ಯಾರೋ ಮಾಡಿದ ತಪ್ಪಿಗೆ ನಮಗ್ಯಾಕೆ ಶಿಕ್ಷೆ, ಆದೇಶ ಪತ್ರ ನೀಡಿ, ಇಲ್ಲ ದಯಾಮರಣಕ್ಕೆ ಅನುಮತಿ ಕೊಡಿ ಎಂದ KPSC ಅಭ್ಯರ್ಥಿಗಳು

ಕೆಪಿಎಸ್‌ಸಿ ನೇಮಕಾತಿ ವಿಚಾರವಾಗಿ ಕೆಲವರಿಗೆ ಆದೇಶ ಪತ್ರ ನೀಡಿದರೆ, ಇನ್ನು ಕೆಲವರಿಗೆ ನೀಡಿಲ್ಲ. ಹಾಗಾಗಿ ಅಭ್ಯರ್ಥಿಗಳು ನನಗೂ ಆದೇಶ ಪತ್ರ ಕೊಡಿ, ಇಲ್ಲ ದಯಾಮರಕ್ಕೆ ಅನುಮತಿ ನೀಡಿ ಎನ್ನುತ್ತಿದ್ದಾರೆ.

ಯಾರೋ ಮಾಡಿದ ತಪ್ಪಿಗೆ ನಮಗ್ಯಾಕೆ ಶಿಕ್ಷೆ, ಆದೇಶ ಪತ್ರ ನೀಡಿ, ಇಲ್ಲ ದಯಾಮರಣಕ್ಕೆ ಅನುಮತಿ ಕೊಡಿ ಎಂದ KPSC ಅಭ್ಯರ್ಥಿಗಳು
KPSC (ಸಂಗ್ರಹ ಚಿತ್ರ)
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Dec 08, 2022 | 9:06 PM

ಬೆಂಗಳೂರು: ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ ಆಯುಕ್ತಾಲಯದಲ್ಲಿನ ಕಿರಿಯ ತರಬೇತಿ ಅಧಿಕಾರಿ ಹುದ್ದೆಗೆ 2018ರ ಆಗಸ್ಟ್ 19ರಂದು ಕೆಪಿಎಸ್‌ಸಿ (KPSC) ನೇರನೇಮಕಾತಿ ವಿಚಾರವಾಗಿ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. 23 ಮಾದರಿಯ 1520 ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿ ನಡೆಸಿದ್ದ ಪರೀಕ್ಷೆಯನ್ನು ಸುಮಾರು 50 ಸಾವಿರ ಅಭ್ಯರ್ಥಿಗಳು ಬರೆದಿದ್ದರು. ಆದರೆ ಅವರ ಪೈಕಿ ಸುಮಾರು 900 ಜನರು ಮಾತ್ರ ಉತ್ತೀರ್ಣರಾಗಿದ್ದರು. ಈಗ ಉತ್ತೀರ್ಣರಾದ ಅಭ್ಯರ್ಥಿಗಳ ಪೈಕಿ ಕೆಲಸಕ್ಕೆ ಹಾಜರಾಗುವಂತೆ ಕೇವಲ 400 ಜನರಿಗೆ ಮಾತ್ರ 2022ರ ಆಗಸ್ಟ್‌ನಲ್ಲಿ ಆದೇಶ ಪತ್ರ ನೀಡಲಾಗಿದೆ. ಉಳಿದ 500ಕ್ಕೂ ಹೆಚ್ಚು ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಇಂದಿಗೂ ಆದೇಶ ಪತ್ರ ನೀಡಿಲ್ಲ. ಈ ವಿಚಾರ ತಿಳಿದ ಅಭ್ಯರ್ಥಿಗಳು ಯಾರೋ ಮಾಡಿದ ತಪ್ಪಿಗೆ ನಮಗ್ಯಾಕೆ ಶಿಕ್ಷೆ. ಆದೇಶ ಪತ್ರವನ್ನು ನೀಡಲು ಸಾಧ್ಯವಿಲ್ಲ ಅಂದರೆ ದಯಾಮರಣಕ್ಕೆ ಅನುಮತಿ ನೀಡಿ ಎಂದು ಅಭ್ಯರ್ಥಿಗಳು ಹೇಳುತ್ತಿದ್ದಾರೆ.

ಇತ್ತ ಕೆಲಸವು ಇಲ್ಲದೇ ಕುಟುಂಬವನ್ನ ನಿರ್ವಹಣೆ ಮಾಡುವುದಕ್ಕೆ ಆಗದೇ ಪರದಾಡುತ್ತಿದ್ದೇವೆ.‌ ಕೆಲಸದ ಅರ್ಲಟ್​ಮೆಂಟ್​ಗಾಗಿ ಬೀದಿ ಬೀದಿ ತಿರುಗಿ ಸುಸ್ತಾಗಿ ಹಣ ಇಲ್ಲದೇ ಮೆಜೆಸ್ಟಿಕ್​ ಫುಟ್ ಫಾತ್​ಗಳಲ್ಲಿ ದಿನದೂಡುತ್ತಿದ್ದೇವೆ ಅಂತ ಅಭ್ಯರ್ಥಿಗಳು ಕಣ್ಣೀರು ಹಾಕುತ್ತಿದ್ದಾರೆ.

ಇನ್ನು ಕೆಪಿಎಸ್‌ಸಿ ನಡೆಸಿದ ಪರೀಕ್ಷೆಯಲ್ಲಿ ಉತ್ತೀರ್ಣ ಆಗಿರುವವರು ಒಂದಿಷ್ಟು ದಾಖಲೆಗಳನ್ನು ನೀಡಬೇಕಿತ್ತು. ಅವುಗಳನ್ನು ಪರಿಶೀಲಿಸಿ ಒಪ್ಪಿಗೆಯಾದುದನ್ನು ಮಾತ್ರ ಕೌಶಲ್ಯಾಭಿವೃದ್ಧಿ ಇಲಾಖೆಗೆ ಕಳಿಸಿಕೊಡಲಾಗಿತ್ತು. ಆ ದಾಖಲೆಗಳ ಪೈಕಿ ಸಣ್ಣ ಪ್ರಮಾಣದ ಗೋಲ್‌ಮಾಲ್ ಕಂಡುಬಂದಿರುವುದರಿಂದ ಕೆಲ ಅರ್ಜಿಗಳನ್ನು ಇಲಾಖೆ ತಿರಿಸ್ಕರಿಸಿತ್ತು. ಈ ಮಧ್ಯೆ ಪರೀಕ್ಷೆಯಲ್ಲಿ ಫೇಲ್ ಆದವರು ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು. ಕೆಪಿಎಸ್‌ಸಿ, ಕೌಶಲ್ಯಾಭಿವೃದ್ಧಿ ಇಲಾಖೆ ಹಾಗೂ ಪಾಸ್ ಆದ ಕೆಲವರನ್ನು ಕೇಸ್‌ನಲ್ಲಿ ಪಾರ್ಟಿಯನ್ನಾಗಿ ಮಾಡಿದ್ದರು. ಈಗ ಕೇಸ್‌ನಲ್ಲಿ ಪಾರ್ಟಿಯಾಗಿರೋ ಕೆಲವರಿಗೆ ಉದ್ಯೋಗಕ್ಕೆ ಆದೇಶ ಪತ್ರ ನೀಡಲಾಗಿದ್ರೆ, ಬಹುತೇಕರಿಗೆ ಇನ್ನು ನೀಡಲಾಗಿಲ್ಲ. ಇದರಿಂದಾಗಿ ನಮಗೆ ಇಲಾಖೆ ದ್ರೋಹ ಮಾಡುತ್ತಿದೆ ಅಂತ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: KPSC Recruitment 2022: ಅರ್ಥಶಾಸ್ತ್ರ ಮತ್ತು ಅಂಕಿಅಂಶಗಳ ನಿರ್ದೇಶನಾಲಯದ 58 ಹುದ್ದೆಗಳಿಗೆ ಅರ್ಜಿ ಆಹ್ವಾನ

ಈ‌ ಕುರಿತಾಗಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಅವರನ್ನ ಪ್ರಶ್ನಿಸಿದ್ದಕ್ಕೆ ಈ ವಿಚಾರದಲ್ಲಿ ಅನುಭವ ಪ್ರಮಾಣ ಪತ್ರದಲ್ಲಿ (ಎಕ್ಸ್ಪೀರಿಯನ್ಸ್​ ಸರ್ಟಿಫಿಕೇಟ್) ಲೋಪದೋಷ ಆಗಿರುವುದು ಕಂಡುಬಂದಿದೆ. ಕೆಪಿಎಸ್​ಸಿಯಲ್ಲಿ ಸೂಕ್ತವಾದ ಕಾರಣವನ್ನ ತೆಗೆದುಕೊಳ್ಳದೇ ಇರುವುದು ಇದಕ್ಕೆಲ್ಲ ಪ್ರಮುಖ ಕಾರಣ. ಈ ವಿಚಾರದಲ್ಲಿ ವಿಳಂಬವಾಗಿವಾಗಿರುವುದು ಅಭ್ಯರ್ಥಿಗಳಿಗೆ ಸಮಸ್ಯೆಯಾಗಿದೆ. ಸದ್ಯ ನ್ಯಾಯಲಯದಲ್ಲಿ ಈ ವಿಚಾರವನ್ನ ತಡೆಹಿಡಿದಿದ್ದು, ಕ್ರಮವಹಿಸಲಾಗುತ್ತದೆ. ಈ ಕುರಿತಾಗಿ ತರ್ಕಬದ್ದವಾಗಿ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.

900 ಅಭ್ಯರ್ಥಿಗಳ ಪೈಕಿ ಆದೇಶ ಪತ್ರ ನೀಡಿರೋದು ಕೇವಲ 400 ಜನರಿಗೆ. ಇಷ್ಟರಲ್ಲೇ ಹತ್ತು ಹಲವಾರು ಕೇಸ್‌ಗಳು ಕೋರ್ಟ್‌ನಲ್ಲಿ ನಡೆಯುತ್ತಿದೆ. ಹೀಗಿರುವಾಗ ಉಳಿದಿರೋರಿಗೆ ಪತ್ರ ನೀಡೋದು ಬೇಡಾ ಅಂತ 4 ವರ್ಷಗಳೇ ಕಾದಿರೋ ಅಭ್ಯರ್ಥಿಗಳು ಒಂದೆರಡು ತಿಂಗಳು ಕಾಯಲಿ, ಎಲ್ಲವೂ ಕಾನೂನಾತ್ಮಕವಾಗಿ ಆಗಲಿ ಅಂತಿದ್ದಾರೆ ಅಧಿಕಾರಿಗಳು. ಆದರೆ ಸರ್ಕಾರಿ ಕೆಲಸ ಸಿಕ್ತು ಅಂತ ಇರೋ ಕೆಲಸವನ್ನೂ ಬಿಟ್ಟು ಈಗ ಬೀದಿಗೆ ಬಂದು ಇರುವುದಕ್ಕೆ ನೆಲೆ ಇಲ್ಲದೇ, ಹಣವಿಲ್ಲದೇ ಎದುರಿಸುತ್ತಿರುವ ನಮ್ಮ ಕಷ್ಟವನ್ನು ಯಾರಿಗೆ ಹೇಳೋದು ಅಂತಿದ್ದಾರೆ ಅಭ್ಯರ್ಥಿಗಳು.

ವರದಿ: ಪೂರ್ಣಿಮಾ, ಟಿವಿ9, ಬೆಂಗಳೂರು.

Published On - 9:04 pm, Thu, 8 December 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ