ಬೀಜಿಂಗ್: ಪೂರ್ವ ಲಡಾಖ್ನಲ್ಲಿ ಭಾರತ-ಚೀನಾ ಸೈನಿಕರ ನಡುವೆ ಒಂದಿಲ್ಲೊಂದು ಕಾರಣಕ್ಕೆ ಸಂಘರ್ಷದ ಕಿಡಿ ಹಾರುತ್ತಲೇ ಇದೆ. ಗಡಿಯಲ್ಲಿ ಚೀನಾ ತನ್ನ ಸೇನೆಗೆ ಬಲ ತುಂಬಲು ಚೀನಾ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವ ಭಾರತವೂ ಪ್ರತಿನಡೆಯ ಮೂಲಕ ತನ್ನ ನಿಯೋಜನೆ ಹೆಚ್ಚಿಸಿಕೊಳ್ಳುತ್ತಿದೆ. ಇದೀಗ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಭಾರತ-ಚೀನಾ ಗಡಿಯ ಮೇಲ್ವಿಚಾರಣೆ ಮಾಡುತ್ತಿರುವ ಚೀನಾ ಪೀಪಲ್ಸ್ ಲಿಬರೇಷನ್ ಆರ್ಮಿಯ ವೆಸ್ಟರ್ನ್ ಥಿಯೇಟರ್ ಕಮಾಂಡ್ಗೆ ಕಮಾಂಡರ್ ಆಗಿ ಹೊಸ ಜನರಲ್ ಒಬ್ಬರನ್ನು ಷಿ ಜಿನ್ಪಿಂಗ್ ನೇಮಕ ಮಾಡಿದ್ದಾರೆ. ಕೇಂದ್ರ ಮಿಲಿಟರಿ ಆಯೋಗದ (CMC) ಮಖ್ಯಸ್ಥರೂ ಆಗಿರುವ ಷಿ ಜಿನ್ಪಿಂಗ್, ಭಾರತ-ಚೀನಾ ಗಡಿ ವಿವಾದದ ನಡುವೆ ಜನರಲ್ ಜಾಂಗ್ ಕ್ಸುಡಾಂಗ್ರನ್ನು ಕಮಾಂಡರ್ ಆಗಿ ನೇಮಕ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಚೀನಾ ಮಾಧ್ಯಮಗಳ ಪ್ರಕಾರ, ಷಿ ಒಟ್ಟು ನಾಲ್ವರು ಹಿರಿಯ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ಬಡ್ತಿ ನೀಡಿದ್ದಾರೆ. ಅದರಲ್ಲಿ ಜನರಲ್ ಝಾಂಗ್ರಿಗೆ ಕಮಾಂಡರ್ ಹುದ್ದೆ ನೀಡಲಾಗಿದೆ.
ಮೇ ತಿಂಗಳಿಂದಲೂ ಪೂರ್ವ ಲಡಾಖ್ನಲ್ಲಿ ಎರಡೂ ಸೇನೆಗಳ ಮಧ್ಯೆ ಪದೇಪದೆ ಸಂಘರ್ಷ ಏರ್ಪಡುತ್ತಿದೆ. ಭಾರತ-ಚೀನಾ ರಾಜತಾಂತ್ರಿಕ ಮಾತುಕತೆಯ ನಡುವೆಯೂ ಸೇನಾ ಸಂಘರ್ಷಗಳು ಕಡಿಮೆಯಾಗಿಲ್ಲ. ಇಷ್ಟು ದಿನ ಝಾವೋ ಜುಂಗ್ಕಿ ವೆಸ್ಟರ್ನ್ ಥಿಯೇಟರ್ ಕಮಾಂಡರ್ ಆಗಿದ್ದರು. 2017ರಲ್ಲಿ ನಡೆದ ಡೋಕ್ಲಾಮ್ ಸಂಘರ್ಷದ ವೇಳೆ ಇವರು ನೇಮಕರಾಗಿದ್ದರು. ಇದೀಗ ಝಾವೋ ಸ್ಥಾನಕ್ಕೆ ಜಾಂಗ್ ಕ್ಸುಡಾಂಗ್ ಆಗಮಿಸಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಮಹತ್ವದ ಬೆಳವಣಿಗೆ ಎನಿಸಿದೆ.
ನೇಪಾಳದಲ್ಲಿ ಹಠಾತ್ ರಾಜಕೀಯ ಬೆಳವಣಿಗೆ: ಸಂಸತ್ತು ವಿಸರ್ಜಿಸಿ ಚುನಾವಣೆ ಘೋಷಿಸಿದ ರಾಷ್ಟ್ರಪತಿ
Published On - 5:45 pm, Sun, 20 December 20