ಚೀನಾದ ರೆಸ್ಟೋರೆಂಟ್‌ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಓರ್ವ ಸಾವನ್ನಪ್ಪಿದ್ದು, 20ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಚೀನಾದ ರೆಸ್ಟೋರೆಂಟ್‌ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಓರ್ವ ಸಾವನ್ನಪ್ಪಿದ್ದು, 20ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಚೀನಾದ ಉತ್ತರದ ಪಟ್ಟಣವೊಂದರಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಹೆಬೈ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದು, 22 ಮಂದಿ ಗಾಯಗೊಂಡಿದ್ದಾರೆ.
ರಾಜಧಾನಿ ಬೀಜಿಂಗ್ನಿಂದ ಪೂರ್ವಕ್ಕೆ 50 ಕಿ.ಮೀಗೂ ಕಡಿಮೆ ದೂರದಲ್ಲಿರುವ ಸಾನ್ಹೆ ನಗರದ ವಸತಿ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ.
ಈ ಸ್ಫೋಟಕ್ಕೆ ಫ್ರೈಡ್ ಚಿಕನ್ ಅಂಗಡಿಯಲ್ಲಿ ಅನಿಲ ಸೋರಿಕೆ ಕಾರಣ ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ 36 ತುರ್ತು ವಾಹನಗಳು ಮತ್ತು 154 ಸಿಬ್ಬಂದಿಯನ್ನು ರವಾನಿಸಲಾಗಿದೆ. ನಗರದ ಲಾಂಗ್ಫಾಂಗ್ ಅಗ್ನಿಶಾಮಕ ಇಲಾಖೆ ತಿಳಿಸಿದೆ.
ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ, ಬೆಳಗಿನ ಸಮಯದಲ್ಲಿ ಅತಿ ಹೆಚ್ಚು ಜನ ಸಂಖ್ಯೆ ಇರುವ ನಗರವು ಸ್ಫೋಟದಿಂದಾಗಿ ದಟ್ಟಹೊಗೆಯಿಂದ ಆವೃತವಾಗಿತ್ತು.
ಸ್ಫೋಟದ ಚಿತ್ರಗಳು
1 dead, 22 others were injured in a suspected gas explosion accident at a restaurant in Yanjiao, north China’s Hebei on Wednesday. Rescue work is underway: local authorities pic.twitter.com/ImCkfRxlZW
— People’s Daily, China (@PDChina) March 13, 2024
ಕಳೆದ ತಿಂಗಳು ನಾನ್ಜಿಂಗ್ನ ವಸತಿ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 15 ಮಂದಿ ಸಾವನ್ನಪ್ಪಿದ್ದರು ಮತ್ತು 44 ಜನರು ಗಾಯಗೊಂಡಿದ್ದರು. ಜನವರಿಯಲ್ಲಿ ಸೆಂಟ್ರಲ್ ಸಿಟಿ ಕ್ಸಿನ್ಯುನಲ್ಲಿನ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡು 12ಕ್ಕೂ ಅಧಿಕ ಮಂದಿ ಸಾವೀಗೀಡಾಗಿದ್ದರು.
ಕಳೆದ ಜೂನ್‌ನಲ್ಲಿ, ದೇಶದ ವಾಯುವ್ಯದಲ್ಲಿರುವ ಬಾರ್ಬೆಕ್ಯೂ ರೆಸ್ಟೋರೆಂಟ್‌ನಲ್ಲಿ ಸಂಭವಿಸಿದ ಸ್ಫೋಟದಲ್ಲಿ 31 ಮಂದಿ ಸಾವನ್ನಪ್ಪಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:27 am, Wed, 13 March 24