ಚಂದ್ರ ಕಣ್ಣಿಗೆ ಬಿದ್ದರೆ ದಯವಿಟ್ಟು ತಿಳಿಸಿ: ಸೌದಿ ಅರೇಬಿಯಾದ ನ್ಯಾಯಾಲಯದಿಂದ ಸಾರ್ವಜನಿಕರಿಗೆ ಬಿನ್ನಹ

Crescent Moon and Ramazan in Islam: ರಂಜಾನ್ ಮಾಸದಂದು ಸೌದಿ ಅರೇಬಿಯಾದಲ್ಲಿ ಅರ್ಧಚಂದ್ರನ ದರ್ಶನವಾದ ಬಳಿಕ ಮುಸ್ಲಿಮರು ಉಪವಾಸ ಶುರು ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸೌದಿಯಲ್ಲಿ ಯಾರಿಗಾದರೂ ಕಣ್ಣಿಗೆ ಅರ್ಧಚಂದ್ರ ಬಿದ್ದರೆ ಸಮೀಪದ ಕೋರ್ಟ್​ಗೆ ಹೋಗಿ ಸಾಕ್ಷ್ಯ ತಿಳಿಸಿ ಎಂದು ಅಲ್ಲಿನ ಸುಪ್ರೀಂಕೋರ್ಟ್ ಸಾರ್ವಜನಿಕರಿಗೆ ಮನವಿ ಮಾಡಿದೆ. ಇವತ್ತು ಭಾನುವಾರ ಅರ್ಧಚಂದ್ರ ಕಾಣಿಸಿದರೆ ಸೌದಿಯಲ್ಲಿ ಸೋಮವಾರದಿಂದ ಉಪವಾಸ ಶುರುವಾಗುತ್ತದೆ. ಭಾರತದಲ್ಲಿ ಮಂಗಳವಾರ ಉಪವಾಸ ಆರಂಭವಾಗುತ್ತದೆ.

ಚಂದ್ರ ಕಣ್ಣಿಗೆ ಬಿದ್ದರೆ ದಯವಿಟ್ಟು ತಿಳಿಸಿ: ಸೌದಿ ಅರೇಬಿಯಾದ ನ್ಯಾಯಾಲಯದಿಂದ ಸಾರ್ವಜನಿಕರಿಗೆ ಬಿನ್ನಹ
ಅರ್ಧಚಂದ್ರ
Follow us
|

Updated on:Mar 11, 2024 | 9:51 AM

ರಿಯಾಧ್, ಮಾರ್ಚ್ 10: ಮುಸ್ಲಿಮರಿಗೆ ಪವಿತ್ರ ಎನಿಸಿರುವ ರಂಜಾನ್ ಹಬ್ಬದ (ramazan month festival) ಉಪವಾಸಕ್ಕೆ ಕ್ಷಣಗಣನೆ ಶುರುವಾಗಿದೆ. ಇದೇ ವೇಳೆ, ರಂಜಾನ್ ತಿಂಗಳಲ್ಲಿ ಆಗಸದಲ್ಲಿ ಮೊದಲ ಚಂದ್ರನ (crescent moon) ದರ್ಶನಕ್ಕಾಗಿ ಮುಸ್ಲಿಮರು ಭಕ್ತಿಯಿಂದ ಕಾಯುತ್ತಿದ್ದಾರೆ. ಚಂದ್ರನ ದರುಶನ ಆಗುವವರೆಗೂ ರಂಜಾನ್ ಉಪವಾಸ ಶುರುವಾಗುವುದಿಲ್ಲ. ಇಸ್ಲಾಮ್ ಧರ್ಮ ಹುಟ್ಟಿದ ಸೌದಿ ಅರೇಬಿಯಾದಲ್ಲಿ ರಂಜಾನ್ ತಿಂಗಳಲ್ಲಿ ಮೊದಲ ಚಂದ್ರನ ದರ್ಶನ ಲಭಿಸುವುದು ಬಹಳ ಮುಖ್ಯ. ಹೀಗಾಗಿ, ಸೌದಿಯಲ್ಲಿ ಯಾರ ಕಣ್ಣಿಗಾದರೂ ಚಂದ್ರ ಕಾಣಿಸಿದರೆ ಅದರ ಮಾಹಿತಿಯನ್ನು ದಯವಿಟ್ಟು ತಿಳಿಸಿ ಎಂದು ಸೌದಿ ಅರೇಬಿಯಾದ ಸರ್ವೋಚ್ಚ ನ್ಯಾಯಾಲಯ ತನ್ನ ಸಾರ್ವಜನಿಕರಿಗೆ ತಿಳಿಸಿದೆ.

ಯಾರೇ ಆದರೂ ಇಂದು ಭಾನುವಾರ ಚಂದ್ರನನ್ನು ಬರಿಗಣ್ಣಿನಿಂದಲಾದರೂ ಅಥವಾ ಬೈನಾಕುಲರ್​ನಿಂದಲಾದರೂ ನೋಡಿದರೆ ಸಮೀಪದ ಕೋರ್ಟ್​ಗೆ ಹೋಗಿ ಸಾಕ್ಷ್ಯ ತಿಳಿಸಿ ಎಂದು ಅಲ್ಲಿನ ಸುಪ್ರೀಂಕೋರ್ಟ್ ಸೂಚಿಸಿದೆ.

ಇವತ್ತು ಭಾನುವಾರ ಸಾರ್ವಜನಿಕರಿಗೆ ಚಂದ್ರ ಕಂಡಿದ್ದೇ ಆದಲ್ಲಿ ರಂಜಾನ್ ಹಬ್ಬದ ಉಪವಾಸ ಸೋಮವಾರ (ಮಾ. 11) ಶುರುವಾಗುತ್ತದೆ. ಭಾರತದಲ್ಲಿ ಮಂಗಳವಾರ ಉಪವಾಸ ಆರಂಭವಾಗುತ್ತದೆ. ಹೀಗಾಗಿ, ಭಾನುವಾರ ಸೌದಿಯ ಆಗಸದಲ್ಲಿ ಅರ್ಧಚಂದ್ರ ಕಾಣಿಸುವುದು ಬಹಳ ಮುಖ್ಯ.

ಇದನ್ನೂ ಓದಿ: ಪಾಕಿಸ್ತಾನ: ಎರಡನೇ ಬಾರಿ ಅಧ್ಯಕ್ಷರಾದ ಅಸಿಫ್ ಅಲಿ ಜರ್ದಾರಿ; 10 ವರ್ಷ ಬಳಿಕ ಮತ್ತೆ ಅಗ್ರಪಟ್ಟ

ಇಸ್ಲಾಮ್ ಧರ್ಮದಲ್ಲಿ ರಂಜಾನ್ ಮತ್ತು ಅರ್ಧಚಂದ್ರನ ಮಹತ್ವ ಏನು?

ಇಸ್ಲಾಂ ಧರ್ಮ ಹುಟ್ಟಿದ್ದು ಸೌದಿ ಅರೇಬಿಯಾದಲ್ಲಿ. ಪೂರ್ಣ ಬರಗಾಡಾದ ಅಲ್ಲಿ ವ್ಯಾಪಾರಿಗಳು ರಾತ್ರಿ ಹೊತ್ತು ಪ್ರಯಾಣ ಮಾಡುತ್ತಿದ್ದರು. ಅವರಿಗೆ ಆಗ ಮಾರ್ಗಸೂಚಿಯಂತೆ ಇದ್ದದ್ದು ಚಂದ್ರನೇ. ಹೀಗಾಗಿ, ಅಲ್ಲಿ ಚಂದ್ರ ಬಹಳ ಮುಖ್ಯ. ಬಹಳಷ್ಟು ಮುಸ್ಲಿಮ್ ದೇಶಗಳಲ್ಲಿರುವ ಲಾಂಛನದಲ್ಲಿ ಚಂದ್ರ, ನಕ್ಷತ್ರಗಳು ಇರುತ್ತವೆ.

ಇನ್ನು ಇಸ್ಲಾಂ ಧರ್ಮ ಸಂಸ್ಥಾಪಕ ಮತ್ತು ಪರಮಾತ್ಮನ ಪ್ರವಾದಿ ಎನಿಸಿದ ಮೊಹಮ್ಮದ್​ಗೆ ದೇವರ ಸಾಕ್ಷಾತ್ಕಾರ ಆದ ದಿನವೇ ರಂಜಾನ್ ಹಬ್ಬದ ಆರಂಭವಾಗಿ ಪರಿಗಣಿಸಲಾಗುತ್ತದೆ. ಪ್ರವಾದಿ ಮೊಹಮ್ಮದರಿಗೆ ಕುರಾನ್​ನ ಅಂಶಗಳನ್ನು ದೇವರು ಕೊಟ್ಟಾಗ ಆಗಸದಲ್ಲಿ ಅರ್ಧಚಂದ್ರ ಸಾಕ್ಷ್ಯವಾಗಿತ್ತು. ಹೀಗಾಗಿ, ಚಂದ್ರನ ದರ್ಶನ ಆದ ಬಳಿಕ ರಂಜಾನ್ ಉಪವಾಸ ಆರಂಭವಾಗುತ್ತದೆ. ಹಿಂದೂ ಮಾಸಗಳಂತೆ ಇಸ್ಲಾಮ್​ನಲ್ಲೂ ತಿಂಗಳುಗಳು ಅಮಾವಾಸ್ಯೆಯಿಂದ ಅಮಾವಾಸ್ಯೆಯವರೆಗೂ ಇರುತ್ತವೆ. ಈ ಬಾರಿಯ ಅಮಾವಾಸ್ಯೆಯ ಮರುದಿನ ರಂಜಾನ್ ತಿಂಗಳು ಶುರುವಾಗಿದೆ. ಅಮಾವಾಸ್ಯೆ ನಂತರದ ರಾತ್ರಿಯಲ್ಲಿ ಚಂದ್ರನ ದರ್ಶನ ಆಗುತ್ತಿರುವಂತೆಯೇ ಉಪವಾಸಕ್ಕೆ ಸೂಚನೆ ಸಿಕ್ಕಂತೆ.

ಇದನ್ನೂ ಓದಿ: ಖಲಿಸ್ತಾನಿ ಬೆಂಬಲಿಗರ 300ಕ್ಕೂ ಹೆಚ್ಚು ಬ್ಯಾಂಕ್ ಖಾತೆ ವಶಪಡಿಸಿಕೊಂಡ ರಿಷಿ ಸುನಕ್ ಸರ್ಕಾರ

ಒಂದು ತಿಂಗಳಿರುವ ರಂಜಾನ್​ನ ವೇಳೆ ನರಕದ ಬಾಗಿಲು ಮುಚ್ಚಿ, ಬರೀ ಸ್ವರ್ಗದ ಬಾಗಿಲು ಮಾತ್ರವೇ ತೆರೆದಿರುತ್ತದೆ. ಈ 30 ದಿನಗಳ ಕಾಲ ಕಾಯ, ವಾಚಾ, ಮನಸಾ ಶುದ್ಧವಿಟ್ಟುಕೊಳ್ಳಬೇಕು. ಅದಕ್ಕಾಗಿ ಉಪವಾಸ ಮಾಡಲಾಗುತ್ತದೆ. ಈ ಅವಧಿಯಲ್ಲಿ ಮುಸ್ಲಿಮರು ತಮ್ಮ ಕೈಲಾದಷ್ಟು ದಾನವನ್ನು ಬಡಬಗ್ಗರಿಗೆ ಮಾಡುತ್ತಾರೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:25 pm, Sun, 10 March 24