ದಕ್ಷಿಣ ಚೀನಾ ಸಾಗರದಲ್ಲಿ ಫಿಲಿಪೈನ್ಸ್​ ಹಡಗುಗಳ ಮೇಲೆ ಅನಗತ್ಯವಾಗಿ ಜಲಫಿರಂಗಿ ಪ್ರಯೋಗ ಮಾಡಿದ ಚೀನಾ

| Updated By: Lakshmi Hegde

Updated on: Nov 18, 2021 | 8:28 AM

ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ತನ್ನ ವ್ಯಾಪ್ತಿಗೂ ಮೀರಿ ಹಕ್ಕು ಸಾಧಿಸುತ್ತಿರುವ ಸಂಬಂಧ ವಿವಾದ ಈಗಿನದಲ್ಲ. ಹಾಗ್​ ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪನ್ನೂ ಧಿಕ್ಕರಿಸಿದ ದೇಶ ಅದು.

ದಕ್ಷಿಣ ಚೀನಾ ಸಾಗರದಲ್ಲಿ ಫಿಲಿಪೈನ್ಸ್​ ಹಡಗುಗಳ ಮೇಲೆ ಅನಗತ್ಯವಾಗಿ ಜಲಫಿರಂಗಿ ಪ್ರಯೋಗ ಮಾಡಿದ ಚೀನಾ
ಸಾಂಕೇತಿಕ ಚಿತ್ರ
Follow us on

ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಕರಾವಳಿ ರಕ್ಷಕ ಪಡೆಗಳು (China Coast Guard) ಫಿಲಿಪೈನ್ಸ್ ​ದೇಶದ ಹಡಗುಗಳ ಮೇಲೆ ವೃಥಾ ಜಲಫಿರಂಗಿ ಪ್ರಯೋಗ ಮಾಡುತ್ತಿವೆ ಎಂದು ಫಿಲಿಪೈನ್ಸ್​ ಆರೋಪಿಸಿದೆ. ಫಿಲಿಪಿನೋ ನೌಕಾಪಡೆಗಳಿಗೆ ಅಗತ್ಯ ವಸ್ತುಗಳ ಪೂರೈಕೆಯ ಹಡಗುಗಳ ಮೇಲೆ ಚೀನಾ ಕೋಸ್ಟ್​ ಗಾರ್ಡ್​​​ ಸಿಬ್ಬಂದಿ ಒಂದೇ ಸಮನೆ ನೀರು ಹಾರಿಸುತ್ತಿದ್ದಾರೆ. ಇದನ್ನು ಕೂಡಲೇ ನಿಲ್ಲಿಸಿ ಹಿಂದಿರುಗಬೇಕು ಎಂದು ಫಿಲಿಪೈನ್ಸ್​ ಬೀಜಿಂಗ್​​ಗೆ ಆಗ್ರಹಿಸಿದೆ.  

ದಕ್ಷಿಣ ಚೀನಾ ಸಾಗರದಲ್ಲಿನ ವಿವಾದಿತ ಪ್ರದೇಶ ಸ್ಪ್ರಾಟ್ಲಿ  ದ್ವೀಪಗಳಲ್ಲಿರುವ ಎರಡನೇ ಥಾಮಸ್​ ಶೋಲ್​​ ಎಂಬಲ್ಲಿಗೆ ಫಿಲಿಪೈನ್ಸ್​ ಹಡಗುಗಳು ತೆರಳುತ್ತಿದ್ದವು. ಈ ವೇಳೆ ಚೀನಾ ಕರಾವಳಿ ರಕ್ಷಕ ಪಡೆಗಳು ಜಲಫಿರಂಗಿ ಪ್ರಯೋಗ ಮಾಡಿದ್ದಾರೆ. ಇದು ತೀವ್ರ ಖಂಡನೀಯ ಮತ್ತು ಪ್ರತಿಭಟನೆ ಮಾಡುವಂತ ವಿಷಯ. ಅದೃಷ್ಟಕ್ಕೆ ಹಡಗಿನಲ್ಲಿದ್ದ ಯಾರೂ ಗಾಯಗೊಂಡಿಲ್ಲ. ಆದರೆ ನಮ್ಮ ಹಡಗುಗಳು ಪೂರೈಕೆ ಕಾರ್ಯವನ್ನು ಸ್ಥಗಿತಗೊಳಿಸಬೇಕಾಯಿತು. ಇದು ನಮ್ಮ ನೌಕಾಪಡೆಗಳಿಗೆ ತೊಂದರೆಯಾಗುತ್ತದೆ. ಈ ಪ್ರದೇಶದಲ್ಲಿ ಚೀನಾ ಯಾವುದೇ ಕಾನೂನು ಜಾರಿ ಹಕ್ಕನ್ನು ಹೊಂದಿಲ್ಲ. ದಾಳಿ ಮಾಡಬಾರದಿತ್ತು ಎಂದು ಫಿಲಿಪೈನ್ಸ್​ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಟಿಯೊಡೊರೊ ಲಾಕ್ಸಿನ್ ಹೇಳಿಕೆ ನೀಡಿದ್ದಾರೆ.

ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ತನ್ನ ವ್ಯಾಪ್ತಿಗೂ ಮೀರಿ ಹಕ್ಕು ಸಾಧಿಸುತ್ತಿರುವ ಸಂಬಂಧ ವಿವಾದ ಈಗಿನದಲ್ಲ. ಈ ಸಂಬಂಧ ಹಾಗ್​ ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪನ್ನೂ ಧಿಕ್ಕರಿಸಿದ ದೇಶ ಅದು. ಚೀನಾ ಅನಗತ್ಯ ಉಪಟಳದ ವಿರುದ್ಧ ಫಿಲಿಪೈನ್ಸ್ ಸದಾ ತಿರುಗಿಬಿದ್ದಿದೆ. ಆದರೂ ಚೀನಾ ತನ್ನ ನಡೆಯಲ್ಲಿ ಸ್ವಲ್ಪವೂ ಬದಲಾವಣೆ ಮಾಡಿಕೊಳ್ಳುತ್ತಿಲ್ಲ. ಈ ವರ್ಷದ ಪ್ರಾರಂಭದಲ್ಲಿ ಸ್ಪ್ರಾಟ್ಲಿ ದ್ವೀಪಸಮೂಹದಲ್ಲಿರುವ ವಿಟ್ಸುನ್​ ರೀಫ್​​​ನಲ್ಲಿ 100ಕ್ಕೂ ಹೆಚ್ಚು ಚೀನಾದ ದೋಣಿಗಳು ಪತ್ತೆಯಾಗಿದ್ದವು. ಅಂದಿನಿಂದಲೂ ಸ್ಪ್ರಾಟ್ಲಿ ದ್ವೀಪದ ಬಳಿ ಒಂದು ಉದ್ವಿಗ್ನತೆ ಶುರುವಾಗಿದೆ.

ಇದನ್ನೂ ಓದಿ: ಆದಾಯದ ಕನಿಷ್ಟ ಶೇಕಡಾ 25 ಭಾಗ ಹೂಡಿಕೆಗೆ ಮೀಸಲಿಡಬೇಕು: ಡಾ ಬಾಲಾಜಿ ರಾವ್, ಹೂಡಿಕೆ ತಜ್ಞ