ಚೀನಾದಲ್ಲಿ ಜನಸಂಖ್ಯೆ ಕುಸಿತ: ಮದುವೆಯಾಗಲಿರುವ ವಧು 25 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ ದಂಪತಿಗೆ ನಗದು ಬಹುಮಾನ
ಚೀನಾದಲ್ಲಿ ಕಡಿಮೆಯಾಗುತ್ತಿರುವ ಜನಸಂಖ್ಯೆಗೆ ಸಂಬಂಧಿಸಿದಂತೆ ಅಲ್ಲಿನ ಸರ್ಕಾರ ಹೊಸ ಯೋಜನೆಯೊಂದನ್ನು ರೂಪಿಸಿದೆ. ಜನನ ದರಗಳ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿದ ಚೀನಾ ಸರ್ಕಾರವು ಪೂರ್ವ ಚೀನಾದ ಕೌಂಟಿಯಲ್ಲಿ ದಂಪತಿಗೆ 1,000 ಯುವಾನ್ (137ಡಾಲರ್) ಬಹುಮಾನವನ್ನು ಘೋಷಿಸಿದೆ.
ಚೀನಾದಲ್ಲಿ ಕಡಿಮೆಯಾಗುತ್ತಿರುವ ಜನಸಂಖ್ಯೆಗೆ ಸಂಬಂಧಿಸಿದಂತೆ ಅಲ್ಲಿನ ಸರ್ಕಾರ ಹೊಸ ಯೋಜನೆಯೊಂದನ್ನು ರೂಪಿಸಿದೆ. ಜನನ ದರಗಳ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿದ ಚೀನಾ ಸರ್ಕಾರವು ಪೂರ್ವ ಚೀನಾದ ಕೌಂಟಿಯಲ್ಲಿ ದಂಪತಿಗೆ 1,000 ಯುವಾನ್ (137ಡಾಲರ್) ಬಹುಮಾನವನ್ನು ಘೋಷಿಸಿದೆ. ಮದುವೆಯಾಗಲಿರುವ ವಧುವಿನ ವಯಸ್ಸು 25 ವರ್ಷ ಅಥವಾ ಅದಕ್ಕಿಂತ ಕಡಿಮೆ ಇದ್ದರೆ ಈ ಬಹುಮಾನ ಸಿಗಲಿದೆ, ಯುವಕರನ್ನು ಮದುವೆಯಾಗಲು ಪ್ರೋತ್ಸಾಹಿಸುವ ಹೊಸ ಮಾರ್ಗವಾಗಿದೆ ಎಂದು ಹೇಳಲಾಗಿದೆ. ಚೀನಾ ಸರ್ಕಾರದ ಈ ಸೂಚನೆಯನ್ನು ಚಾಂಗ್‌ಶಾನ್ ಕೌಂಟಿಯ ಅಧಿಕೃತ WeChat ಖಾತೆಯಲ್ಲಿ ಕಳೆದ ವಾರ ಪ್ರಕಟಿಸಲಾಗಿದೆ.
ಮೊದಲ ಮದುವೆಗೆ ಸೂಕ್ತವಾದ ವಯಸ್ಸು ಮತ್ತು ಸಮಯಕ್ಕೆ ಮಕ್ಕಳನ್ನು ಹೊಂದಲು ದಂಪತಿಗಳಿಗೆ ಪ್ರೋತ್ಸಾಹ ನೀಡುವುದು ಈ ಯೋಜನೆಯ ಉದ್ದೇಶ. ಈ ಯೋಜನೆಯು ಮಕ್ಕಳ ಆರೈಕೆ, ಸಂತಾನೋತ್ಪತ್ತಿ ಮತ್ತು ಶಿಕ್ಷಣಕ್ಕಾಗಿ ಸಹಾಯಧನದಂತಹ ಸೌಲಭ್ಯಗಳನ್ನು ಒಳಗೊಂಡಿದೆ. ಕಳೆದ ಆರು ದಶಕಗಳಲ್ಲಿ ದೇಶದ ಜನಸಂಖ್ಯೆಯು ಕುಸಿತವನ್ನು ದಾಖಲಿಸಿರುವುದು ಇದೇ ಮೊದಲು ಮತ್ತು ದೇಶದಲ್ಲಿ ವಯಸ್ಸಾದ ಜನರ ಜನಸಂಖ್ಯೆಯು ವೇಗವಾಗಿ ಹೆಚ್ಚುತ್ತಿದೆ .
ಈ ಬಗ್ಗೆ ಚೀನಾ ಸರ್ಕಾರ ಆತಂಕ ವ್ಯಕ್ತಪಡಿಸಿದೆ. ಅದಕ್ಕಾಗಿಯೇ ದಂಪತಿಗಳಿಗೆ ಆರ್ಥಿಕ ಪ್ರೋತ್ಸಾಹ ಮತ್ತು ಉತ್ತಮ ಶಿಶುಪಾಲನಾ ಸೌಲಭ್ಯಗಳು ಸೇರಿದಂತೆ ಜನನ ಪ್ರಮಾಣವನ್ನು ಹೆಚ್ಚಿಸಲು ಸರ್ಕಾರ ತಕ್ಷಣದ ಕ್ರಮಗಳನ್ನು ಪ್ರಯತ್ನಿಸುತ್ತಿದೆ.
ಮತ್ತಷ್ಟು ಓದಿ: Population Shrink: ಚೀನಾದಲ್ಲಿ ಜನಸಂಖ್ಯೆ ಕುಸಿತ; ಏನು ಕಾರಣ? ಭಾರತದ ಮೇಲೆ ಏನು ಪರಿಣಾಮ?
ಚೀನಾದಲ್ಲಿ ವಿವಾಹದ ಕಾನೂನುಬದ್ಧ ವಯಸ್ಸು ಪುರುಷರಿಗೆ 22 ವರ್ಷಗಳು ಮತ್ತು ಮಹಿಳೆಯರಿಗೆ 20 ವರ್ಷಗಳು. ಆದರೆ, ದೇಶದಲ್ಲಿ ವಿವಾಹವಾಗುವ ಜೋಡಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ.
ಚೀನಾದ ಮದುವೆ ದರವು 2022 ರಲ್ಲಿ 6.8 ಮಿಲಿಯನ್‌ಗೆ ಇಳಿದಿದೆ. ಇದು 1986ರಿಂದೀಚಿಗೆ ಅತಿ ಕಡಿಮೆ ಎಂದು ಹೇಳಬಹುದು. ಕಳೆದ ವರ್ಷ 800,000 ಕಡಿಮೆ ಮದುವೆಗಳು ನಡೆದಿವೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ