ಇತ್ತೀಚಿನ ಬೆಳವಣಿಗೆಯೊಂದನ್ನು ಗಮನಿಸಿದರೆ ಚೀನಾ ತನ್ನ ವಿಸ್ತರಣಾ ವಾದವನ್ನು ಭೂಮಿಯ ಆಚೆಗೂ ಮುಂದುವರೆಸಿದೆ ಎಂದು ಹೇಳಿದರೂ ತಪ್ಪಾಗಲಾರದು! ಪಕ್ಕದ ದೇಶಗಳ ಪ್ರದೇಶಗಳನ್ನು ತನ್ನದೆಂದು ವಾದಿಸುವ ಮೊಂಡು ವಾದದ ಚೀನಾ ಚಂದ್ರನ ಅಂಗಳದಲ್ಲಿ ಧ್ವಜ ನೆಟ್ಟಿದೆ.
ಚಂದ್ರನ ನೆಲದಲ್ಲಿ ಧ್ವಜ ನೆಟ್ಟ ಎರಡನೇ ದೇಶ ಚೀನಾ
ಚಂದ್ರನ ಅಂಗಳದಲ್ಲಿರುವ ಶಿಲೆಗಳ ಮಾದರಿಯನ್ನು ತರಲು ಉಡಾವಣೆ ಮಾಡಲಾಗಿದ್ದ ಚೀನಾದ ಚಾಂಗಿ 5 ಗಗನನೌಕೆ ಮರಳುವಾಗ ಚೀನಾದ ಚಂದ್ರನ ಅಂಗಳದಲ್ಲಿ ಧ್ವಜ ನೆಟ್ಟಿ ಬಂದಿದೆ. ಈ ಮೂಲಕ ಚಂದ್ರನ ನೆಲದಲ್ಲಿ ಧ್ವಜ ನೆಟ್ಟ ಎರಡನೇ ದೇಶ ಎಂಬ ಹೆಸರಿಗೆ ಚೀನಾ ಪಾತ್ರವಾಗಿದೆ.
ಚೀನಾದ ಮಾಧ್ಯಮ ಸಂಸ್ಥೆ CCTV ಪ್ರಕಟಿಸಿರುವ ಗಗನನೌಕೆ ಭೂಮಿಗೆ ಮರಳುತ್ತಿರುವ ವಿಡಿಯೋದಲ್ಲಿ ಚೀನಾದ ಧ್ವಜ ಗೋಚರಿಸುತ್ತದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಅಮೇರಿಕಾ ಮತ್ತು ರಷ್ಯಾಕ್ಕೆ ಪ್ರಬಲ ಪೈಪೋಟಿ ನೀಡುವ ಉದ್ದೇಶದೊಂದಿಗೆ ಚೀನಾ ಈ ಗಗನನೌಕೆಯನ್ನು ಉಡಾವಣೆ ಮಾಡಿತ್ತು.
ಗುರುವಾರ ರಾತ್ರಿ ಮಂಗಳನಿಂದ ಮರಳಿರುವ ಚಾಂಗಿ 5 ಗಗನನೌಕೆ ಚಂದ್ರನ ಅಂಗಳದ ಕಲ್ಲುಗಳ ಮಾದರಿಯನ್ನು ಭೂಮಿಗೆ ತರಲಿದೆ. ಚಾಂಗಿ 5 ಎಂಬುದು ಚೀನಾದ ಪೌರಾಣಿಕ ದೇವತೆಯೊಬ್ಬಳ ಹೆಸರಾಗಿದೆ. ಈ ಯೋಜನೆಯ ಮೂಲಕ ಚೀನಾ ಮೊದಲ ಬಾರಿಗೆ ಇತರ ಗ್ರಹದಿಂದ ಕಲ್ಲು, ಮಣ್ಣಿನ ಮಾದರಿಗಳನ್ನು ತಂದಿದೆ.