AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾದಿಂದ ಪ್ರಾಣ ತೆತ್ತವರು ಐನೂರು ನೌಕರರು, ಪರಿಹಾರ ಸಿಕ್ಕಿದ್ದು 11 ಕುಟ್ಟುಂಬಕ್ಕೆ ಮಾತ್ರ: ಕೊಟ್ಟ ಮಾತು ತಪ್ಪಿದ ಸರ್ಕಾರ

ಕೊರೊನಾದ ಸಂದರ್ಭದಲ್ಲಿ ತಮ್ಮ ಪ್ರಾಣಾದ ಹಂಗನ್ನು ತೊರೆದು ಕೆಲಸ ಮಾಡಿದ್ದ ಬಿಎಂಟಿಸಿ ನೌಕರರಿಗೆ ಮತ್ತು ಸಾರಿಗೆ ಇಲಾಖೆ ನೌಕರರಿಗೆ ರಾಜ್ಯ ಸರ್ಕಾರ ಇಲ್ಲಿಯವರೆಗೂ ಯಾವುದೇ ಪರಿಹಾರ ನೀಡಿಲ್ಲವೆನ್ನಲಾಗುತ್ತಿದೆ.

ಕೊರೊನಾದಿಂದ ಪ್ರಾಣ ತೆತ್ತವರು ಐನೂರು ನೌಕರರು, ಪರಿಹಾರ ಸಿಕ್ಕಿದ್ದು 11 ಕುಟ್ಟುಂಬಕ್ಕೆ ಮಾತ್ರ: ಕೊಟ್ಟ ಮಾತು ತಪ್ಪಿದ ಸರ್ಕಾರ
ವಿಧಾನ ಸೌಧ (ಸಂಗ್ರಹ ಚಿತ್ರ)
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Dec 08, 2022 | 8:23 PM

Share

ಬೆಂಗಳೂರು: ಕೊರೊನಾದ (Covid-19) ಎರಡು ಅಲೆಯಲ್ಲೂ ಬಿಎಂಟಿಸಿ ನೌಕರರು ತಮ್ಮ ಪ್ರಾಣಾದ ಹಂಗನ್ನು ತೊರೆದು ಕೆಲಸಮಾಡಿದ್ದರು. ಈ ವೇಳೆ ಸಾಕಷ್ಟು ಜನ ಸಾರಿಗೆ ಸಿಬ್ಬಂದಿಗಳು ಕೊರೊನಾಗೆ ಬಲಿಯಾಗಿದ್ದರು. ಈ ವೇಳೆ ಮೃತಪಟ್ಟ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಭರವಸೆಯನ್ನ ಸಹ ನೀಡಲಾಗಿತ್ತು. ಆದರೆ ಮೂರನೇ ಅಲೆ ಆರಂಭವಾಗಿ ಮುಗಿದು ಹೋದರು ಪರಿಹಾರ ಮಾತ್ರ ಸಿಕಿಲ್ಲ. ಇತ್ತ ನೌಕರರಿಗೆ ನೀಡಬೇಕಿದ್ದ ಬಾಕಿ ಹಣ‌ ನೀಡಿ ನಮಗೂ ನಿಮಗೂ ಯಾವುದೇ ಸಂಬಂಧವಿಲ್ಲ ಅಂತ ಕೈತೊಳೆದುಕೊಂಡಿದೆ. ಕೆಎಸ್ಆರ್ಟಿಸಿ- 27 ಕೋಟಿ, ಬಿಎಂಟಿಸಿ- 31.80 ಕೋಟಿ ವಾಯುವ್ಯ, ಈಶಾನ್ಯ ಸೇರಿ ಒಟ್ಟು- 102 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕಿರುವ ನಾಲ್ಕು ನಿಗಮಗಳು.

ನಾವು ಕೆಲಸಕ್ಕೆ ಬರಲ್ಲ ನಮಗೂ ಹೆಂಡತಿ ಮಕ್ಕಳು, ತಂದೆ ತಾಯಿ‌ ಇದ್ದಾರೆ ಅಂದರೆ ಸಸ್ಪೆಂಡ್ ಮಾಡ್ತಿವಿ ಎಂದು ಒತ್ತಡ ಹಾಕಿ ಡ್ಯೂಟಿ ಮಾಡಿಸಿಕೊಂಡ್ರು. ಇತ್ತ ನಿಮಗೆ ಏನೇ ಆದರು ನಾವು ಇದ್ದೇವೆ ನಿಮ್ಮ ಮನೆಗೆ ಮೂವತ್ತು ಲಕ್ಷ ರೂಪಾಯಿ ಪರಿಹಾರ ಕೊಡುತ್ತೇವೆ ಅಂತ ನಂಬಿಸಿ ಈಗ ಬೀದಿಗೆ ತಳ್ಳಲಾಗಿದೆ‌‌. ಆದರೆ ಇಲ್ಲಿಯವರೆಗೆ ಕೊರೊನಾದಿಂದ ಪ್ರಾಣ ಬಿಟ್ಟ ಕೇವಲ 11 ನೌಕರರ ಮನೆಯವರಿಗೆ ಮಾತ್ರ 30 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ.

ಕೊರೊನಾದಿಂದ ಸತ್ತಿದ್ದು ಐನೂರು ನೌಕರರು: ಪರಿಹಾರ ಮಾತ್ರ ಕೇವಲ ಹನ್ನೊಂದು ಕುಟುಂಬಕ್ಕೆ

ಇನ್ನು ಕೊರೊನಾದ ಸಂಕಷ್ಟದ ಸಮಯದಲ್ಲಿ ಜನರ ಸೇವೆಗೆ ಕೆಎಸ್ಆರ್ಟಿಸಿ, ಬಿಎಂಟಿಸಿಯ, ವಾಯವ್ಯ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನೌಕರರು ತಮ್ಮ ಪ್ರಾಣದ ಹಂಗನ್ನ ತೊರೆದು ಕೆಲಸ ಮಾಡಿದ್ದರು. ಆದರೆ ಈಗ ರಾಜ್ಯ ಸರ್ಕಾರ ಅವರನ್ನು ಮರೆತು ಕುಳಿತಿದೆ. ಪ್ರಾಣವನ್ನು ಲೆಕ್ಕಿಸದೆ ಕಾರ್ಯನಿರ್ವಹಿಸಿ ತಮ್ಮ ಪ್ರಾಣವನ್ನೇ ಬಿಟ್ಟಿದ್ದಾರೆ. ಆದರೆ ಈಗ ನಾಲ್ಕು ಸಾರಿಗೆ ನಿಗಮಗಳು ನಾಟಕ ಮಾಡಲು ಶುರು ಮಾಡಿದೆ. ನಮ್ಮ ಬಳಿ ಕೋವಿಡ್​ನಿಂದ ಮೃತಪಟ್ಟ ನೌಕರರ ಮಾಹಿತಿಯೇ ಇಲ್ಲ. ಈಗ ಸಾವನ್ನಪ್ಪಿರುವ ಸಾರಿಗೆ ನೌಕರರು ಕೊರೊನಾದಿಂದ ಸಾವನ್ನಪ್ಪಿದ್ದಾರೆ ಅಂತ ನಮ್ಮ ಬಳಿ ಯಾವುದೇ ದಾಖಲೆಗಳಿಲ್ಲ. ಕೆಲವರು ರಜೆಯ ಮೇಲಿದ್ರು, ಮತ್ತೆ ಕೆಲವರಿಗೆ ಮೊದಲೇ ಆರೋಗ್ಯ ಸಮಸ್ಯೆಗಳಿದ್ದವು. ಆಸ್ಪತ್ರೆಯ ವೈದ್ಯರಿಂದ ಯಾವುದೇ ಸರ್ಟಿಫಿಕೇಟ್ ನೀಡಿಲ್ಲ. ಈ ಹಿನ್ನೆಲೆಯಲ್ಲಿ ನಾವು ಯಾವುದೇ ಪರಿಹಾರ ಕೊಡಲು ಸಾಧ್ಯವಿಲ್ಲ ಅಂತ ಜಾರಿಕೊಳ್ಳುತ್ತಿದ್ದಾರಂತೆ.

ಇದನ್ನೂ ಓದಿ: Coronavirus 4th Wave: ಕರ್ನಾಟಕದಲ್ಲಿ ಕೊರೊನಾ BA.2.12 ರೂಪಾಂತರಿ ಪತ್ತೆ; ಮತ್ತಷ್ಟು ಹೆಚ್ಚಾಯ್ತು ಕೊರೊನಾ 4ನೇ ಅಲೆ ಆತಂಕ

ಇದರ ಜೊತೆಗೆ ಅಗತ್ಯ ಸೇವೆ ಹೆಸರಲ್ಲಿ ಕೊರೊನಾ ಸಮಯದಲ್ಲೂ ಸರ್ಕಾರ ನಾಲ್ಕು ನಿಗಮದ ಬಸ್ಸುಗಳನ್ನ ರಸ್ತೆಗಿಳಿಸಲಾಗಿತ್ತು. ನೌಕರರು ಬೇಡ ಅಂದ್ರು ಸಾರಿಗೆ ಅಧಿಕಾರಿಗಳು ಸಸ್ಪೆಂಡ್ ಮಾಡುವ ಬೆದರಿಕೆ ಹಾಕಿ, ಕೆಲಸಕ್ಕೆ ಬರುವಂತೆ ಒತ್ತಡ ಹೇರಿ ಕೆಲಸಕ್ಕೆ ಹಾಜರಾಗುವಂತೆ ಮಾಡಿದ್ದರು. ಆದರೆ ನೌಕರರು ಕೊರೊನಾ ಬಂದು ಸಾವನ್ನಪ್ಪಿದ ಮೇಲೆ ನೌಕರರ ಕುಟುಂಬವನ್ನು ಸರ್ಕಾರ ಅವರನ್ನು ಕೈಬಿಟ್ಟಿದೆ ಅಂತ ಆಕ್ರೋಶ ವ್ಯಕ್ತವಾಗಿದೆ.

ಅಂದು ಕೆಲಸ ಮಾಡಲು ಹೇಳಿ ಈಗ ಸರ್ಕಾರದ ಕಡೆ ಬೊಟ್ಟು ಮಾಡುತ್ತಿರುವ ಸಾರಿಗೆ ಇಲಾಖೆ

ಒಟ್ಟಾರೆಯಾಗಿ ಕೊರೊನಾ ಸಂಕಷ್ಟದ ಕಾಲದಲ್ಲೂ ಕೆಲಸ ನಿರ್ವಹಿಸಿದ ಸಾರಿಗೆ ನೌಕರರು ಸಾವನ್ನಪ್ಪಿದ್ರು ಇಲ್ಲಿಯವರೆಗೆ ಪರಿಹಾರ ಮಾತ್ರ ನೀಡುತ್ತಿಲ್ಲ. ಇತ್ತ ಮನೆಗೆ ಆಸರೆಯಾಗಿದ್ದ ಮನೆಯ ಯಜಮಾನನ್ನು‌ ಕಳೆದುಕೊಂಡು ಕುಟುಂಬಸ್ಥರು ಬೀದಿಗೆ ಬಿದ್ದಿದ್ದಾರೆ. ಕೂಡಲೇ ಸಿಎಂ ಬಸವರಾಜ ಬೊಮ್ಮಯಿ, ಸಾರಿಗೆ ಸಚಿವ ಶ್ರೀರಾಮುಲು ಸಾರಿಗೆ ನೌಕರರ ಸಾವಿಗೆ ನ್ಯಾಯ ಒದಗಿಸಬೇಕಿದೆ.

ವರದಿ: ಕಿರಣ್ ಸೂರ್ಯ, ಟಿವಿ9, ಬೆಂಗಳೂರು