AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

China Restaurant Blast: ಚೀನಾದ ರೆಸ್ಟೋರೆಂಟ್​ನಲ್ಲಿ ಸ್ಫೋಟ, ಓರ್ವ ಸಾವು, 20ಕ್ಕೂ ಅಧಿಕ ಮಂದಿಗೆ ಗಾಯ

ಚೀನಾದ ರೆಸ್ಟೋರೆಂಟ್​ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಓರ್ವ ಸಾವನ್ನಪ್ಪಿದ್ದು, 20ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

China Restaurant Blast: ಚೀನಾದ ರೆಸ್ಟೋರೆಂಟ್​ನಲ್ಲಿ ಸ್ಫೋಟ, ಓರ್ವ ಸಾವು, 20ಕ್ಕೂ ಅಧಿಕ ಮಂದಿಗೆ ಗಾಯ
ಸ್ಫೋಟ
ನಯನಾ ರಾಜೀವ್
|

Updated on:Mar 13, 2024 | 9:37 AM

Share

ಚೀನಾದ ರೆಸ್ಟೋರೆಂಟ್​ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಓರ್ವ ಸಾವನ್ನಪ್ಪಿದ್ದು, 20ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಚೀನಾದ ರೆಸ್ಟೋರೆಂಟ್​ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಓರ್ವ ಸಾವನ್ನಪ್ಪಿದ್ದು, 20ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಚೀನಾದ ಉತ್ತರದ ಪಟ್ಟಣವೊಂದರಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಹೆಬೈ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದು, 22 ಮಂದಿ ಗಾಯಗೊಂಡಿದ್ದಾರೆ. ರಾಜಧಾನಿ ಬೀಜಿಂಗ್​ನಿಂದ ಪೂರ್ವಕ್ಕೆ 50 ಕಿ.ಮೀಗೂ ಕಡಿಮೆ ದೂರದಲ್ಲಿರುವ ಸಾನ್ಹೆ ನಗರದ ವಸತಿ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ.

ಈ ಸ್ಫೋಟಕ್ಕೆ ಫ್ರೈಡ್​ ಚಿಕನ್ ಅಂಗಡಿಯಲ್ಲಿ ಅನಿಲ ಸೋರಿಕೆ ಕಾರಣ ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ 36 ತುರ್ತು ವಾಹನಗಳು ಮತ್ತು 154 ಸಿಬ್ಬಂದಿಯನ್ನು ರವಾನಿಸಲಾಗಿದೆ. ನಗರದ ಲಾಂಗ್​ಫಾಂಗ್​ ಅಗ್ನಿಶಾಮಕ ಇಲಾಖೆ ತಿಳಿಸಿದೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ, ಬೆಳಗಿನ ಸಮಯದಲ್ಲಿ ಅತಿ ಹೆಚ್ಚು ಜನ ಸಂಖ್ಯೆ ಇರುವ ನಗರವು ಸ್ಫೋಟದಿಂದಾಗಿ ದಟ್ಟಹೊಗೆಯಿಂದ ಆವೃತವಾಗಿತ್ತು.

ಸ್ಫೋಟದ ಚಿತ್ರಗಳು

ಕಳೆದ ತಿಂಗಳು ನಾನ್​ಜಿಂಗ್​ನ ವಸತಿ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 15 ಮಂದಿ ಸಾವನ್ನಪ್ಪಿದ್ದರು ಮತ್ತು 44 ಜನರು ಗಾಯಗೊಂಡಿದ್ದರು. ಜನವರಿಯಲ್ಲಿ ಸೆಂಟ್ರಲ್ ಸಿಟಿ ಕ್ಸಿನ್ಯುನಲ್ಲಿನ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡು 12ಕ್ಕೂ ಅಧಿಕ ಮಂದಿ ಸಾವೀಗೀಡಾಗಿದ್ದರು.

ಕಳೆದ ಜೂನ್‌ನಲ್ಲಿ, ದೇಶದ ವಾಯುವ್ಯದಲ್ಲಿರುವ ಬಾರ್ಬೆಕ್ಯೂ ರೆಸ್ಟೋರೆಂಟ್‌ನಲ್ಲಿ ಸಂಭವಿಸಿದ ಸ್ಫೋಟದಲ್ಲಿ 31 ಮಂದಿ ಸಾವನ್ನಪ್ಪಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:27 am, Wed, 13 March 24