
ಮೆಲ್ಬೋರ್ನ್, ಜನವರಿ 20: ಆಸ್ಟ್ರೇಲಿಯಾದ ಪ್ರಸಿದ್ಧ ಕಡಲತೀರದಲ್ಲಿ 19 ವರ್ಷದ ಕೆನಡಾ ಯುವತಿಯ ರಕ್ತಸಿಕ್ತವಾದ ದೇಹ ಪತ್ತೆಯಾಗಿದ್ದು, ಡಿಂಗೊ( Dingo)( ಆಸ್ಟ್ರೇಲಿಯಾದ ಕಾಡು ನಾಯಿ) ದಾಳಿಗೆ ಬಲಿಯಾಗಿದ್ದಾರಾ ಎನ್ನುವ ಆತಂಕ ಉಂಟಾಗಿದೆ. ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಕಗರಿಯಾ ಪೂರ್ವ ಕರಾವಳಿಯಲ್ಲಿರುವ ಕಡಲತೀರದಲ್ಲಿ ಮಹೇನೋ ಹಡಗಿನ ಬಳಿ ಸೋಮವಾರ ಬೆಳಗ್ಗೆ ಯುವತಿಯ ಶವ ಪತ್ತೆಯಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಆ ಯುವತಿ ಬೆಳಗ್ಗೆ 5 ಗಂಟೆ ಸುಮಾರಿಗೆ ಈಜಲು ಹೋಗುತ್ತಿರುವುದಾಗಿ ತನ್ನ ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ತಿಳಿಸಿದ್ದಳು. ಸುಮಾರು 95 ನಿಮಿಷಗಳ ನಂತರ ಬೆಳಗ್ಗೆ 6.35 ಕ್ಕೆ ಆಕೆಯ ಶವ ಪತ್ತೆಯಾಗಿದೆ ಎಂದು ಪೊಲೀಸರಿಗೆ ತಿಳಿಸಲಾಯಿತು. ವರದಿಗಳ ಪ್ರಕಾರ, ತಮ್ಮ ಎಸ್‌ಯುವಿಯಲ್ಲಿ ಬೀಚ್‌ನಲ್ಲಿ ಹೋಗುತ್ತಿದ್ದ ಇಬ್ಬರು ಯುವಕರು ಯುವಕರು ಶವವನ್ನು ಸುತ್ತುವರೆದಿರುವ ಸುಮಾರು 10 ಡಿಂಗೊಗಳನ್ನು ನೋಡಿದ್ದಾರೆ.
ಪೊಲೀಸ್ ಇನ್ಸ್‌ಪೆಕ್ಟರ್ ಪಾಲ್ ಅಲ್ಗಿ, ಆಕೆಯ ದೇಹದ ಮೇಲೆ ಡಿಂಗೊಗಳು ಹಲ್ಲೆ ನಡೆಸಿರುವ ಉಗುರಿನ ಗುರುತುಗಳಿವೆ. ಆದರೆ ಸಾವಿನ ನಿಖರವಾದ ಕಾರಣವನ್ನು ಪತ್ತೆ ಹಚ್ಚಲು ಅವರಿಗಿನ್ನು ಸಾಧ್ಯವಾಗಿಲ್ಲ.
ಮತ್ತಷ್ಟು ಓದಿ: ಪ್ರತಿ ದಿನ 100 ಜೀವಂತ ಕೀಟಗಳನ್ನು ತಿನ್ನುವ ವ್ಯಕ್ತಿ, ಕಾರಣವೇನು ಗೊತ್ತೇ?
ಯುವತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆಯೇ ಅಥವಾ ಡಿಂಗೊ ದಾಳಿಯಲ್ಲಿ ಸಾವನ್ನಪ್ಪಿದ್ದಾರೆಯೇ ಎಂಬುದನ್ನು ನಾವು ಇನ್ನೂ ದೃಢೀಕರಿಸಲು ಸಾಧ್ಯವಿಲ್ಲ. ಮರಣೋತ್ತರ ಪರೀಕ್ಷೆಯ ನಂತರವೇ ಸಾವಿಗೆ ನಿಖರವಾದ ಕಾರಣ ಸ್ಪಷ್ಟವಾಗಲಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿ ಬುಧವಾರ ಹೊರಬರುವ ನಿರೀಕ್ಷೆಯಿದೆ. ಮಹಿಳೆ ಕಳೆದ ಆರು ವಾರಗಳಿಂದ ಕಗರಿ ಬೀಚ್‌ನಲ್ಲಿರುವ ಪ್ರವಾಸಿ ಹಾಸ್ಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು.
ಕೆನಡಾದ ಸ್ನೇಹಿತೆಯೂ ಅಲ್ಲಿ ಕೆಲಸ ಮಾಡುತ್ತಿದ್ದರು. ಘಟನೆಯ ನಂತರ ಆಕೆಯ ಸ್ನೇಹಿತೆ ತೀವ್ರ ಆಘಾತಕ್ಕೊಳಗಾಗಿದ್ದು, ಕೌನ್ಸೆಲಿಂಗ್‌ಗೆ ಒಳಗಾಗುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆನಡಾದಲ್ಲಿರುವ ಮಹಿಳೆಯ ಕುಟುಂಬವನ್ನು ಸಂಪರ್ಕಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಕಗೇರಿ ವಿಶ್ವದ ಅತಿದೊಡ್ಡ ಮರಳು ದ್ವೀಪ ಮತ್ತು ಯುನೆಸ್ಕೋ ವಿಶ್ವ ಪರಂಪರೆಯ ತಾಣ. ಸುಮಾರು 200 ಡಿಂಗೊಗಳು ಇಲ್ಲಿವೆ. COVID-19 ಸಾಂಕ್ರಾಮಿಕ ರೋಗದಿಂದ ದ್ವೀಪದಲ್ಲಿ ಪ್ರವಾಸಿಗರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ. ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳು ಪ್ರವಾಸಿಗರು ಮತ್ತು ನಿವಾಸಿಗಳು ಡಿಂಗೊಗಳ ಬಳಿ ಹೋಗಬಾರದು ಮತ್ತು ಮತ್ತು ಅವುಗಳಿಗೆ ಆಹಾರ ನೀಡಬಾರದು ಎಂದು ಮನವಿ ಮಾಡಿದ್ದಾರೆ.
ಮೂರು ವರ್ಷಗಳ ಹಿಂದೆ, ಅದೇ ದ್ವೀಪದಲ್ಲಿ ಜಾಗಿಂಗ್ ಮಾಡುತ್ತಿದ್ದ 23 ವರ್ಷದ ಮಹಿಳೆಯ ಮೇಲೆ ಡಿಂಗೊಗಳ ಗುಂಪೊಂದು ದಾಳಿ ಮಾಡಿತ್ತು ಡಿಂಗೊಗಳು ಅವರನ್ನುಅ ಸಮುದ್ರಕ್ಕೆ ಎಳೆದೊಯ್ದವು, ಆದರೆ ಒಬ್ಬ ಪ್ರವಾಸಿ ಹೇಗೋ ಅವರ ಜೀವವನ್ನು ಉಳಿಸಿದ್ದ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ