ಉಕ್ರೇನ್​ ಸರ್ಕಾರ ಉರುಳಿಸುವ ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ, ಸಂಧಾನ ಪ್ರಯತ್ನ ಜಾರಿಯಲ್ಲಿದೆ: ರಷ್ಯಾ ಸರ್ಕಾರದಿಂದ ಮಾಹಿತಿ

ಯುಎಸ್​ ಬಗ್ಗೆಯೂ ಪ್ರಸ್ತಾಪ ಮಾಡಿದ ಜಖರೋವಾ, ಉಕ್ರೇನ್​ನಲ್ಲಿ ಯುಎಸ್​ ಜೈವಿಕ ಶಸ್ತ್ರಾಸ್ತ್ರಗಳ ಅಭಿವೃದ್ಧಿಪಡಿಸುತ್ತಿದೆ ಎಂಬುದಕ್ಕೆ ನಮ್ಮಲ್ಲಿ ಪ್ರಮಾಣೀಕರಿಸಲ್ಪಟ್ಟ ಪುರಾವೆಯಿದೆ ಎಂದು ಹೇಳಿದ್ದಾರೆ.

ಉಕ್ರೇನ್​ ಸರ್ಕಾರ ಉರುಳಿಸುವ ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ, ಸಂಧಾನ ಪ್ರಯತ್ನ ಜಾರಿಯಲ್ಲಿದೆ: ರಷ್ಯಾ ಸರ್ಕಾರದಿಂದ ಮಾಹಿತಿ
ವ್ಲಾದಿಮಿರ್ ಪುಟಿನ್
Follow us
| Updated By: Lakshmi Hegde

Updated on:Mar 09, 2022 | 4:51 PM

ರಷ್ಯಾ ಹೀಗೆ ಎಷ್ಟು ದಿನ ಯುದ್ಧ ಮುಂದುವರಿಸಲಿದೆ? ಉಕ್ರೇನ್​​ನಲ್ಲಿ (Ukraine) ಈಗಿರುವ ಸರ್ಕಾರವನ್ನು ಉರುಳಿಸಿ, ಪೂರ್ತಿಯಾಗಿ ಆ ದೇಶವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತದೆಯಾ? ರಷ್ಯಾವೇ ಉಕ್ರೇನ್​ಗೆ ಹೊಸ ಅಧ್ಯಕ್ಷನನ್ನು ನೇಮಕ ಮಾಡಲಿದೆಯಾ ಎಂಬಿತ್ಯಾದಿ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ರಷ್ಯಾ ಇದೀಗ ಹೊರಡಿಸಿರುವ ಒಂದು ಪ್ರಕಟಣೆ ಅತ್ಯಂತ ಮಹತ್ವ ಎನ್ನಿಸಿದೆ. ಉಕ್ರೇನ್​ ಸರ್ಕಾರ ಉರುಳಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಲು ರಷ್ಯಾದ ಸೇನಾಪಡೆಗೆ (Russian Force) ಯಾವ ಸೂಚನೆಯನ್ನೂ ನೀಡಿಲ್ಲ. ಉಕ್ರೇನ್​ನೊಂದಿಗೆ ನಮಗೆ ಇರುವ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಸಂಧಾನ ಮಾತುಕತೆ ನಡೆಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯವೇ ಹೇಳಿದ್ದಾಗಿ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಬುಧವಾರ ಸುದ್ದಿಗೋಷ್ಠಿ ನಡೆಸಿದ ರಷ್ಯಾ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರಾದ ಮಾರಿಯಾ ಜಖರೋವಾ, ಉಕ್ರೇನ್​​ ದೇಶದೊಂದಿಗೆ ನಮಗೆ ಇರುವ ಸಂಘರ್ಷ, ಮನಸ್ತಾಪವನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳುವ ಪ್ರಯತ್ನವನ್ನು ಜಾರಿಯಲ್ಲಿಟ್ಟಿದ್ದೇವೆ. ಈ ಸಂಬಂಧ ಕೀವ್​​ನ ಆಡಳಿತ, ಪ್ರಮುಖ ನಾಯಕರೊಂದಿಗೆ ಸಮಾಲೋಚನೆ ಮುಂದುವರಿದಿದೆ. ಈಗಾಗಲೇ ಮೂರು ಸುತ್ತಿನ ಶಾಂತಿ ಮಾತುಕತೆ ಮುಂದುವರಿದಿದೆ. ಉಕ್ರೇನ್​ ಸರ್ಕಾರವನ್ನು ಉರುಳಿಸುವ ಮಾದರಿ ಕಾರ್ಯಾಚರಣೆ ನಡೆಸಲು ಸೇನೆಗೆ ಯಾವುದೇ ಆದೇಶ ನೀಡಿಲ್ಲ ಎಂದು  ಹೇಳಿದ್ದಾರೆ.

ಇದೇ ವೇಳೆ ಯುಎಸ್​ ಬಗ್ಗೆಯೂ ಪ್ರಸ್ತಾಪ ಮಾಡಿದ ಜಖರೋವಾ, ಉಕ್ರೇನ್​ನಲ್ಲಿ ಯುಎಸ್​ ಜೈವಿಕ ಶಸ್ತ್ರಾಸ್ತ್ರಗಳ ಅಭಿವೃದ್ಧಿಪಡಿಸುತ್ತಿದೆ ಎಂಬುದಕ್ಕೆ ನಮ್ಮಲ್ಲಿ ಪ್ರಮಾಣೀಕರಿಸಲ್ಪಟ್ಟ ಪುರಾವೆಯಿದೆ. ಉಕ್ರೇನ್​ನಲ್ಲಿ ಜೈವಿಕ ಸಂಶೋಧನೆಗಾಗಿ ಯುಎಸ್​ ಪ್ರಯೋಗಾಲಯಗಳನ್ನು ನಿರ್ಮಿಸಿದೆ ಎಂಬುದನ್ನು ಯುಎಸ್​ನ ರಾಜಕೀಯ ವ್ಯವಹಾರಗಳ ಅಧೀನ ಕಾರ್ಯದರ್ಶಿ ವಿಕ್ಟೋರಿಯಾ ನುಲ್ಯಾಂಡ್ ಹೇಳಿದ್ದರು.  ಸಾಮಾನ್ಯ ಕಾರಣಕ್ಕಾಗಿ ಪ್ರಯೋಗಾಲಯ ಸ್ಥಾಪಿಸಲಾಗಿದೆಯೋ, ವೈಜ್ಞಾನಿಕ ಉದ್ದೇಶಗಳಿಗಾಗಿಯೋ ಎಂಬುದು ನಂತರದ ಪ್ರಶ್ನೆ. ಅಮೆರಿಕ ಯಾಕೆ ಉಕ್ರೇನ್​ನಲ್ಲಿ ಜೈವಿಕ ಲ್ಯಾಬೋರೇಟರಿಗಳನ್ನು ಸ್ಥಾಪಿಸಿದೆ ಮತ್ತು ಅದಕ್ಕೆ ಯುಎಸ್​ನ ರಕ್ಷಣಾ ಇಲಾಖೆ ಯಾಕೆ ಆರ್ಥಿಕ ನೆರವು ನೀಡುತ್ತಿದೆ ಎಂಬುದು ನಮ್ಮ ಮೊದಲ ಪ್ರಶ್ನೆ. ಇದಕ್ಕೆ ಯುಎಸ್​ನಿಂದ ವಿವರಣೆ ಬೇಕು. ಕೇವಲ ನಾವಷ್ಟೇ ಅಲ್ಲ, ಇಡೀ ಜಗತ್ತು ಆ ವಿವರಣೆಗಾಗಿ ಕಾಯುತ್ತಿದೆ ಎಂದು ಜಖರೋವಾ ಹೇಳಿದ್ದಾರೆ.  ಉಕ್ರೇನ್​ನಲ್ಲಿ ಯುಎಸ್ ಜೈವಿಕ ಸಂಶೋಧನಾ ಪ್ರಯೋಗಾಲಯಗಳನ್ನು ಸ್ಥಾಪಿಸಿ, ಅದಕ್ಕೆ ಹಣಕಾಸಿನ ನೆರವು ನೀಡುವ ಮೂಲಕ, ರಷ್ಯಾ ವಿರುದ್ಧ ಹೋರಾಟಕ್ಕೆ ಜೈವಿಕ ಶಸ್ತ್ರಾಸ್ತ್ರ ಅಭಿವೃದ್ಧಿ ಪಡಿಸುತ್ತಿದೆ ಎಂಬುದನ್ನು ರಷ್ಯಾ ಈ ಹಿಂದೆಯೂ ಪ್ರತಿಪಾದಿಸಿದೆ. ಆದರೆ ಈ ಆರೋಪವನ್ನು ಉಕ್ರೇನ್ ಮತ್ತು ಅಮೆರಿಕ ಸರ್ಕಾರಗಳು ತಳ್ಳಿ ಹಾಕಿದ್ದವು.

ಇದನ್ನೂ ಓದಿ: Russia-Ukraine War: ನಿರ್ಬಂಧಗಳ ವಿರುದ್ಧ ಪ್ರತೀಕಾರಕ್ಕೆ ರಷ್ಯಾ ಸಿದ್ಧತೆ: 5 ಮಹತ್ವದ ಬೆಳವಣಿಗೆಗಳ ವಿವರ ಇಲ್ಲಿದೆ

Published On - 4:08 pm, Wed, 9 March 22

ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ