ಓಡಿಬಂದರು. ಆಗ ಇದೆಲ್ಲ ಕೋತಿಯ ತರಲೆ ಕೆಲಸ ಎಂಬುದು ತಿಳಿದು ಪೊಲೀಸರು ಶಾಕ್ ಆಗಿದ್ದಾರೆ.

ಅಮೆರಿಕಾದ ಸ್ಯಾನ್ ಲೂಯಿಸ್ ಒಬಿಸ್ಪೊ ಕೌಂಟಿ ಶೆರಿಫ್ ಕಚೇರಿಗೆ ಕಳೆದ ಶನಿವಾರ ರಾತ್ರಿ ತುರ್ತು ಕರೆ ಬಂದಿತ್ತು. ಆ ಫೋನ್ ಕರೆಯನ್ನು ಸ್ವೀಕರಿಸುವಷ್ಟರಲ್ಲಿ ಕರೆಯ ಸಂಪರ್ಕ ಕಡಿತಗೊಂಡಿತ್ತು. ಪೊಲೀಸರು ಮತ್ತೆ ಕರೆ ಮಾಡಲು ಮತ್ತು ಸಂದೇಶ ಕಳುಹಿಸಲು ಪ್ರಯತ್ನಿಸಿದರೂ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹೀಗಾಗಿ, ಆ ಸ್ಥಳಕ್ಕೆ ಪೊಲೀಸ್ ತಂಡವನ್ನು ಕಳುಹಿಸಲಾಗಿತ್ತು.

ಇದನ್ನೂ ಓದಿ: Viral Video: ಸ್ವಾತಂತ್ರ್ಯೋತ್ಸವದ ವೇಳೆ ನಾಗಿಣಿ ಡ್ಯಾನ್ಸ್​ ಮಾಡಿದ ಪೊಲೀಸರ ವಿಡಿಯೋ ವೈರಲ್; ಆಮೇಲೇನಾಯ್ತು?

ವಿಳಾಸವು ಪಾಸೊ ರೋಬಲ್ಸ್ ಝೂ ಬಳಿ ತೋರಿಸಿತು. ಆದರೆ ಅಲ್ಲಿ ಯಾರೂ ಕರೆ ಮಾಡಲಿಲ್ಲ ಎಂದು ಅಲ್ಲಿನ ಸಿಬ್ಬಂದಿ ಹೇಳಿದರು. ಆಗ ಅಲ್ಲಿನ ಸಿಬ್ಬಂದಿ ರೂಟ್ ಎಂಬ ಹೆಸರಿನ ಕ್ಯಾಪುಚಿನ್ ಕೋತಿಯು ಗಾಲ್ಫ್ ಕಾರ್ಟ್‌ನಲ್ಲಿದ್ದ ಮೃಗಾಲಯದ ಸೆಲ್‌ಫೋನ್ ಹಿಡಿದುಕೊಂಡಿತ್ತು ಎಂಬ ವಿಷಯವನ್ನು ಹೇಳಿದರು. ಹೀಗಾಗಿ, ಆ ತುಂಟ ಕೋತಿಯೇ ಈ ಕೆಲಸ ಮಾಡಿದ್ದೆಂಬುದು ಪೊಲೀಸರಿಗೆ ಖಾತರಿಯಾಯಿತು.

ಕ್ಯಾಪುಚಿನ್ ಕೋತಿಗಳು ಬಹಳ ಚುರುಕಾಗಿರುತ್ತವೆ. ಅವು ಏನನ್ನಾದರೂ ಪಡೆದುಕೊಳ್ಳಲು ಸಿದ್ಧವಿರುತ್ತವೆ. ಆ ಕೋತಿ ತಾನೇ ಫೋನ್ ನಂಬರ್ ಡಯಲ್ ಮಾಡಲು ಪ್ರಾರಂಭಿಸಿತ್ತು ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಇದುವರೆಗೂ ಆ ಕೋತಿ ಈ ರೀತಿಯ ಸಾಕಷ್ಟು ತರಲೆಗಳನ್ನು ಮಾಡಿದೆ ಎಂದು ಮೃಗಾಲಯದ ಸಿಬ್ಬಂದಿ ಹೇಳಿದ್ದಾರೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:17 pm, Thu, 18 August 22

Follow Us
TV9 Web
TV9 Web

TV9 Kannada

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ