ಪಾಕಿಸ್ತಾನ: ಎರಡನೇ ಬಾರಿ ಅಧ್ಯಕ್ಷರಾದ ಅಸಿಫ್ ಅಲಿ ಜರ್ದಾರಿ; 10 ವರ್ಷ ಬಳಿಕ ಮತ್ತೆ ಅಗ್ರಪಟ್ಟ

Asif Ali Zardari Takes Oath As Pakistan's President: ದಿವಂಗತ ಬೇನಜೀರ್ ಭುಟ್ಟೋ ಅವರ ಪತಿ ಅಸಿಫ್ ಅಲಿ ಜರ್ದಾರಿ ಪಾಕಿಸ್ತಾನದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 2008ರಿಂದ 2013ರವರೆಗೂ ಅವರು ಅಧ್ಯಕ್ಷರಾಗಿದ್ದರು. ಈಗ ಎರಡನೇ ಬಾರಿ ಆ ಸ್ಥಾನ ಅಲಂಕರಿಸುತ್ತಿದ್ದಾರೆ. ನಿನ್ನೆ ಶನಿವಾರ ಪಾಕಿಸ್ತಾನದ ಸಂಸದರು ಮತ್ತು ಶಾಸಕರು ಸೇರಿ ಅಸಿಫ್ ಅಲಿ ಜರ್ದಾರಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಬಹುಮತದಿಂದ ಆಯ್ಕೆ ಮಾಡಿದ್ದರು.

ಪಾಕಿಸ್ತಾನ: ಎರಡನೇ ಬಾರಿ ಅಧ್ಯಕ್ಷರಾದ ಅಸಿಫ್ ಅಲಿ ಜರ್ದಾರಿ; 10 ವರ್ಷ ಬಳಿಕ ಮತ್ತೆ ಅಗ್ರಪಟ್ಟ
ಅಸಿಫ್ ಅಲಿ ಜರ್ದಾರಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 10, 2024 | 5:05 PM

ಇಸ್ಲಾಮಾಬಾದ್, ಮಾರ್ಚ್ 10: ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಪಕ್ಷದ ಸಹ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ (Asif Ali Zardari) ಇಂದು ಭಾನುವಾರ ಪಾಕಿಸ್ತಾನದ 14ನೇ ಅಧ್ಯಕ್ಷರಾಗಿ ಪ್ರಮಾಣವಚನ (oath taking ceremony) ಸ್ವೀಕರಿಸಿದ್ದಾರೆ. ನಿನ್ನೆ ಪಾಕಿಸ್ತಾನದ ಎಲ್ಲಾ ಸಂಸದರು, ಶಾಸಕರು ಸೇರಿ ಬಹುಮತದಿಂದ ಜರ್ದಾರಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದರು. ಅಸಿಫ್ ಅಲಿ ಜರ್ದಾರಿ 411 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಮೆಹಮೂದ್ ಖಾನ್ ಅಚಕ್​ಝೈ (Mehboob Khan Achakzai) ಅವರಿಗೆ 181 ವೋಟು ಲಭಿಸಿತು. ಮೆಹಮೂದ್ ಖಾನ್ ಅವರು ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷದ ಬೆಂಬಲದಿಂದ ಸ್ಪರ್ಧಿಸಿದ್ದರು. ತಮ್ಮ ಪ್ರತಿಸ್ಪರ್ಧಿ ವಿರುದ್ಧ ಎರಡು ಪಟ್ಟಿಗೂ ಹೆಚ್ಚು ಮತಗಳ ಅಂತರದಿಂದ ಗೆದ್ದ ಜರ್ದಾರಿ ಪಾಕಿಸ್ತಾನದ 14ನೇ ಅಧ್ಯಕ್ಷರಾಗಿದ್ದಾರೆ.

ಇಸ್ಲಾಮಾಬಾದ್​ನ ಅಧ್ಯಕ್ಷೀಯ ಭವನವಾದ ಏವನ್-ಎ-ಸದರ್​ನಲ್ಲಿ ಭಾನುವಾರ ಸಂಜೆ 4ಕ್ಕೆ ನಡೆದ ಸಮಾರಂಭದಲ್ಲಿ ಪಾಕಿಸ್ತಾನದ ಮುಖ್ಯನ್ಯಾಯಮೂರ್ತಿ ಖಾಜಿ ಫೇಜ್ ಇಸಾ ಅವರು ಪ್ರಮಾಣವಚನ ಬೋಧಿಸಿದ್ದಾರೆ. ಪಾಕಿಸ್ತಾನ ಪ್ರಧಾನಿ ಶಹಬಾಜ್ ಶರೀಫ್, ಪಾಕಿಸ್ತಾನದ ವಿವಿಧ ಸೇನಾ ಮುಖ್ಯಸ್ಥರು, ನಾಲ್ಕು ಪ್ರಾಂತ್ಯಗಳ ರಾಜ್ಯಪಾಲರು, ಮುಖ್ಯಮಂತ್ರಿಗಳು ಮೊದಲಾದವರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಇದನ್ನೂ ಓದಿ: ಖಲಿಸ್ತಾನಿ ಬೆಂಬಲಿಗರ 300ಕ್ಕೂ ಹೆಚ್ಚು ಬ್ಯಾಂಕ್ ಖಾತೆ ವಶಪಡಿಸಿಕೊಂಡ ರಿಷಿ ಸುನಕ್ ಸರ್ಕಾರ

ಅಸಿಫ್ ಅಲಿ ಜರ್ದಾರಿ ಅವರು ಪಾಕಿಸ್ತಾನದ ಮಾಜಿ ಪ್ರಧಾನಿ, ದಿವಂಗತೆ ಬೇನಜೀರ್ ಭುಟ್ಟೋ ಅವರ ಪತಿ. ಇವರ ಮಗ ಬಿಲಾವಲ್ ಭುಟ್ಟೋ ಹಿಂದಿನ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದರು. ಬಿಲಾವಲ್ ಅವರನ್ನು ಭವಿಷ್ಯದ ಪ್ರಧಾನಿ ಎಂದು ಪರಿಗಣಿಸಲಾಗಿದೆ.

1955ರಲ್ಲಿ ಜನಿಸಿದ ಅಸಿಫ್ ಅಲಿ ಜರ್ದಾರಿ ಅವರು 2008ರಿಂದ 2013ರವರೆಗೆ ಪಾಕಿಸ್ತಾನದ 11ನೇ ಅಧ್ಯಕ್ಷರಾಗಿದ್ದರು. ಹತ್ತು ವರ್ಷದ ಬಳಿಕ ಈಗ ಮತ್ತೊಮ್ಮೆ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ.

ಇದನ್ನೂ ಓದಿ: ರಷ್ಯಾ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಭಾರತೀಯರ ಶೀಘ್ರ ಬಿಡುಗಡೆ : ಕೇಂದ್ರ ಸರ್ಕಾರ

ಜರ್ದಾರಿ ವಿರುದ್ದ ಬಹಳಷ್ಟು ಕ್ರಿಮಿನಲ್ ಕೇಸ್​ಗಳಿದ್ದು, 11 ವರ್ಷ ಜೈಲುವಾಸ ಕೂಡ ಅನುಭವಿಸಿದ್ದಾರೆ. ಆದರೆ, ಯಾವ ಪ್ರಕರಣದಲ್ಲೂ ಅವರು ದೋಷಿ ಎಂಬುದು ಸಾಬೀತಾಗಿಲ್ಲ. ಸತತವಾಗಿ ಆರೋಪ, ನಿಂದನೆಗಳಿಂದ ಹೊಡೆತ ತಿನ್ನುತ್ತಾ ಬಂದಿರುವ ಜರ್ದಾರಿ ಅವರು ಕ್ಲಿಷ್ಟ ಸಂದರ್ಭಗಳನ್ನು ಬಹಳ ಸಂಯಮದಿಂದ ನಿಭಾಯಿಸುವ ಚಾಕಚಕ್ಯತೆ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಅಧ್ಯಕ್ಷರಾಗಿ ಅವರಿಂದ ಪಾಕಿಸ್ತಾನಿಗರು ಬಹಳ ನಿರೀಕ್ಷೆ ಇಟ್ಟುಕೊಂಡಿರಬಹುದು.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್