ಚೆರ್ನೋಬಿಲ್ ನ್ಯೂಕ್ಲಿಯರ್ ಡೇಟಾ ಸಿಸ್ಟಮ್ಸ್ ಸಂಪರ್ಕ ಕಳೆದುಕೊಂಡಿದೆ: ಐಎಇಎ

| Updated By: ರಶ್ಮಿ ಕಲ್ಲಕಟ್ಟ

Updated on: Mar 09, 2022 | 5:42 PM

ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಸಿಬ್ಬಂದಿ ಎದುರಿಸುತ್ತಿರುವ ಕಷ್ಟಕರ ಮತ್ತು ಒತ್ತಡದ ಪರಿಸ್ಥಿತಿ ಮತ್ತು ಪರಮಾಣು ಸುರಕ್ಷತೆಗೆ ಇದು ಸಂಭಾವ್ಯ ಅಪಾಯಗಳ ಬಗ್ಗೆ ನಾನು ಆಳವಾಗಿ ಚಿಂತಿಸುತ್ತಿದ್ದೇನೆ ಎಂದು ಗ್ರಾಸ್ಸಿ ಹೇಳಿದರು.

ಚೆರ್ನೋಬಿಲ್ ನ್ಯೂಕ್ಲಿಯರ್ ಡೇಟಾ ಸಿಸ್ಟಮ್ಸ್ ಸಂಪರ್ಕ ಕಳೆದುಕೊಂಡಿದೆ: ಐಎಇಎ
ಚರ್ನೋಬಿಲ್ ಪರಮಾಣು ಸ್ಥಾವರ ( ರಾಯಿಟರ್ಸ್ ಚಿತ್ರ)
Follow us on

ವಿಯೆನ್ನಾ, ಆಸ್ಟ್ರಿಯಾ: ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರವು (Chernobyl nuclear power plant) ವಿಶ್ವಸಂಸ್ಥೆಯ ಪರಮಾಣು ವಾಚ್‌ಡಾಗ್‌ ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಗೆ ( IAEA) ಡೇಟಾವನ್ನು ರವಾನಿಸುತ್ತಿಲ್ಲ ಎಂದು ಪ್ರಸ್ತುತ ಸಂಸ್ಥೆ ಮಂಗಳವಾರ ಹೇಳಿದೆ. ಅದೇ ವೇಳೆ ಉಕ್ರೇನಿಯನ್ ಪರಮಾಣು ವಿದ್ಯುತ್ ಸ್ಥಾವರದಲ್ಲಿರಷ್ಯಾದ ಸಿಬ್ಬಂದಿ ಅಡಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಬಗ್ಗೆ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಫೆಬ್ರವರಿ 24 ರಂದು ರಷ್ಯಾ ಉಕ್ರೇನ್ ಅನ್ನು ಆಕ್ರಮಿಸಿದ್ದು 1986 ರ ದುರಂತದ ಸ್ಥಳವನ್ನು ವಶಪಡಿಸಿಕೊಂಡಿತು. 1986 ರ ದುರಂತದಲ್ಲಿ ನೂರಾರು ಜನರು ಸಾವಿಗೀಡಾಗಿದ್ದು ವಿಕಿರಣಶೀಲ ಮಾಲಿನ್ಯವ ಯುರೋಪಿನಾದ್ಯಂತ ಹರಡಿತ್ತು. ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಮುಖ್ಯಸ್ಥ ರಾಫೆಲ್ ಗ್ರಾಸ್ಸಿ “ಚೋರ್ನೋಬಿಲ್ ಎನ್‌ಪಿಪಿಯಲ್ಲಿ ಸ್ಥಾಪಿಸಲಾದ ರಕ್ಷಣಾತ್ಮಕ ಮೇಲ್ವಿಚಾರಣಾ ವ್ಯವಸ್ಥೆಗಳಿಂದ ರಿಮೋಟ್ ಡೇಟಾ ಪ್ರಸರಣ ಕಳೆದುಹೋಗಿದೆ ಎಂದು ಸೂಚಿಸಿದೆ” ಎಂದು ಹೇಳಿರುವುದಾಗಿ ಐಎಇಎ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. “ಏಜೆನ್ಸಿಯು ಉಕ್ರೇನ್‌ನ ಇತರ ಸ್ಥಳಗಳಲ್ಲಿನ ರಕ್ಷಣಾ ಮಾನಿಟರಿಂಗ್ ಸಿಸ್ಟಮ್‌ಗಳ ಸ್ಥಿತಿಯನ್ನು ಪರಿಶೀಲಿಸುತ್ತಿದೆ ಮತ್ತು ಶೀಘ್ರದಲ್ಲೇ ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತದೆ” ಎಂದು ಅದು ಹೇಳಿದೆ. ಪರಮಾಣು ವಸ್ತು ಮತ್ತು ಚಟುವಟಿಕೆಗಳಿಗೆ ಅನ್ವಯವಾಗುವ ತಾಂತ್ರಿಕ ಕ್ರಮಗಳನ್ನು ವಿವರಿಸಲು ಐಎಇಎ “ಸುರಕ್ಷತಾ” ಪದವನ್ನು ಬಳಸುತ್ತದೆ. ಅಂತಹ ವಸ್ತುಗಳ ದುರುಪಯೋಗವನ್ನು ಮೊದಲೇ ಪತ್ತೆಹಚ್ಚುವ ಮೂಲಕ ಪರಮಾಣು ಶಸ್ತ್ರಾಸ್ತ್ರಗಳ ಹರಡುವಿಕೆಯನ್ನು ತಡೆಯುವ ಉದ್ದೇಶ ಇದರದ್ದು.

200 ಕ್ಕೂ ಹೆಚ್ಚು ತಾಂತ್ರಿಕ ಸಿಬ್ಬಂದಿ ಮತ್ತು ಗಾರ್ಡ್‌ಗಳು ಸೈಟ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ. ರಷ್ಯಾದ ಸ್ವಾಧೀನಪಡಿಸಿಕೊಂಡ ನಂತರ 13 ದಿನಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ಥಳದಲ್ಲಿ ಸಿಬ್ಬಂದಿಯ ಪರಿಸ್ಥಿತಿಯು ಹದಗೆಡುತ್ತಿದೆ ಎಂದು ಉಕ್ರೇನಿಯನ್ ಪರಮಾಣು ನಿಯಂತ್ರಕವನ್ನು ಉಲ್ಲೇಖಿಸಿ ಐಎಇಎ ಹೇಳಿದೆ.

ನಿಷ್ಕ್ರಿಯಗೊಂಡ ಸ್ಥಾವರವು  ರಿಯಾಕ್ಟರ್‌ಗಳು ಮತ್ತು ವಿಕಿರಣಶೀಲ ತ್ಯಾಜ್ಯ ಸೌಲಭ್ಯಗಳನ್ನು ಹೊಂದಿರುವ ಹೊರಗಿಡುವ ವಲಯದೊಳಗೆ ಇರುತ್ತದೆ.  ಮತ್ತೊಂದು ಪರಮಾಣು ದುರಂತವನ್ನು ತಡೆಗಟ್ಟಲು ನಿರಂತರ ನಿರ್ವಹಣೆಯ ಅಗತ್ಯವಿರುವುದರಿಂದ 2,000 ಕ್ಕೂ ಹೆಚ್ಚು ಸಿಬ್ಬಂದಿ ಇನ್ನೂ ಸ್ಥಾವರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಯುಎನ್ ಏಜೆನ್ಸಿಯು ಕೆಲಸಗಾರರನ್ನು ಹಿಂತಿರುಗುವಂತೆ ಅನುಮತಿ ನೀಡಲು ರಷ್ಯಾಕ್ಕೆ ಕರೆ ನೀಡಿತು ಏಕೆಂದರೆ ವಿಶ್ರಾಂತಿ ಮತ್ತು ನಿಯಮಿತ ಪಾಳಿಗಳು ಸೈಟ್‌ನ ಸುರಕ್ಷತೆಗೆ ನಿರ್ಣಾಯಕವಾಗಿವೆ.

ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಸಿಬ್ಬಂದಿ ಎದುರಿಸುತ್ತಿರುವ ಕಷ್ಟಕರ ಮತ್ತು ಒತ್ತಡದ ಪರಿಸ್ಥಿತಿ ಮತ್ತು ಪರಮಾಣು ಸುರಕ್ಷತೆಗೆ ಇದು ಸಂಭಾವ್ಯ ಅಪಾಯಗಳ ಬಗ್ಗೆ ನಾನು ಆಳವಾಗಿ ಚಿಂತಿಸುತ್ತಿದ್ದೇನೆ ಎಂದು ಗ್ರಾಸ್ಸಿ ಹೇಳಿದರು.

“ಅಲ್ಲಿನ ಸಿಬ್ಬಂದಿಗಳ ಸುರಕ್ಷಿತ ತಿರುಗುವಿಕೆಯನ್ನು ತುರ್ತಾಗಿ ಸುಗಮಗೊಳಿಸಲು ಸೈಟ್‌ನ ಪರಿಣಾಮಕಾರಿ ನಿಯಂತ್ರಣದಲ್ಲಿರುವ ಪಡೆಗಳಿಗೆ ನಾನು ಕರೆ ನೀಡುತ್ತೇನೆ” ಎಂದು ಅವರು ಹೇಳಿದ್ದಾರೆ.  ರಿಮೋಟ್ ಡೇಟಾ ಪ್ರಸರಣವನ್ನು ಕಡಿತಗೊಳಿಸುವುದರೊಂದಿಗೆ ಮತ್ತು ಉಕ್ರೇನಿಯನ್ ನಿಯಂತ್ರಕವು ಇಮೇಲ್ ಮೂಲಕ ಮಾತ್ರ ಸ್ಥಾವರವನ್ನು ಸಂಪರ್ಕಿಸಲು ಸಾಧ್ಯವಾಯಿತು. ಗ್ರಾಸ್ಸಿ ಎಲ್ಲಾ ಪಕ್ಷಗಳಿಂದ ಉಕ್ರೇನ್‌ನ ವಿದ್ಯುತ್ ಸ್ಥಾವರಗಳ “ಸುರಕ್ಷತೆ ಮತ್ತು ಭದ್ರತೆಗೆ ಬದ್ಧತೆಯನ್ನು” ಪಡೆದುಕೊಳ್ಳಲು ಸೈಟ್ ಅಥವಾ ಬೇರೆಡೆಗೆ ಪ್ರಯಾಣಿಸುವ ತನ್ನ ಪ್ರಸ್ತಾಪವನ್ನು ಪುನರುಚ್ಚರಿಸಿದರು.

ರಷ್ಯಾ ಕಳೆದ ವಾರ ಯುರೋಪ್‌ನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವಾದ ಝಪೊರಿಝಿಯಾ ಮೇಲೆ ದಾಳಿ ಮಾಡಿ ವಶಪಡಿಸಿಕೊಂಡಿತು. ಚೆರ್ನೋಬಿಲ್‌ನಲ್ಲಿ ಕರಗಿದ ಒಂದಕ್ಕಿಂತ ಹೆಚ್ಚು ಆಧುನಿಕ, ಸುರಕ್ಷಿತ ವಿನ್ಯಾಸದ ಆರು ರಿಯಾಕ್ಟರ್‌ಗಳನ್ನು ಝಪೊರಿಝಿಯಾ ಮಾತ್ರ ಹೊಂದಿದೆ. ಅವುಗಳಲ್ಲಿ ಎರಡು ಇನ್ನೂ ಕಾರ್ಯನಿರ್ವಹಿಸುತ್ತಿವೆ, ಸ್ಥಾವರದ ಸಿಬ್ಬಂದಿ ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ವಿಕಿರಣ ಮಟ್ಟವು ಸ್ಥಿರವಾಗಿದೆ ಎಂದು ಐಎಇಎ ಹೇಳಿದೆ.

ಬುಧವಾರ ರಷ್ಯಾದ ಸುದ್ದಿ ಸಂಸ್ಥೆ ಆರ್ ಐಎ ನೊವೊಸ್ಟಿ ಝಪೊರಿಝಿಯಾ ಪರಮಾಣು ಸ್ಥಾವರದ ಮುಂದೆ ರಷ್ಯಾದ ರಾಷ್ಟ್ರೀಯ ಗಾರ್ಡ್ ಅಧಿಕಾರಿಯೊಬ್ಬರು ಮಾಸ್ಕೋದ ಪಡೆಗಳು ಸೈಟ್‌ನ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಹೇಳುವ ವಿಡಿಯೊವನ್ನು ಪ್ರಕಟಿಸಿದರು.

“ಪ್ರಸ್ತುತ ಸ್ಥಾವರವು ಸಾಮಾನ್ಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸೈಟ್ ನ ನಿರ್ವಹಣೆಯು ಅದರ ಕಾರ್ಯಗಳನ್ನು ಪೂರೈಸುತ್ತಿದೆ. ಪರಿಸ್ಥಿತಿಯನ್ನು ಸಂಪೂರ್ಣವಾಗಿ ರಷ್ಯಾದ ರಾಷ್ಟ್ರೀಯ ಸಿಬ್ಬಂದಿ ನಿಯಂತ್ರಿಸುತ್ತಾರೆ” ಎಂದು ಅಧಿಕಾರಿ ಹೇಳಿದರು.

ಇಲ್ಲಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲಾಗಿದೆ ಎಂದು  ಉಕ್ರೇನ್ ಮೇಲೆ ಅಧಿಕಾರಿ ಆರೋಪಿಸಿದ್ದಾರೆ. ರಷ್ಯಾದ ಪಡೆಗಳು ವಶಕ್ಕೆ ತೆಗೆದುಕೊಂಡ ನಂತರ ಸ್ಥಾವರಗಳ ರಿಯಾಕ್ಟರ್‌ಗಳಲ್ಲಿ ಭಾರೀ ಶಸ್ತ್ರಾಸ್ತ್ರಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಪತ್ತೆಯಾಗಿವೆ ಎಂದು ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: ಉಕ್ರೇನ್​ ಸರ್ಕಾರ ಉರುಳಿಸುವ ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ, ಸಂಧಾನ ಪ್ರಯತ್ನ ಜಾರಿಯಲ್ಲಿದೆ: ರಷ್ಯಾ ಸರ್ಕಾರದಿಂದ ಮಾಹಿತಿ