ಚೀನಾದಲ್ಲಿ ಮುಂದಿನ 90 ದಿನಗಳಲ್ಲಿ ಶೇ.60 ರಷ್ಟು ಮಂದಿ ಕೊರೊನಾ(Corona) ಸೋಂಕಿಗೆ ತುತ್ತಾಗಲಿದ್ದು, ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಳ್ಳಬಹುದು ಎಂದು ಸಾಂಕ್ರಾಮಿಕ ರೋಗ ಶಾಸ್ತ್ರಜ್ಞ ಎರಿಕ್ ಫೀಗಲ್ ಹೇಳಿದ್ದಾರೆ. ಮುಂದಿನ 90 ದಿನಗಳಲ್ಲಿ ಚೀನಾದ ಶೇಕಡಾ 60 ಕ್ಕಿಂತ ಹೆಚ್ಚು ಜನರು ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಅಂದಾಜಿಸಿದ್ದಾರೆ ಮತ್ತು ಲಕ್ಷಾಂತರ ಜನರು ಸಾವನ್ನಪ್ಪುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಕೋವಿಡ್-19 ರೋಗಗಿಗಳಿಗಾಗಿಯೇ ಬೀಜಿಂಗ್‌ನಲ್ಲಿ ಮೀಸಲಿಟ್ಟಿರುವ ಸ್ಮಶಾನವು ಈಗಾಗಲೇ ಮೃತದೇಹಗಳಿಂದ ತುಂಬಿದೆ. ಏಕೆಂದರೆ ವೈರಸ್ ಚೀನಾದ ರಾಜಧಾನಿಯ ಮೂಲಕ ವ್ಯಾಪಿಸುತ್ತಿದೆ, ಇದು ದೇಶದ ಸಾಂಕ್ರಾಮಿಕ ನಿರ್ಬಂಧಗಳ ಹಠಾತ್ ಸಡಿಲಗೊಳಿಸುವಿಕೆಯ ಕಾರಣದಿಂದಾಗಿ ಏಕಾಏಕಿ ಹೆಚ್ಚುತ್ತಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಮತ್ತಷ್ಟು ಓದಿ: China Covid Updates: ಚೀನಾದಲ್ಲಿ 2023ರ ವೇಳೆಗೆ 1 ಮಿಲಿಯನ್ ಮಂದಿ ಕೋವಿಡ್‌ನಿಂದ ಸಾವಿಗೀಡಾಗಬಹುದು: ವರದಿ
ಸದಾ ತನ್ನ ವೈಫಲ್ಯವನ್ನು ಮುಚ್ಚಿಡಲು ಯತ್ನಿಸುವ ಚೀನಾ ಸರ್ಕಾರವು ಕೋವಿಡ್‌ನಿಂದ ಸಾವಿಗೀಡಾದವರ ಅಧಿಕೃತ ಅಂಕಿಸಂಖ್ಯೆಯನ್ನು ಸರಿಯಾಗಿ ನೀಡುತ್ತಿಲ್ಲ. ಡಿ.4ರಿಂದ ಕೋವಿಡ್ ಸಾವಿನ ಪ್ರಕಟಣೆಯನ್ನೇ ಅದು ನಿಲ್ಲಿಸಿದೆ. ಇದಲ್ಲದೆ ಕೋವಿಡ್ ಹಾವಳಿ 3 ವರ್ಷದಿಂದ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಕೇವಲ 5,235 ಜನರು ಮಾತ್ರ ಸೋಂಕಿಗೆ (Virus) ಬಲಿಯಾಗಿದ್ದಾರೆ ಎಂದು ಸರ್ಕಾರ ಹೇಳುತ್ತದೆ.
ಆದರೆ ಬೀಜಿಂಗ್ ಹಾಗೂ ಚೀನಾದ ಇತರ ನಗರಗಳ ಬೀದಿ, ರುದ್ರಭೂಮಿಗಳಲ್ಲಿ ಸಂಚರಿಸಿದಾಗ ವಾಸ್ತವಿಕ ಚಿತ್ರಣವೇ ಬೇರೆ ಗೋಚರಿಸುತ್ತಿದೆ. ಮಾಧ್ಯಮ ಪ್ರತಿನಿಧಿಗಳು ಬೀಜಿಂಗ್‌ನ ಮೈಯುನ್ ಚಿತಾಗಾರಕ್ಕೆ ಹೋದಾಗ ಅಲ್ಲಿ, ಭಾರಿ ಪ್ರಮಾಣದ ಶವಗಳ ಸಾಲು ಕಂಡುಬಂದಿತ್ತು.
ಇದಲ್ಲದೆ, ಅನೇಕ ಶವಗಳು ಇನ್ನೂ ಕಾರಿನಲ್ಲೇ ಇವೆ’ ಎಂದು ಕೆಲವರು ಹೇಳಿದರು. ಚಿತಾಗಾರದ ಸಿಬ್ಬಂದಿಗಳು, ‘ನಮ್ಮ ಸಾಕಷ್ಟುನೌಕರರಿಗೆ ಕೋವಿಡ್ ಬಂದಿದೆ. ಹೀಗಾಗಿ ಶವ ಸುಡಲೂ ಸಿಬ್ಬಂದಿ ಕೊರತೆ ಇದೆ. ಇದ್ದ ಸಿಬ್ಬಂದಿಯೇ ಹಗಲು ರಾತ್ರಿ ಕೆಲಸ ಮಾಡುತ್ತಿದ್ದೇವೆ ಎಂದರು.
ನವೆಂಬರ್ 19 ಮತ್ತು 23 ರ ನಡುವೆ ಅಧಿಕಾರಿಗಳು ನಾಲ್ಕು ಸಾವುಗಳು ವರದಿಯಾಗಿವೆ ಅದನ್ನು ಹೊರತುಪಡಿಸಿ ಚೀನಾ ಬೀಜಿಂಗ್‌ನಲ್ಲಿ ಯಾವುದೇ ಕೋವಿಡ್ ಸಾವುಗಳು ವರದಿಯಾಗಿಲ್ಲ. ವಿಶ್ವದಾದ್ಯಂತ ಹೊಸ ಕೋವಿಡ್ ಪ್ರಕರಣಗಳಲ್ಲಿ ಗಮನಾರ್ಹ ಇಳಿಕೆ ದಾಖಲಾಗಿದ್ದರೂ, ಸೋಂಕಿನ ಮೇಲೆ ನಿಗಾ, ಸೋಂಕಿತರ ಪತ್ತೆಗೆ ಪರೀಕ್ಷೆ , ಹೊಸ ತಳಿಗಳ ಪತ್ತೆಗೆ ಸ್ವೀಕ್ಸೆನ್ಸಿಂಗ್, ಲಸಿಕಾಕರಣದಲ್ಲಿನ ನಿರ್ಲಕ್ಷ್ಯವು ಹೊಸ ಕುಲಾಂತರಿ ಉಗಮಕ್ಕೆ ವೇದಿಕೆ ಸೃಷ್ಟಿಸಬಲ್ಲದು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಮುಖ್ಯಸ್ಥ ಟೆಡ್ರೋಸ್ ಅಧನೋಮ್ ಹೇಳಿದ್ದಾರೆ.
ನಾವು ಕೋವಿಡ್ ಸಾಂಕ್ರಾಮಿಕದ ಅಂತ್ಯದ ಹತ್ತಿರದಲ್ಲಿದ್ದೇವೆಯೇ ಹೊರತೂ, ಸಾಂಕ್ರಾಮಿಕ ಇನ್ನೂ ಅಂತ್ಯಗೊಂಡಿಲ್ಲ. ಹೀಗಾಗಿ ಎಚ್ಚರಿಕೆ ಅಗತ್ಯ ಎಂದು ಹೇಳಿದ್ದಾರೆ. ಚೀನಾ ಮತ್ತು ಬ್ರಿಟನ್‌ನ ಕೆಲ ಭಾಗಗಳಲ್ಲಿ ಮತ್ತೆ ಹೊಸ ಕೋವಿಡ್ ಪ್ರಕರಣಗಳ ಹೆಚ್ಚಳದ ಬೆನ್ನಲ್ಲೇ ಟೆಡ್ರೋಸ್ ಈ ಹೇಳಿಕೆ ನೀಡಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ