ಸ್ಫೋಟಕ ಸಾಧನಕ್ಕೆ ಡಿಕ್ಕಿ ಹೊಡೆದ ಬಸ್‌, ಜಿಹಾದಿ ಭಯೋತ್ಪಾದಕ ಕೃತ್ಯಕ್ಕೆ 11 ಜನ ಬಲಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 14, 2022 | 10:44 AM

ಮಧ್ಯ ಮಾಲಿಯಲ್ಲಿ ಬಸ್‌ನಲ್ಲಿ ಸಂಭವಿಸಿದ ಸ್ಫೋಟದಲ್ಲಿ 11 ಜನರು ಸಾವನ್ನಪ್ಪಿದ್ದಾರೆ ಮತ್ತು 53 ಜನರು ಗಾಯಗೊಂಡಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಸ್ಫೋಟಕ ಸಾಧನಕ್ಕೆ ಡಿಕ್ಕಿ ಹೊಡೆದ ಬಸ್‌, ಜಿಹಾದಿ ಭಯೋತ್ಪಾದಕ ಕೃತ್ಯಕ್ಕೆ 11 ಜನ ಬಲಿ
Follow us on

ಮಾಲಿ: ಮಧ್ಯ ಮಾಲಿಯಲ್ಲಿ ಬಸ್‌ನಲ್ಲಿ ಸಂಭವಿಸಿದ ಸ್ಫೋಟದಲ್ಲಿ 11 ಜನರು ಸಾವನ್ನಪ್ಪಿದ್ದಾರೆ ಮತ್ತು 53 ಜನರು ಗಾಯಗೊಂಡಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಬಂಡಿಯಾಗರಾ ಮತ್ತು ಗೌಂಡಕ ನಡುವಿನ ರಸ್ತೆಯಲ್ಲಿ ಮೋಪ್ತಿ ಪ್ರದೇಶದಲ್ಲಿ ಮಧ್ಯಾಹ್ನದ ವೇಳೆಗೆ ಬಸ್ಸು ಸ್ಫೋಟಕ ಸಾಧನಕ್ಕೆ ಡಿಕ್ಕಿ ಹೊಡೆದಿದೆ ಎಂದು ಭದ್ರತಾ ಮೂಲಗಳು ತಿಳಿಸಿವೆ. ಈ ಪ್ರದೇಶವು ಜಿಹಾದಿ ಹಿಂಸಾಚಾರದ ಕೇಂದ್ರವಾಗಿದೆ.

ಇದನ್ನು ಓದಿ: ಉಕ್ರೇನ್ ನ್ಯಾಟೋಗೆ ಸೇರ್ಪಡೆಯಾದರೆ 3ನೇ ಮಹಾಯುದ್ಧ ಖಚಿತ; ರಷ್ಯಾ ಎಚ್ಚರಿಕೆ

ಇದಕ್ಕೂ ಮೊದಲು, ಪೊಲೀಸರು ಮತ್ತು ಸ್ಥಳೀಯ ಮೂಲಗಳು ಪ್ರಕಾರ 10 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಂಭೀರವಾಗಿ ಗಾಯಗೊಂಡರು ಎಂದು ವರದಿ ಮಾಡಲಾಗಿತ್ತು.

ನಾವು 9 ಜನರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲು ಮಾಡಿದ್ದೇವೆ, ಇನ್ನೂ ಕಾರ್ಯಚರಣೆ ನಡೆಯುತ್ತಿದೆ. ಸ್ಥಳೀಯ ಬಂಡಿಯಾಗರಾ ಯೂತ್ ಅಸೋಸಿಯೇಶನ್‌ನ ಮೌಸಾ ಹೌಸೇನಿ ಹೇಳಿದರು.

ಮಾಲಿಯು ಜಿಹಾದಿಗಳ ಇಂತಹ ಕೃತ್ಯದಲ್ಲಿ ಪ್ರತಿದಿನ ಹೋರಾಡುತ್ತಿದೆ, ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ ಮತ್ತು ಲಕ್ಷಾಂತರ ಜನರ ಮನೆಗಳನ್ನು ವಶಪಡಿಸಿದಕೊಂಡು, ಜಿಹಾದಿ ವಿಚಾರಗಳಿಗೆ ಬಳಸಿಕೊಳ್ಳುತ್ತಿದೆ.

ಗಣಿ ಮತ್ತು ಸುಧಾರಿತ ಸ್ಫೋಟಕ ಸಾಧನಗಳು (IEDs) ಜಿಹಾದಿಗಳಿಗೆ ಸಂಬಂಧಿಸಿರುವುದು. ಈ ಸ್ಫೋಟ ಕೂಡ ಅವರ ಕೃತ್ಯ ಎಂದು ಹೇಳಿದ್ದಾರೆ. ಮಾಲಿ ಮಿನುಸ್ಮಾದಲ್ಲಿ ಯುಎನ್ ಮಿಷನ್ ವರದಿಯು ಆಗಸ್ಟ್ 31 ರ ಹೊತ್ತಿಗೆ ಗಣಿಗಳು ಮತ್ತು ಐಇಡಿಗಳು 72 ಜನರ ಸಾವುಗಳಿಗೆ ಕಾರಣವಾಗಿದ್ದಾರೆ. ಈ ಘಟನೆಯಲ್ಲಿ ಹೆಚ್ಚಿನವರು ಸೈನಿಕರು ಮತ್ತು ನಾಗರಿಕರು ಎಂದು ಹೇಳಿದ್ದಾರೆ.

 

Published On - 10:44 am, Fri, 14 October 22