ವಾಟ್ಸಾಪ್ ಸಂದೇಶಗಳ ಮೂಲಕ ಧರ್ಮನಿಂದನೆ: ಪಾಕಿಸ್ತಾನದ ವಿದ್ಯಾರ್ಥಿಗೆ ಮರಣದಂಡನೆ, ವಿದ್ಯಾರ್ಥಿನಿಗೆ ಜೀವಾವಧಿ ಶಿಕ್ಷೆ

ಮುಸ್ಲಿಮರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ 22 ವರ್ಷದ ವಿದ್ಯಾರ್ಥಿಯು ಧರ್ಮನಿಂದೆಯ ವಿಷಯವನ್ನು ಹಂಚಿಕೊಂಡಿದ್ದಾನೆ. ಹಾಗಾಗಿ ಮರಣದಂಡನೆ ವಿಧಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಧರ್ಮನಿಂದನೆ ವಿಷಯವನ್ನು ಹಂಚಿಕೊಂಡಿದ್ದಕ್ಕಾಗಿ ಹದಿಹರೆಯದ ವಿದ್ಯಾರ್ಥಿನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ವಾಟ್ಸಾಪ್ ಸಂದೇಶಗಳ ಮೂಲಕ ಧರ್ಮನಿಂದನೆ: ಪಾಕಿಸ್ತಾನದ ವಿದ್ಯಾರ್ಥಿಗೆ ಮರಣದಂಡನೆ, ವಿದ್ಯಾರ್ಥಿನಿಗೆ ಜೀವಾವಧಿ ಶಿಕ್ಷೆ
ದೈವನಿಂದನೆ ಮಾಡಿದ ಪಾಕಿಸ್ತಾನದ ವಿದ್ಯಾರ್ಥಿಗೆ ಗಲ್ಲುಶಿಕ್ಷೆ
Follow us
ಸಾಧು ಶ್ರೀನಾಥ್​
|

Updated on:Mar 13, 2024 | 2:34 PM

ಪ್ರವಾದಿ ಮುಹಮ್ಮದ್ (Prophet Muhammad) ಮತ್ತು ಆತನ ಪತ್ನಿಯರ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಿ ಫೋಟೋಗಳು ಮತ್ತು ವೀಡಿಯೊಗಳನ್ನು ಸಿದ್ಧಪಡಿಸಿದ್ದಕ್ಕಾಗಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನ್ಯಾಯಾಲಯವು 22 ವರ್ಷದ ವಿದ್ಯಾರ್ಥಿಗೆ ಮರಣದಂಡನೆ ವಿಧಿಸಿದೆ. ಪಾಕಿಸ್ತಾನದಲ್ಲಿ 22 ವರ್ಷದ ವಿದ್ಯಾರ್ಥಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಜೊತೆಗೆ ವಾಟ್ಸಾಪ್ ಸಂದೇಶಗಳ (WhatsApp messages) ಮೂಲಕ ಧರ್ಮನಿಂದೆಯ ಆರೋಪದ ಮೇಲೆ 17 ವರ್ಷದ ಯುವತಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನ್ಯಾಯಾಲಯದ (Pakistan Punjab Province court) ನ್ಯಾಯಾಧೀಶರ ಆದೇಶವನ್ನು ಉಲ್ಲೇಖಿಸಿ, ಬಿಬಿಸಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಮುಸ್ಲಿಮರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ 22 ವರ್ಷದ ವಿದ್ಯಾರ್ಥಿಯು ಧರ್ಮನಿಂದೆಯ ವಿಷಯವನ್ನು ಹಂಚಿಕೊಂಡಿದ್ದಾನೆ. ಹಾಗಾಗಿ ಮರಣದಂಡನೆ ವಿಧಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಧರ್ಮನಿಂದನೆ ವಿಷಯವನ್ನು ಹಂಚಿಕೊಂಡಿದ್ದಕ್ಕಾಗಿ ಹದಿಹರೆಯದ ವಿದ್ಯಾರ್ಥಿನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಆದರೆ ಇಬ್ಬರೂ ಆರೋಪಗಳನ್ನು ನಿರಾಕರಿಸಿದರು ಮತ್ತು ಅವರ ವಕೀಲರು ಬಿಬಿಸಿ ವರದಿಯ ಪ್ರಕಾರ “ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ್ದಾರೆ” ಎಂದು ವಾದಿಸಿದರು.

ಲಾಹೋರ್‌ನಲ್ಲಿರುವ ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ (ಎಫ್‌ಐಎ Pakistan’s Federal Investigation Agency -FIA) ಸೈಬರ್ ಕ್ರೈಮ್ ಘಟಕವು 2022 ರಲ್ಲಿ ಆ ಇಬ್ಬರ ವಿರುದ್ಧ ದೂರು ದಾಖಲಿಸಿತ್ತು.

ಇದನ್ನೂ ಓದಿ: ಚಂದ್ರ ಕಣ್ಣಿಗೆ ಬಿದ್ದರೆ ದಯವಿಟ್ಟು ತಿಳಿಸಿ: ಸೌದಿ ಅರೇಬಿಯಾದ ನ್ಯಾಯಾಲಯದಿಂದ ಸಾರ್ವಜನಿಕರಿಗೆ ಬಿನ್ನಹ

ಮೂರು ವಿಭಿನ್ನ ಮೊಬೈಲ್ ಫೋನ್ ಸಂಖ್ಯೆಗಳಿಂದ ಧರ್ಮನಿಂದೆಯ ವಿಷಯವಿರುವ ವೀಡಿಯೊಗಳು ಮತ್ತು ಫೋಟೋಗಳನ್ನು ಅವರು ಸ್ವೀಕರಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ದೂರುದಾರನ ಫೋನ್ ಅನ್ನು ಪರಿಶೀಲಿಸಿದ ನಂತರ ಅಗೌರವ ಸಂದೇಶಗಳನ್ನು (derogatory words) ಕಳುಹಿಸಲಾಗಿದೆ ಎಂದು ತನಿಖಾ ಸಂಸ್ಥೆ ದೃಢಪಡಿಸಿತು. ಮುಸಲ್ಮಾನರ ಭಾವನೆಗಳನ್ನು ಕೆರಳಿಸುವಂತಹ ಉದ್ದೇಶದೊಂದಿಗೆ ಅವರು ಈ ಕುಕೃತ್ಯವೆಸಗಿದ್ದಾರೆ ಎಂದು ಕೋರ್ಟ್​​ ಅಭಿಪ್ರಾಯಪಟ್ಟಿತು.

ತನ್ನ ಮಗನ ಮೇಲಿನ ತೀರ್ಪಿನ ವಿರುದ್ಧ ಲಾಹೋರ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುತ್ತಿರುವುದಾಗಿ 22 ವರ್ಷದ ವಿದ್ಯಾರ್ಥಿಯ ತಂದೆ ಬಿಬಿಸಿಗೆ ತಿಳಿಸಿದರು.

ಪಾಕಿಸ್ತಾನದಲ್ಲಿ ಧರ್ಮನಿಂದನೆಗೆ ಮರಣದಂಡನೆ ವಿಧಿಸಲಾಗುತ್ತದೆ. ಧರ್ಮನಿಂದೆಯ ವಿರುದ್ಧದ ಕಾನೂನುಗಳನ್ನು ಮೊದಲು ಭಾರತದ ಬ್ರಿಟಿಷ್ ಆಡಳಿತಗಾರರು ಜಾರಿಗೆ ತಂದರು ಮತ್ತು 1980 ರ ದಶಕದಲ್ಲಿ ಪಾಕಿಸ್ತಾನದ ಮಿಲಿಟರಿ ಸರ್ಕಾರದ ಅಡಿಯಲ್ಲಿ ಅದನ್ನು ವಿಸ್ತರಿಸಲಾಯಿತು.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:29 pm, Wed, 13 March 24

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ