ಇಷ್ಟೊಂದು ಕಟುಕ ರಾಷ್ಟ್ರವಾಯಿತೇ ಆಸ್ಟ್ರೇಲಿಯಾ? ಒಂಟೆಗೆ ಡುಬ್ಬವೇ ಮುಳುವಾಯಿತೇ!

ಇಷ್ಟೊಂದು ಕಟುಕ ರಾಷ್ಟ್ರವಾಯಿತೇ ಆಸ್ಟ್ರೇಲಿಯಾ? ಒಂಟೆಗೆ ಡುಬ್ಬವೇ ಮುಳುವಾಯಿತೇ!

ಕ್ಯಾನ್ಬೆರಾ: ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚು ಆಗಾಧವಾಗಿ ಕಾಡುತ್ತಿದೆ. ಆದ್ರೆ ಹಾಗಂತ ಅಲ್ಲಿನ ಸರ್ಕಾರ ಮತ್ತು ಜನ ಮಾನವೀಯತೆಯನ್ನೇ ಮರೆತು ಕ್ರೂರಿಗಳಾಗಿಬಿಟ್ಟರಾ? ಎಂಬ ಆತಂಕ ಕಾಡತೊಡಗಿದೆ. ನೋಡಿ ಒಂದು ಒಂಟೆ ಸಾಮಾನ್ಯವಾಗಿ 200 ಲೀಟರ್ ನೀರನ್ನು ಕುಡಿದು, ತನ್ನ ಡುಬ್ಬದಲ್ಲಿ ಶೇಖರಿಸಿಟ್ಟುಕೊಳ್ಳುವ ದೈಹಿಕ ಸಾಮರ್ಥ್ಯ ಹೊಂದಿರುತ್ತದೆ. ಆದ್ರೆ ಅದುವೇ ಈಗ ಒಂಟೆಗೆ ಮುಳುವಾಗುತ್ತಿದೆ. ಕಾಡ್ಗಿಚ್ಚು, ಬರದ ಸುಳಿಯಲ್ಲಿ ಆಸ್ಟ್ರೇಲಿಯಾದಲ್ಲಿ 10 ಸಾವಿರ ಒಂಟೆಗಳ ಮಾರಣಹೋಮ ಏನಾಗಿದೆಯೆಂದ್ರೆ ಆಸ್ಟ್ರೇಲಿಯಾದಲ್ಲಿ ಸರಿಸುಮಾರು 10 ಸಾವಿರ ಒಂಟೆಗಳಿವೆ. ಆದ್ರೆ ಅಲ್ಲಿ ಒಂದು ಹನಿ ನೀರಿಗೂ […]

sadhu srinath

|

Jan 09, 2020 | 11:28 AM

ಕ್ಯಾನ್ಬೆರಾ: ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚು ಆಗಾಧವಾಗಿ ಕಾಡುತ್ತಿದೆ. ಆದ್ರೆ ಹಾಗಂತ ಅಲ್ಲಿನ ಸರ್ಕಾರ ಮತ್ತು ಜನ ಮಾನವೀಯತೆಯನ್ನೇ ಮರೆತು ಕ್ರೂರಿಗಳಾಗಿಬಿಟ್ಟರಾ? ಎಂಬ ಆತಂಕ ಕಾಡತೊಡಗಿದೆ. ನೋಡಿ ಒಂದು ಒಂಟೆ ಸಾಮಾನ್ಯವಾಗಿ 200 ಲೀಟರ್ ನೀರನ್ನು ಕುಡಿದು, ತನ್ನ ಡುಬ್ಬದಲ್ಲಿ ಶೇಖರಿಸಿಟ್ಟುಕೊಳ್ಳುವ ದೈಹಿಕ ಸಾಮರ್ಥ್ಯ ಹೊಂದಿರುತ್ತದೆ. ಆದ್ರೆ ಅದುವೇ ಈಗ ಒಂಟೆಗೆ ಮುಳುವಾಗುತ್ತಿದೆ.

ಕಾಡ್ಗಿಚ್ಚು, ಬರದ ಸುಳಿಯಲ್ಲಿ ಆಸ್ಟ್ರೇಲಿಯಾದಲ್ಲಿ 10 ಸಾವಿರ ಒಂಟೆಗಳ ಮಾರಣಹೋಮ ಏನಾಗಿದೆಯೆಂದ್ರೆ ಆಸ್ಟ್ರೇಲಿಯಾದಲ್ಲಿ ಸರಿಸುಮಾರು 10 ಸಾವಿರ ಒಂಟೆಗಳಿವೆ. ಆದ್ರೆ ಅಲ್ಲಿ ಒಂದು ಹನಿ ನೀರಿಗೂ ತತ್ವಾರ ತಲೆದೋರಿದೆ. ಒಂದು ಕಡೆ ಅಪಾರ ಕಾಡಿಗೆ ಕಿಚ್ಚು ಬಿದ್ದಿದೆ, ಮತ್ತೊಂದು ಕಡೆ ಆಸ್ಟ್ರೇಲಿಯಾದ ಅನೇಕ ಭಾಗಗಳಲ್ಲಿ ತೀವ್ರ ಬರ ಎದುರಾಗಿದೆ. ಒಟ್ಟಿನಲ್ಲಿ ಚಿಕ್ಕ ಹನಿ ನೀರಿಗೂ ಮನುಷ್ಯರೇ ಬಾಯಿಬಿಡುವಂತಾಗಿದೆ. ಪರಿಸ್ಥಿತಿ ಹೀಗಿರುವಾಗ ಒಂದೊಂಟೆಗೆ 200 ಲೀಟರ್ ನೀರು ಬೇಕೆಂದ್ರೆ ​10 ಸಾವಿರ ಒಂಟೆಗಳಿಗೆ ಇನ್ನೆಷ್ಟು ನೀರು ಬೇಕಾದೀತು? ಹಾಗೆಂದೇ ಆಸ್ಟ್ರೇಲಿಯಾದಲ್ಲಿ ಅಷ್ಟೂ ಒಂಟೆಗಳನ್ನು ಸಾಯಿಸುವಂತಹ ಅಮಾನವೀಯ ನಿರ್ಧಾರಕ್ಕೆ ಬರಲಾಗಿದೆ.

ಕಾಡ್ಗಿಚ್ಚಿಗೆ ಕಂಗೆಟ್ಟ ಆಸ್ಟ್ರೇಲಿಯಾ 10 ಸಾವಿರ ಒಂಟೆಗಳನ್ನು ಕೊಲ್ಲಲು ಮುಂದಾಗಿದೆ. ಕಾಡ್ಗಿಚ್ಚಿನಿಂದ ಬೇಸತ್ತು, ಇಂತಹ ನಿರ್ಧಾರಕ್ಕೆ ಕೈ ಹಾಕಿದೆ. ಒಂಟೆಗಳು ಹೆಚ್ಚು ನೀರು ಕುಡಿಯುವುದರಿಂದ ಆಸ್ಟ್ರೇಲಿಯಾ ಸರ್ಕಾರ ನೀರನ್ನು ಸಂರಕ್ಷಿಸುವ ಸಲುವಾಗಿ ಒಂಟೆಗಳ ಮಾರಣಹೋಮಕ್ಕೆ ಮುಂದಾಗಿದೆ.

ಈಗಾಗಲೇ ನಿನ್ನೆಯಿಂದ ಒಂಟೆ ಕೊಲ್ಲುವ ಕಾರ್ಯಾಚರಣೆ ಆರಂಭವಾಗಿದೆ. ಹೆಲಿಕಾಪ್ಟರ್​ ಮೂಲಕ ಶೂಟರ್​ಗಳನ್ನು ಕಳುಹಿಸಿಕೊಟ್ಟಿದೆ. ಐದು ದಿನದಲ್ಲಿ 10 ಸಾವಿರ ಒಂಟೆಗಳ ಮಾರಣಹೋಮಕ್ಕೆ ನಿರ್ಧಾರ ಮಾಡಿದೆ. ಕಾಡ್ಗಿಚ್ಚಿನಿಂದ ಒಂಟೆಗಳು ಜನವಸತಿ ಪ್ರದೇಶದ ಕಡೆ ಹೋಗುತ್ತಿವೆ.

 ಒಂಟೆಗಳು ಹೆಚ್ಚು ನೀರು ಕುಡಿಯುವುದರಿಂದ ನೀರಿನ ಅಭಾವ ಆಗುತ್ತೆ. ಬುಡಕಟ್ಟು ನಿವಾಸಿಗಳಿಗೆ ಒಂಟೆಗಳಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಹೀಗಾಗಿ ಒಂಟೆಗಳನ್ನು ಕೊಲ್ಲಲು ಆಸ್ಟ್ರೇಲಿಯಾ ಸರ್ಕಾರ ನಿರ್ಧಾರಿಸಿದೆ. ಈಗಾಗಲೇ ಕಾಡ್ಗಿಚ್ಚಿನಿಂದ ಅನೇಕ ವನ್ಯಜೀವಿಗಳ ಮಾರಣಹೋಮವಾಗಿದೆ. ಅದರಲ್ಲಿ ಸರ್ಕಾರವೇ ಮತ್ತಷ್ಟು ವನ್ಯಜೀವಿಗಳನ್ನು ಸಾಯಿಸುವಂತ ದುರ್ಭರ ಪರಿಸ್ಥಿತಿ ಬಂದಿದೆ.

Follow us on

Related Stories

Most Read Stories

Click on your DTH Provider to Add TV9 Kannada