ಗುಂಡೇಟಿಗೆ ಬಲಿಯಾದ ಆಪ್ತ ಮಿತ್ರ ಚಾರ್ಲಿ ಕಿರ್ಕ್‌ಗೆ ಅಮೆರಿಕದ ಅತ್ಯುನ್ನತ ಗೌರವ ಘೋಷಿಸಿದ ಟ್ರಂಪ್

ಚಾರ್ಲಿ ಕಿರ್ಕ್ ಅವರಿಗೆ ಮರಣೋತ್ತರವಾಗಿ ಅಧ್ಯಕ್ಷೀಯ ಸ್ವಾತಂತ್ರ್ಯ ಪದಕವನ್ನು ನೀಡಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಉತಾಹ್ ಕಾಲೇಜಿನಲ್ಲಿ ಭಾಷಣದ ವೇಳೆ ಗುಂಡು ಹಾರಿಸಿದ್ದರಿಂದ ಚಾರ್ಲಿ ಕಿರ್ಕ್‌ ಸಾವನ್ನಪ್ಪಿದ್ದರು. ಅವರಿಗೆ ಮರಣೋತ್ತರವಾಗಿ ಅಧ್ಯಕ್ಷೀಯ ಸ್ವಾತಂತ್ರ್ಯ ಪದಕವನ್ನು ನೀಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಪೊಲೀಸ್ ಅಧಿಕಾರಿಗಳು ಈ ದಾಳಿಯ ತನಿಖೆ ನಡೆಸುತ್ತಿದ್ದಾರೆ.

ಗುಂಡೇಟಿಗೆ ಬಲಿಯಾದ ಆಪ್ತ ಮಿತ್ರ ಚಾರ್ಲಿ ಕಿರ್ಕ್‌ಗೆ ಅಮೆರಿಕದ ಅತ್ಯುನ್ನತ ಗೌರವ ಘೋಷಿಸಿದ ಟ್ರಂಪ್
Trump With Charlie Kirk

Updated on: Sep 11, 2025 | 9:45 PM

ವಾಷಿಂಗ್ಟನ್, ಸೆಪ್ಟೆಂಬರ್ 11: ಅಮೆರಿಕದ ಉತಾಹ್ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುವಾಗ ಗುಂಡೇಟಿಗೆ ಬಲಿಯಾದ ತಮ್ಮ ಆಪ್ತ ಮಿತ್ರ ಚಾರ್ಲಿ ಕಿರ್ಕ್‌ಗೆ (Charlie Kirk) ಮರಣೋತ್ತರವಾಗಿ ಅಧ್ಯಕ್ಷೀಯ ಸ್ವಾತಂತ್ರ್ಯ ಪದಕವನ್ನು ನೀಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಸಮಾರಂಭದ ದಿನಾಂಕವನ್ನು ಇನ್ನೂ ಘೋಷಿಸಿಲ್ಲ. ಉತಾಹ್ ಕಾಲೇಜಿನಲ್ಲಿ ಚಾರ್ಲಿ ಕಿರ್ಕ್ ಮೇಲೆ ಗುಂಡು ಹಾರಿಸಲ್ಪಟ್ಟ ನಂತರ, ಮರಣೋತ್ತರವಾಗಿ ಅವರಿಗೆ ಅಧ್ಯಕ್ಷೀಯ ಸ್ವಾತಂತ್ರ್ಯ ಪದಕವನ್ನು ನೀಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

“ಚಾರ್ಲಿ ತಮ್ಮ ಪೀಳಿಗೆಯ ದೈತ್ಯ, ಸ್ವಾತಂತ್ರ್ಯದ ಪ್ರತಿಪಾದಕರಾಗಿದ್ದರು ಮತ್ತು ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದ್ದರು” ಎಂದು ಟ್ರಂಪ್ ಹೇಳಿದ್ದಾರೆ. “ನಾವು ಚಾರ್ಲಿ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಆದರೆ, ಚಾರ್ಲಿ ಅಸಂಖ್ಯಾತ ಜನರ ಹೃದಯಗಳಲ್ಲಿ ಅದರಲ್ಲೂ ವಿಶೇಷವಾಗಿ ಯುವಜನರ ಹೃದಯಗಳಲ್ಲಿ ಇಟ್ಟ ಧೈರ್ಯವು ಜೀವಂತವಾಗಿರುತ್ತದೆ ಎಂಬುದರಲ್ಲಿ ನನಗೆ ಸಂದೇಹವಿಲ್ಲ” ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಇದನ್ನೂ ಓದಿ: ಟ್ರಂಪ್ ಆಪ್ತ ಚಾರ್ಲಿ ಕಿರ್ಕ್ ಹತ್ಯೆ; ಗುಂಡೇಟಿನ ಕ್ಷಣ, ಜನರ ಕಿರುಚಾಟದ ವಿಡಿಯೋ ಇಲ್ಲಿದೆ

ಪ್ರೌಢಶಾಲೆ ಮತ್ತು ಕಾಲೇಜು ಕ್ಯಾಂಪಸ್‌ಗಳಲ್ಲಿ ಯುವಜನರಲ್ಲಿ ಸಂಪ್ರದಾಯವಾದಿ ಮೌಲ್ಯಗಳನ್ನು ತುಂಬಲು ಮೀಸಲಾಗಿರುವ ಎನ್​ಜಿಒ ಆದ ಟರ್ನಿಂಗ್ ಪಾಯಿಂಟ್ USAಯ ಸಂಸ್ಥಾಪಕ ಚಾರ್ಲಿ ಕಿರ್ಕ್ ರಿಪಬ್ಲಿಕನ್ ಪಕ್ಷದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ಟ್ರಂಪ್ ಮತ್ತು ಅವರ ಕುಟುಂಬದೊಂದಿಗೆ ನಿಕಟ ಸಂಬಂಧವನ್ನು ಬೆಳೆಸಿಕೊಂಡಿದ್ದರು.


ಬುಧವಾರ ಮಧ್ಯಾಹ್ನ ಉತಾಹ್ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ಟರ್ನಿಂಗ್ ಪಾಯಿಂಟ್ ಯುಎಸ್ಎ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾಗ 31 ವರ್ಷದ ಚಾರ್ಲಿ ಮೇಲೆ ಗುಂಡು ಹಾರಿಸಲಾಗಿದ್ದು, ಈ ವೇಳೆ ಅವರು ಸಾವನ್ನಪ್ಪಿದ್ದರು.

ಇದನ್ನೂ ಓದಿ: India US Relations: ಭಾರತದ ಬಗ್ಗೆ ಅಮೆರಿಕ ಮೃದು ಧೋರಣೆ, ಟ್ರಂಪ್ ​​ಜತೆ ಮಾತನಾಡಲು ಉತ್ಸುಕನಾಗಿದ್ದೇನೆ: ಮೋದಿ

ಚಾರ್ಲಿ ಕಿರ್ಕ್ ಅವರನ್ನು ಕೊಲ್ಲಲು ಬಳಸಲಾದ ಬೋಲ್ಟ್-ಆಕ್ಷನ್ ರೈಫಲ್ ಪತ್ತೆಯಾಗಿದೆ ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ತಿಳಿಸಿದೆ. ಕಾಲೇಜು ವಿದ್ಯಾರ್ಥಿಯ ವಯಸ್ಸಿನವನಂತೆ ಕಾಣುವ ಶೂಟರ್‌ನನ್ನು ಪತ್ತೆಹಚ್ಚುವ ಹುಡುಕಾಟ ಇನ್ನೂ ನಡೆಯುತ್ತಿದೆ. ಈ ದಾಳಿಯ ಹಿಂದಿನ ಉದ್ದೇಶ ಇನ್ನೂ ತಿಳಿದಿಲ್ಲ. ಆದರೂ ಅನೇಕ ಸಂಪ್ರದಾಯವಾದಿಗಳು ಇದು ರಾಜಕೀಯ ಹಿಂಸಾಚಾರದ ಕೃತ್ಯ ಎಂದು ಶಂಕಿಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ