
ಚಿಲಿಯ ಕಾಡುಗಳಲ್ಲಿ ಬೆಂಕಿ(Fire) ತನ್ನ ಕೆನ್ನಾಲಿಗೆ ಚಾಚಿದೆ, ಕಾಡ್ಗಿಚ್ಚಿಗೆ ಅಲ್ಲಿಯ ಪಕ್ಷಿ, ಪ್ರಾಣಿ ಸಂಕುಲ, ಮನುಷ್ಯರು ಕೂಡ ನಲುಗಿಹೋಗಿದ್ದಾರೆ. ಇದುವರೆಗೆ 120ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದಲ್ಲದೇ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಮತ್ತೊಂದೆಡೆ, ಚಿಲಿಯ ರಾಷ್ಟ್ರೀಯ ವಿಪತ್ತು ತಡೆಗಟ್ಟುವಿಕೆ ಮತ್ತು ಪ್ರತಿಕ್ರಿಯೆ ಸೇವೆ (ಸೆನಾಪ್ರೆಡ್) ದೇಶಾದ್ಯಂತ ಪ್ರಸ್ತುತ 161 ಕಾಡುಗಳು ಬೆಂಕಿಯಲ್ಲಿ ಬೇಯುತ್ತಿವೆ.
ವಾಲ್ಪಾರೈಸೊ ಮತ್ತು ವಿನಾ ಡೆಲ್ ಮಾರ್ ಸೇರಿದಂತೆ ಕರಾವಳಿ ಸಮುದಾಯಗಳು ಹೊಗೆಯಿಂದ ತೊಂದರೆಗೀಡಾಗಿರುವುದನ್ನು ನೋಡಿದ ನಂತರ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು.
ರಕ್ಷಣಾ ಕಾರ್ಯಕರ್ತರೊಂದಿಗೆ ಸಹಕರಿಸುವಂತೆ ಬೋರಿಕ್ ಚಿಲಿಯವರಿಗೆ ಮನವಿ ಮಾಡಿದರು . ಜಾಗ ಖಾಲಿ ಮಾಡುವಂತೆ ಕೇಳಿದರೆ ಹಿಂಜರಿಯಬೇಡಿ ಎಂದು ಹೇಳಿದರು. ಬೆಂಕಿ ವೇಗವಾಗಿ ಹರಡುತ್ತಿದ್ದು, ಹವಾಮಾನ ವೈಪರೀತ್ಯದಿಂದ ನಿಯಂತ್ರಿಸಲು ಕಷ್ಟವಾಗುತ್ತಿದೆ. ತಾಪಮಾನ ಹೆಚ್ಚಿದೆ, ಗಾಳಿ ಜೋರಾಗಿ ಬೀಸುತ್ತಿದೆ ಮತ್ತು ತೇವಾಂಶ ಕಡಿಮೆಯಾಗಿದೆ.
ಮತ್ತಷ್ಟು ಓದಿ:Forest Fire: ಕಾಡ್ಗಿಚ್ಚಿನಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ 250 ಹೆಕ್ಟರ್ನಷ್ಟು ಅರಣ್ಯ ಸಂಪತ್ತು ಹಾನಿ
ಹೆಚ್ಚುವರಿಯಾಗಿ, ರಕ್ಷಣಾ ಸಚಿವಾಲಯವು ಪೀಡಿತ ಪ್ರದೇಶಗಳಿಗೆ ಹೆಚ್ಚುವರಿ ಮಿಲಿಟರಿ ಸಿಬ್ಬಂದಿಯನ್ನು ಕಳುಹಿಸುತ್ತದೆ ಮತ್ತು ಅಗತ್ಯವಿರುವ ಎಲ್ಲಾ ಸರಬರಾಜುಗಳನ್ನು ಒದಗಿಸುತ್ತದೆ ಎಂದು ಅಧ್ಯಕ್ಷರು ಹೇಳಿದರು. ಬೆಂಕಿ ಸಂತ್ರಸ್ತರ ಗೌರವಾರ್ಥ ಫೆಬ್ರವರಿ 5 ಮತ್ತು ಫೆಬ್ರವರಿ 6 ರಾಷ್ಟ್ರೀಯ ಶೋಕಾಚರಣೆಯ ದಿನಗಳನ್ನು ಘೋಷಿಸಿದರು.
ಕಳೆದ ವರ್ಷವೂ ಬೆಂಕಿ ಕಾಣಿಸಿಕೊಂಡಿತ್ತು
ಇದರಿಂದಾಗಿ ಮಧ್ಯ ಚಿಲಿಯ ಹಲವು ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲಾಯಿತು. ಕಳೆದ ವರ್ಷ ಫೆಬ್ರವರಿಯಲ್ಲಿ, ದೇಶದಲ್ಲಿ ಬೆಂಕಿ 400,000 ಹೆಕ್ಟೇರ್‌ಗಿಂತಲೂ ಹೆಚ್ಚು ಪ್ರದೇಶದಲ್ಲಿ ಹರಡಿತು ಮತ್ತು 22 ಕ್ಕೂ ಹೆಚ್ಚು ಜನರು ಸುಟ್ಟು ಕರಕಲಾಗಿದ್ದಾರೆ.
ಚಿಲಿ ದೇಶದ ಅಧ್ಯಕ್ಷ ಬ್ರಿಜೆ ಬೋರಿಕ್ ಹೆಚ್ಚಿನ ಜನನಿಬಿಡ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲು ಮಿಲಿಟರಿ ಪಡೆಗಳನ್ನು ಕಳುಹಿಸಿದ್ದರು. ಫೆಬ್ರವರಿ 2 ರಂದು ಪ್ರಾರಂಭವಾದ ಬೆಂಕಿ ಸಾವಿರಾರು ಹೆಕ್ಟೇರ್ ಕಾಡುಗಳನ್ನು ನಾಶಪಡಿಸಿದೆ.
ಚಿಲಿಯಲ್ಲಿ 92 ಕಡೆಗಳಲ್ಲಿ ಬೆಂಕಿ ಉರಿಯುತ್ತಿದ್ದು, 43,000 ಹೆಕ್ಟೇರ್‌ಗೂ ಹೆಚ್ಚು ಅರಣ್ಯ ಪ್ರದೇಶ ಬೆಂಕಿಗೆ ಹೊತ್ತಿ ಉರಿದಿದೆ ಎಂದು ಚಿಲಿಯ ಆಂತರಿಕ ಸಚಿವ ಕೆರೊಲಿನಾ ತೋಹಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಜೊತೆಗೆ 1,100 ಕ್ಕೂ ಹೆಚ್ಚು ಮನೆಗಳು ಈಗಾಗಲೇ ಹಾನಿಗೊಳಗಾಗಿವೆ ಎಂದು ತೋಹಾ ಹೇಳಿದ್ದಾರೆ.
ಚಿಲಿ ಅರಣ್ಯದಲ್ಲಿ ಉಂಟಾದ ಭಯಾನಕ ಕಾಡ್ಗಿಚ್ಚಿನಿಂದ ಜನರು ಪ್ರಾಣ ಕಳೆದುಕೊಂಡಿದ್ದು ಮತ್ತು ಮನೆಗಳು ಸುಟ್ಟು ಬೂದಿಯಾಗಿರೋದನ್ನು ಆ ದೇಶದ ಅಧ್ಯಕ್ಷ ಒಪ್ಪಿಕೊಂಡಿದ್ದು, ಪೂರಕ ಸಂಪನ್ಮೂಲಗಳನ್ನು ಒದಗಿಸಲು ಸರ್ಕಾರವು ಸಕ್ರಿಯವಾಗಿದೆ ಎಂದು ಚಿಲಿಯರಿಗೆ ಭರವಸೆ ನೀಡಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ