ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿ ಅಂದಂಗಾಯ್ತು.. ಕೊರೊನಾ ನಾಶವಾಗುವ ಮುನ್ನವೇ ಬ್ರಿಟನ್‌ನಲ್ಲಿ ಹೊಸ ಪ್ರಭೇದದ ಆತಂಕ
ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿ ಅನ್ನೋ ರೀತಿ ಕೊರೊನಾ ಮುಗಿಯುವ ಮುನ್ನವೇ ಹೊಸ ಪ್ರಭೇದದ ಕೊವಿಡ್ ವೈರಸ್ ಬ್ರಿಟನ್‌ನಲ್ಲಿ ನಿಯಂತ್ರಣ ಮೀರಿ ವ್ಯಾಪಿಸುತ್ತಿದೆ. ಈ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆಯಿಂದ ಇರುವಂತೆ WHO ಸೂಚಿಸಿದೆ.
ದೆಹಲಿ: ವಿಶ್ವಕ್ಕೆ ಮಾರಕವಾಗಿರುವ ಕೊರೊನಾ ವೈರಸ್ಗೆ ಇನ್ನೇನು ಲಸಿಕೆ ಕಂಡು ಹಿಡಿದಿದ್ದು ಅದರ ನಾಶವಾಗುತ್ತೇ ಎಂಬ ಖುಷಿ ಮೊಗದಲ್ಲಿ ಮೂಡುವ ಮುನ್ನವೇ ಮತ್ತೊಂದು ಆತಂಕ ಎದುರಾಗಿದೆ. ರೂಪಾಂತರಗೊಂಡ ಮಹಾಮಾರಿ ಕೊರೊನಾ ವೈರಸ್ನ ಹೊಸ ಪ್ರಭೇದ ಬ್ರಿಟನ್‌ನಲ್ಲಿ ಕಾಣಿಸಿಕೊಂಡಿದ್ದು ಅದು ನಿಯಂತ್ರಣ ಮೀರಿ ವ್ಯಾಪಿಸುತ್ತಿರುವುದು ಆತಂಕ ಹೆಚ್ಚು ಮಾಡಿದೆ.
ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿ ಅನ್ನೋ ರೀತಿ ಕೊರೊನಾ ಮುಗಿಯುವ ಮುನ್ನವೇ ಹೊಸ ಪ್ರಭೇದದ ಕೊವಿಡ್ ವೈರಸ್ ಬ್ರಿಟನ್‌ನಲ್ಲಿ ನಿಯಂತ್ರಣ ಮೀರಿ ವ್ಯಾಪಿಸುತ್ತಿದೆ. ಈ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆಯಿಂದ ಇರುವಂತೆ WHO ಸೂಚಿಸಿದೆ.
ಲಂಡನ್‌ನಲ್ಲಿ ಲಾಕ್‌ಡೌನ್: ಆತಂಕದ ವಿಷಯ ಅಂದ್ರೆ ಕೇವಲ ಬ್ರಿಟನ್ ಅಲ್ಲದೆ ದಕ್ಷಿಣ ಆಫ್ರಿಕಾದಲ್ಲೂ ಹೊಸ ಪ್ರಭೇದದ ಸೋಂಕು ಹೆಚ್ಚಾಗಿದೆ. ಹೀಗಾಗಿ ದಕ್ಷಿಣ ಆಫ್ರಿಕಾ, ಬ್ರಿಟನ್ ವಿಮಾನಗಳಿಗೆ ನೆದರ್ಲೆಂಡ್, ಬೆಲ್ಜಿಯಂ ನಿಷೇಧ ವಿಧಿಸಿದೆ. ಇನ್ನು ಜರ್ಮನಿ, ಇಟಲಿ ಕೂಡ ವಿಮಾನ ನಿಷೇಧ ವಿಧಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.
ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಕ್ರಿಸ್‌ಮಸ್ ಆಚರಣೆ ಮೇಲೆ ನಿರ್ಬಂಧ ವಿಧಿಸಿಲು ಬ್ರಿಟನ್ ಸರ್ಕಾರ ಮುಂದಾಗಿದೆ. ಜೊತೆಗೆ ಲಂಡನ್‌ನಲ್ಲಿ ಲಾಕ್‌ಡೌನ್ ವಿಧಿಸಲಾಗಿದೆ. ಹೊಸ ಪ್ರಭೇದದ ವೈರಸ್ ಶೇ.70ರಷ್ಟು ವೇಗದಲ್ಲಿ ಹರಡ್ತಿದೆ. ಈ ಸೋಂಕು ಪ್ರಾಣ ತೆಗೆಯುತ್ತೆ ಎಂಬುದಕ್ಕೆ ಪುರಾವೆಗಳಿಲ್ಲ. ಈ ಬಗ್ಗೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿಕೆ ನೀಡಿದ್ದಾರೆ.
ಮುಂಜಾಗ್ರತಾ ಕ್ರಮಕೈಗೊಳ್ಳಲು ಭಾರತದಲ್ಲಿ ಸಭೆ: ಬ್ರಿಟನ್‌ನಲ್ಲಿ ಹೊಸ ಪ್ರಭೇದದ ಕೊರೊನಾ ಆರ್ಭಟ ಹಿನ್ನೆಲೆಯಲ್ಲಿ ಭಾರತದಲ್ಲಿ ಮುಂಜಾಗ್ರತಾ ಕ್ರಮಕೈಗೊಳ್ಳಲು ಇಂದು ಕೇಂದ್ರ ಆರೋಗ್ಯ ಇಲಾಖೆಯಿಂದ ತುರ್ತು ಸಭೆ ಕರೆಯಲಾಗಿದೆ. WHOನ ಭಾರತದ ಪ್ರತಿನಿಧಿ ಡಾ.ರೊಡೆರಿಕೊ ಹೆಚ್.ಒಫ್ರಿನ್ ಕೂಡ ಸಭೆಯಲ್ಲಿ ಭಾಗಿಯಾಗಲಿದ್ದು ಹೊಸ ಪ್ರಭೇದದ ಕೊವಿಡ್ ಭಾರತ ಪ್ರವೇಶಿಸದಂತೆ ತಡೆಯುವ ಬಗ್ಗೆ ಸಮಾಲೋಚನೆ ನಡೆಸಲಾಗುತ್ತೆ.
ದೇಶದಲ್ಲಿ ಸಕ್ರಿಯ ಕೊರೊನಾ ಪ್ರಕರಣಗಳು 3.05ಲಕ್ಷ; ಚೇತರಿಕೆ ಪ್ರಮಾಣದಲ್ಲಿ ಗಣನೀಯ ಏರಿಕೆ
Published On - 8:04 am, Mon, 21 December 20