ಗ್ಯಾರಿ ಕಾಸ್ಪರೋವ್ ಭಯೋತ್ಪಾದಕ ಮತ್ತು ಉಗ್ರಗಾಮಿ ಎಂದ ರಷ್ಯಾ! ಅದಕ್ಕೆ ಚೆಸ್ ದಂತಕಥೆ ಪ್ರತಿಕ್ರಿಯೆ ಏನು ಗೊತ್ತಾ?

Chess legend Garry Kasparov: ಚೆಸ್ ದಂತಕಥೆ ಗ್ಯಾರಿ ಕಾಸ್ಪರೋವ್ ರಷ್ಯಾದ 'ಭಯೋತ್ಪಾದಕರು ಮತ್ತು ಉಗ್ರಗಾಮಿಗಳ' ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. 1985 ರಲ್ಲಿ ವಿಶ್ವದ ಅತ್ಯಂತ ಕಿರಿಯ ಚೆಸ್ ಚಾಂಪಿಯನ್ ಆಗಿದ್ದ ಕಾಸ್ಪರೋವ್, ವ್ಲಾಡಿಮಿರ್ ಪುಟಿನ್ ಸರ್ಕಾರದ ನಿಷ್ಠುರ ಟೀಕಾಕಾರರಾಗಿದ್ದರು ಮತ್ತು 2013 ರಲ್ಲಿ ಶೋಷಣೆಗೆ ಹೆದರಿ ರಷ್ಯಾದಿಂದ ಪಲಾಯನ ಮಾಡಿದರು. ರಷ್ಯಾದ ಭಯೋತ್ಪಾದಕರ ಪಟ್ಟಿಗೆ ತನ್ನ ಸೇರ್ಪಡೆಯನ್ನು ಅವರು "ಈ ಗೌರವವು ನನಗಿಂತ ಹಾಲಿ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಫ್ಯಾಸಿಸ್ಟ್ ಆಡಳಿತದ ಬಗ್ಗೆ ಹೆಚ್ಚು ಹೇಳುತ್ತದೆ" ಎಂದು ಜರಿದಿದ್ದಾರೆ.

ಗ್ಯಾರಿ ಕಾಸ್ಪರೋವ್ ಭಯೋತ್ಪಾದಕ ಮತ್ತು ಉಗ್ರಗಾಮಿ ಎಂದ ರಷ್ಯಾ! ಅದಕ್ಕೆ ಚೆಸ್ ದಂತಕಥೆ ಪ್ರತಿಕ್ರಿಯೆ ಏನು ಗೊತ್ತಾ?
ಮತ್ತೊಮ್ಮೆ ಗ್ಯಾರಿ ಕಾಸ್ಪರೋವ್ ಭಯೋತ್ಪಾದಕ ಮತ್ತು ಉಗ್ರಗಾಮಿ ಎಂದ ರಷ್ಯಾ!
Follow us
ಸಾಧು ಶ್ರೀನಾಥ್​
|

Updated on: Mar 07, 2024 | 11:39 AM

ಮಾಸ್ಕೋ, ಮಾರ್ಚ್​​ 7: ರಷ್ಯಾದ ಚೆಸ್ ದಂತಕಥೆ ಗ್ಯಾರಿ ಕಾಸ್ಪರೋವ್ (former World Chess champion) ಅವರ ಹೆಸರನ್ನು ಮಾಸ್ಕೋದ ಭಯೋತ್ಪಾದಕರು ಮತ್ತು ಉಗ್ರಗಾಮಿಗಳ (terrorists and extremists) ಪಟ್ಟಿಗೆ ರಷ್ಯಾದ (Russia) ಹಣಕಾಸು ನಿಗಾ ಸಂಸ್ಥೆ ರೋಸ್ಫಿನ್ ಮಾನಿಟರಿಂಗ್ (Rosfinmonitoring) ಸೇರಿಸಿದೆ. ಈ ಪ್ರಕ್ರಿಯೆಯಿಂದಾಗಿ ಕ್ಲೈಂಟ್ ಬ್ಯಾಂಕ್ ವಹಿವಾಟುಗಳನ್ನು ಅಂದರೆ ಕಾಸ್ಪರೋವ್ ಖಾತೆಗಳ ವಹಿವಾಟನ್ನು ನಿರ್ಬಂಧಿಸುತ್ತದೆ. ಪಾಲಿಟಿಕೊ (Politico) ಪ್ರಕಾರ ಬಳಕೆದಾರರು ತಮ್ಮ ಖಾತೆಗಳಲ್ಲಿ ವ್ಯವಹಾರ ಮಾಡಬೇಕೆಂದರೆ ಪ್ರತಿ ಬಾರಿಯೂ ಹಣಕಾಸು ನಿಗಾ ಸಂಸ್ಥೆಯಿಂದ ಅನುಮೋದನೆಯನ್ನು ಪಡೆಯಬೇಕಾಗುತ್ತದೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆಡಳಿತದ ವಿರುದ್ಧ ಬಹಿರಂಗ ಟೀಕಾಕಾರಾದ ಕಾಸ್ಪರೋವ್ ಅವರು ಈ ಹಿಂದೆ ರಷ್ಯಾದ ವಿರೋಧದಲ್ಲಿ ಸಕ್ರಿಯರಾಗಿದ್ದರು. ಕಿರುಕುಳವನ್ನು ತಪ್ಪಿಸಿಕೊಳ್ಳಲು, ಶೋಷಣೆಗೆ ಹೆದರಿ 2013 ರಲ್ಲಿ ರಷ್ಯಾದಿಂದ (Russia) ಪಲಾಯನ ಮಾಡಿದರು. ರಷ್ಯಾದ ಭಯೋತ್ಪಾದಕರ ಪಟ್ಟಿಗೆ ತನ್ನ ಸೇರ್ಪಡೆಯನ್ನು ಅವರು “ಈ ಗೌರವವು ನನಗಿಂತ ಹಾಲಿ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Vladimir Putin) ಅವರ ಫ್ಯಾಸಿಸ್ಟ್ ಆಡಳಿತದ ಬಗ್ಗೆ ಹೆಚ್ಚು ಹೇಳುತ್ತದೆ” ಎಂದು ಜರಿದಿದ್ದಾರೆ.

ಅಂತರರಾಷ್ಟ್ರೀಯ ಭಯೋತ್ಪಾದನಾ ಕೃತ್ಯಗಳಿಗೆ ಪದೇ ಪದೇ ಬೆಂಬಲವನ್ನು ಒದಗಿಸಿದ ದೇಶಗಳ ಯುಎಸ್ ಪಟ್ಟಿಯನ್ನು ಉಲ್ಲೇಖಿಸಿ, ರಷ್ಯಾ, ಪುಟಿನ್ ಮತ್ತು ಅವರ ಎಲ್ಲಾ ಆಪ್ತಕೂಟವನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಲು ಇಂದು ಉತ್ತಮ ದಿನವಾಗಿದೆ ಎಂದು ಕಾಸ್ಪರೋವ್ ಅವರು ವ್ಯಾಖ್ಯಾನಿಸಿದ್ದಾರೆ. 2015 ರಲ್ಲಿ, ಕಾಸ್ಪರೋವ್ “ವಿಂಟರ್ ಈಸ್ ಕಮಿಂಗ್” ಎಂಬ ಪುಸ್ತಕವನ್ನು ಪ್ರಕಟಿಸಿದ್ದರು. ಅದರಲ್ಲಿ ಮುಕ್ತ ಪ್ರಪಂಚದ ಶತ್ರುಗಳಾದ ಪುಟಿನ್ ಮತ್ತು ಇತರರನ್ನು ತಡೆಯುವ ಜರೂರತ್ತು ಇದೆ ಎಂದು ವಾದಿಸಿದ್ದರು.

ಕಾಸ್ಪರೋವ್ ಅವರು 2005 ರಲ್ಲಿ ತಮ್ಮ ಚೆಸ್ ವೃತ್ತಿಜೀವನಕ್ಕೆ ಮಂಗಳ ಹಾಡಿದ್ದರು. ಮತ್ತು ದೇಶಭ್ರಷ್ಟರಾಗಿದ್ದಾಗ ಪುಟಿನ್ ಅಧಿಕಾರದ ವಿರುದ್ಧ ಪ್ರಮುಖವಾಗಿ ಧ್ವನಿ ಎತ್ತಿದವರಲ್ಲಿ ಕಾಸ್ಪರೋವ್ ಒಬ್ಬರಾಗಿದ್ದಾರೆ. ಮೇ 2022 ರಲ್ಲಿ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದಾಗ, ಚೆಸ್ ಆಟಗಾರ ಕಾಸ್ಪರೋವ್ ಮತ್ತು ಇತರೆ ಕೆಲ ಪ್ರಮುಖ ವ್ಯಕ್ತಿಗಳು ಯುದ್ಧ ವಿರೋಧಿ ಸಮಿತಿಯನ್ನು ಸ್ಥಾಪಿಸಿದರು. ಅದು ರಷ್ಯಾದ ನಾಯಕರನ್ನು “ಯುದ್ಧ ಅಪರಾಧಿಗಳು” ಎಂದು ಘೋಷಿಸಲು ಅಂತರರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿತು.

ಮೇ 2022 ರಲ್ಲಿ, ರಷ್ಯಾದ ನ್ಯಾಯಾಂಗ ಸಚಿವಾಲಯವು ಕಾಸ್ಪರೋವ್ ಅನ್ನು “ವಿದೇಶಿ ಏಜೆಂಟರ” ಪಟ್ಟಿಯಲ್ಲಿ ಸೇರಿಸಿತು. ಕ್ರೆಮ್ಲಿನ್ ವಿಮರ್ಶಕರ ಬಗ್ಗೆ ನಿಕಟವಾಗಿ ಮೇಲ್ವಿಚಾರಣೆ ಮಾಡುವ ರಷ್ಯಾದ ಅಧಿಕಾರಿಗಳು ಕಾಸ್ಪರೋವ್ ಅವರಿಗೆ ಈ ಹಣೆಪಟ್ಟಿ ಕಟ್ಟಿದೆ. ಕಾಸ್ಪರೋವ್ ಸುಮಾರು ಒಂದು ದಶಕದಿಂದ ಯುನೈಟೆಡ್ ಸ್ಟೇಟ್ಸ್​​ ಆಫ್​ ಅಮೆರಿಕಾದಲ್ಲಿ ನೆಲೆಸಿದ್ದಾರೆ.

ಅವರು 1985 ರಲ್ಲಿ ತಮ್ಮ 22 ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಆದ ಅತ್ಯಂತ ಕಿರಿಯ ಚೆಸ್ ಆಟಗಾರರಾಗಿದ್ದರು. ಕಾಸ್ಪರೋವ್ ಅವರು 1984 ರಿಂದ ನಿವೃತ್ತಿಯಾಗುವವರೆಗೆ ಒಟ್ಟಾರೆ 255 ತಿಂಗಳುಗಳ ಕಾಲ ವಿಶ್ವದ ನಂಬರ್ 1 ಶ್ರೇಯಾಂಕವನ್ನು ಹೊಂದಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್