ದೆಹಲಿ: ಭಾರತದಲ್ಲಿರುವ ಚೀನಿಯರನ್ನು ವಾಪಾಸ್ ಕರೆಸಿಕೊಳ್ಳಲು ಚೀನಾ ನಿರ್ಧರಿಸಿದೆ. ಭಾರತದಲ್ಲಿ ಕೊರೊನಾ ಹೆಚ್ಚಳ, ಗಡಿಯಲ್ಲಿ ಉದ್ವಿಗ್ನತೆ ಹಿನ್ನೆಲೆ ಚೀನಾ ಈ ನಿರ್ಧಾರಕ್ಕೆ ಬಂದಿದೆ. ಚೀನಿಯರನ್ನು ವಾಪಾಸ್ ಕರೆಸಿಕೊಳ್ಳುವ ಬಗ್ಗೆ ಚೀನಾ ರಾಯಭಾರಿ ಕಚೇರಿ ವೆಬ್ ಸೈಟ್ ನಲ್ಲಿ ನೊಟೀಸ್ ಪ್ರಕಟಿಸಲಾಗಿದೆ.
ಮೇ 27ರ ಒಳಗೆ ರಿಜಿಸ್ಟರ್ ಮಾಡಿಸಿಕೊಳ್ಳಿ
ಭಾರತದಲ್ಲಿರುವ ಚೀನಾ ವಿದ್ಯಾರ್ಥಿಗಳು, ಪ್ರವಾಸಿಗರು, ಬ್ಯುಸಿನೆಸ್ ಮನ್ ಗಳು ವಾಪಸ್ ಆಗುವಂತೆ ವೆಬ್ ಸೈಟ್ ನಲ್ಲಿ ಸಲಹೆ ನೀಡಲಾಗಿದೆ. ವಿಶೇಷ ವಿಮಾನಗಳ ಮೂಲಕ ತಕ್ಷಣ ವಾಪಸ್ ಆಗುವಂತೆ ಚೀನಾ ಸಲಹೆ ನೀಡಿದೆ. ಮೇ 27ರ ಒಳಗೆ ರಿಜಿಸ್ಟರ್ ಮಾಡಿಸಿಕೊಳ್ಳುವಂತೆ ಚೀನಾ ಸರಕಾರ ಸೂಚನೆ ನೀಡಿದೆ.
Published On - 4:21 pm, Mon, 25 May 20