ಕೊರೊನಾ ವೈರಸ್ ನಂತರ ಚೀನಾದಲ್ಲಿ ಈಗ ಭಯಾನಕ ಬುಬೋನಿಕ್ ಪ್ಲೇಗ್ ಹಾವಳಿ
ಬೀಜಿಂಗ್: ಕೊರೊನಾ ವೈರಸ್ ಜನಕ ಚೀನಾದಲ್ಲಿ ಈಗ ದಿನಕ್ಕೊಂದು ಹೊಸ ಹೊಸ ವೈರಸ್‌ಗಳು ಹುಟ್ಟಿಕ್ಕೊಳ್ಳುತ್ತಿದ್ದು ಇತರ ದೇಶಗಳು ಈಗ ಚೀನಾದೆಡೆ ಭಯದಿಂದ ನೋಡುವಂತಾಗಿದೆ. ಹೌದು ಕೊರೊನಾ ವೈರಸ್ ಜನಕ ಚೀನಾದಲ್ಲಿ ಹೊಸ ಹೊಸ ವೈರಸ್‌ಗಳು ಪತ್ತೆಯಾಗುತ್ತಿವೆ. ಕೊರೊನಾ ನಂತರ ಬುನ್‌ಯಾ ವೈರಸ್‌ನಿಂದ ನೂರಾರು ಜನರು ಚೀನಾದಲ್ಲಿ ಸಾವನ್ನಪ್ಪಿದ್ದಾರೆ. ಇವುಗಳ ಜೊತೆಗೆ ಈಗ ಬುಬೋನಿಕ್ ಪ್ಲೇಗ್ ಹಾವಳಿ ಚೀನಾದಲ್ಲಿ ಶುರವಾಗಿದೆ. ಚೀನಾದ ಮುಂಗೋಲಿಯಾ ಪ್ರಾಂತ್ಯದ ಹಳ್ಳಿಯೊಂದರಲ್ಲಿ ಬುಬೋನಿಕ್ ಪ್ಲೇಗ್‌ನಿಂದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಚೀನಾ ಸರ್ಕಾರ […]
ಬೀಜಿಂಗ್: ಕೊರೊನಾ ವೈರಸ್ ಜನಕ ಚೀನಾದಲ್ಲಿ ಈಗ ದಿನಕ್ಕೊಂದು ಹೊಸ ಹೊಸ ವೈರಸ್‌ಗಳು ಹುಟ್ಟಿಕ್ಕೊಳ್ಳುತ್ತಿದ್ದು ಇತರ ದೇಶಗಳು ಈಗ ಚೀನಾದೆಡೆ ಭಯದಿಂದ ನೋಡುವಂತಾಗಿದೆ.
ಹೌದು ಕೊರೊನಾ ವೈರಸ್ ಜನಕ ಚೀನಾದಲ್ಲಿ ಹೊಸ ಹೊಸ ವೈರಸ್‌ಗಳು ಪತ್ತೆಯಾಗುತ್ತಿವೆ. ಕೊರೊನಾ ನಂತರ ಬುನ್‌ಯಾ ವೈರಸ್‌ನಿಂದ ನೂರಾರು ಜನರು ಚೀನಾದಲ್ಲಿ ಸಾವನ್ನಪ್ಪಿದ್ದಾರೆ. ಇವುಗಳ ಜೊತೆಗೆ ಈಗ ಬುಬೋನಿಕ್ ಪ್ಲೇಗ್ ಹಾವಳಿ ಚೀನಾದಲ್ಲಿ ಶುರವಾಗಿದೆ. ಚೀನಾದ ಮುಂಗೋಲಿಯಾ ಪ್ರಾಂತ್ಯದ ಹಳ್ಳಿಯೊಂದರಲ್ಲಿ ಬುಬೋನಿಕ್ ಪ್ಲೇಗ್‌ನಿಂದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ.
ಈ ವಿಷಯ ತಿಳಿಯುತ್ತಿದ್ದಂತೆ ಚೀನಾ ಸರ್ಕಾರ ಮುಂಗೋಲಿಯಾ ಪ್ರಾಂತ್ಯದ ಅಧಿಕಾರಿಗಳಿಗೆ ತಕ್ಷಣವೇ ಕ್ರಮ ಕೈಗೊಳ್ಳಲು ಸೂಚಿಸಿದೆ. ಹೀಗಾಗಿ ಅಧಿಕಾರಿಗಳು ಈಗ ಈ ಬುಬೋನಿಕ್ ಪ್ಲೇಗ್‌ನಿಂದ ಸಾವನ್ನಪ್ಪಿರುವ ವ್ಯಕ್ತಿಯ ಇಡೀ ಹಳ್ಳಿಗೆ ಹಳ್ಳಿಯನ್ನೇ ಕ್ವಾರಂಟೈನ್ ಮಾಡಿದ್ದಾರೆ. ಹಳ್ಳಿಯಿಂದ ಯಾರೂ ಹೊರಗೆ ಹೋಗದಂತೆ ಹಾಗೂ ಹೊರಗಿನಿಂದ ಒಳಗೆ ಹೋಗದಂತೆ ಬ್ಲಾಕ್ ಮಾಡಿದ್ದಾರೆ.
ಜೊತೆಗೆ ಹಳ್ಳಿಯಲ್ಲಿ ದಿನಂಪ್ರತಿ ಸ್ಯಾನಿಟೈಸ್ ಮಾಡಿ ಕೆಮಿಕಲ್ಸ್ ಸ್ಪ್ರೇ ಮಾಡಲಾಗುತ್ತಿದೆ. ಇದುವರೆಗಿನ ಟೆಸ್ಟ್‌ನಲ್ಲಿ ಈ ಹಳ್ಳಿಯಲ್ಲಿ ಯಾರೂ ಪಾಸಿಟಿವ್ ಬಂದಿಲ್ಲ. ಆದ್ರೂ ಮುನ್ನಚ್ಚರಿಕೆ ಕ್ರಮವಾಗಿ ಚೀನಾ ಸರ್ಕಾರ ಹಳ್ಳಿಯನ್ನು ಕ್ವಾರಂಟೈನ್ ಮಾಡಿದೆ.
ಸಾಮಾನ್ಯವಾಗಿ ಈ ಬುಬೋನಿಕ್ ಪ್ಲೇಗ್ ಕೂಡಾ ಕೊರೊನಾದಂತೆ ಒಬ್ಬರಿಂದ ಒಬ್ಬರಿಗೆ ಹರಡುತ್ತೆ. ಈ ಸೋಂಕು ತಗುಲಿದರೆ ಲಕ್ಷಣಗಳು ಗೋಚರಿಸಲು ನಾಲ್ಕರಿಂದ ಆರು ದಿನಗಳುಬೇಕು. ಆನಂತರ ಅದೃಷ್ಟ ಚೆನ್ನಾಗಿದ್ದರೆ ಸೋಂಕಿತ ಬದುಕಬಹುದು. ಇಲ್ಲಿದಿದ್ರೆ ಶಿವನ ಪಾದವೇ ಗತಿ. ಯಾಕಂದ್ರೆ ಇದಕ್ಕೂ ಕೂಡಾ ಇನ್ನೂ ಔಷಧ ಕಂಡುಹಿಡಿದಿಲ್ಲ.
Published On - 8:56 pm, Sat, 8 August 20