AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾದಲ್ಲಿ ಇಂದು ಒಂದೇ ದಿನ 5 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್​​ಗಳು ದಾಖಲು; 2ವರ್ಷಗಳಲ್ಲಿಯೇ ಇದು ಅತ್ಯಧಿಕ

ಜಿಲಿನ್​ ಸೀಲ್​ಡೌನ್​ ಆಗುವುದಕ್ಕೂ ಮೊದಲು ಚೀನಾದ ದಕ್ಷಿಣ ನಗರವಾದ ಶೆನ್​ಝೆನ್​​ನ್ನು ಲಾಕ್​ಡೌನ್​ ಮಾಡಲಾಗಿದೆ. ಈ ನಗರ ಚೀನಾದ ತಂತ್ರಜ್ಞಾನ ಮತ್ತು ವ್ಯಾಪಾರ ಕೇಂದ್ರವಾಗಿದ್ದು, ಸುಮಾರು 17.5 ಮಿಲಿಯನ್​ ಜನರಿದ್ದಾರೆ.

ಚೀನಾದಲ್ಲಿ ಇಂದು ಒಂದೇ ದಿನ 5 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್​​ಗಳು ದಾಖಲು; 2ವರ್ಷಗಳಲ್ಲಿಯೇ ಇದು ಅತ್ಯಧಿಕ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Mar 15, 2022 | 10:01 AM

Share

ಬೀಜಿಂಗ್​: ಚೀನಾದಲ್ಲಿ ಕಳೆದ 24ಗಂಟೆಯಲ್ಲಿ 5280 ಕೊರೊನಾದ ಹೊಸ ಪ್ರಕರಣಗಳು ಪತ್ತೆಯಾಗಿವೆ. ಎರಡು ವರ್ಷಗಳಲ್ಲಿಯೇ ಇದು ಅತ್ಯಂತ ಹೆಚ್ಚು ಕೇಸ್​​ಗಳು ಎಂದು ಅಲ್ಲಿನ ರಾಷ್ಟ್ರೀಯ ಆರೋಗ್ಯ ಆಯೋಗ (NHC) ತಿಳಿಸಿದೆ.  ಚೀನಾದ ಹಲವು ಕಡೆಗಳಲ್ಲಿ ಒಮಿಕ್ರಾನ್​ ವೈರಾಣು ಏರಿಕೆಯಾಗುತ್ತಿದೆ. ಚೀನಾದ ಈಶಾನ್ಯ ಪ್ರಾಂತ್ಯವಾದ ಜಿಲಿನ್​​​ನಲ್ಲಿ  ದೇಶೀಯವಾಗಿ ಪ್ರಸರಣ ಶುರುವಾಗಿದೆ.  ಇಲ್ಲಿ ಹೊರಗಿಂದ ಬಂದವರಲ್ಲಿ ಅಷ್ಟೇ ಅಲ್ಲ, ಯಾವುದೇ ಟ್ರಾವೆಲ್​ ಹಿಸ್ಟರಿ ಇಲ್ಲದ ಸುಮಾರು 3000 ಜನರಲ್ಲಿ ಒಮಿಕ್ರಾನ್​ ದೃಢಪಟ್ಟಿದೆ.

ಚೀನಾದಾದ್ಯಂತ ಕಳೆದ ಹಲವು ದಿನಗಳಿಂದ ಒಂದೊಂದೇ ಪ್ರ್ಯಾಂತ್ಯಗಳು ಲಾಕ್​ ಆಗುತ್ತಿವೆ. ಸುಮಾರು 24 ಮಿಲಿಯನ್ ಜನರು ಇರುವ ಜಿಲಿನ್ ಪ್ರಾಂತ್ಯವನ್ನು ಸೋಲವಾರ ಸೀಲ್​ಡೌನ್​ ಮಾಡಲಾಗಿದೆ. 2019ರಲ್ಲಿ ಮೊಟ್ಟಮೊದಲು ಕೊರೊನಾ ವೈರಸ್ ಕಾಣಿಸಿಕೊಂಡಾಗ 2020ರಲ್ಲಿ ಹುಬೈ ಮತ್ತು ವುಹಾನ್​​ಗಳನ್ನು ಲಾಕ್​ಡೌನ್​ ಮಾಡಲಾಗಿತ್ತು. ಅದಾದ ಮೇಲೆ ಕ್ರಮೇಣ ಚೀನಾದಲ್ಲಿ ಕೊರೊನಾ ಕೇಸ್​ಗಳಲ್ಲಿ ಇಳಿಕೆಯಾಗುತ್ತ ಬಂದಿತ್ತು. ಆದರೆ ಈಗ ಮತ್ತೆ ವೈರಾಣು ಹರಡುವಿಕೆ ಹೆಚ್ಚಾಗಿದೆ. ಜಿಲಿನ್​​ನಲ್ಲಿ ಒಮಿಕ್ರಾನ್​ ಪ್ರಸರಣವೂ ವೇಗವಾಗಿದೆ.

ಜಿಲಿನ್​ ಸೀಲ್​ಡೌನ್​ ಆಗುವುದಕ್ಕೂ ಮೊದಲು ಚೀನಾದ ದಕ್ಷಿಣ ನಗರವಾದ ಶೆನ್​ಝೆನ್​​ನ್ನು ಲಾಕ್​ಡೌನ್​ ಮಾಡಲಾಗಿದೆ. ಈ ನಗರ ಚೀನಾದ ತಂತ್ರಜ್ಞಾನ ಮತ್ತು ವ್ಯಾಪಾರ ಕೇಂದ್ರವಾಗಿದ್ದು, ಸುಮಾರು 17.5 ಮಿಲಿಯನ್​ ಜನರಿದ್ದಾರೆ. ಇಲ್ಲೀಗ ಸದ್ಯ ಒಂದುವಾರದ ಲಾಕ್​ಡೌನ್​ ಹೇರಲಾಗಿದ್ದು, ಅದಾದ ಬಳಿಕ ಕೊರೊನಾ ಕೇಸ್​ಗಳ ಸಂಖ್ಯೆ ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಸ್ಥಳೀಯ ಆಡಳಿತ ತಿಳಿಸಿದೆ.  ಪೂರ್ವದಲ್ಲಿರುವ ಶಾಂಘೈ ಸಿಟಿಯಿಂದ ದಕ್ಷಿಣದಲ್ಲಿರುವ ಶೆನ್​ಝೆನ್​​ವರೆಗೆ, ಬೀಜಿಂಗ್​​ನ ಹಲವು ನಗರಗಳು ಸೇರಿ ಅನೇಕ ಕಡೆ ಕೊರೊನಾ ಉತ್ತುಂಗಕ್ಕೇರುತ್ತಿದೆ. ಇನ್ನು ಚೀನಾ ಸರ್ಕಾರ, ಸ್ಥಳೀಯ ಅಧಿಕಾರಿಗಳು ಹಲವು ಕ್ರಮಗಳ ಮೂಲಕ ಕೊರೊನಾ ನಿಯಂತ್ರಣಕ್ಕೆ ಮುಂದಾಗುತ್ತಿದ್ದಾರೆ. ಸಾಮೂಹಿಕ ತಪಾಸಣೆ, ಲಾಕ್​ಡೌನ್​ಗಳು, ಪ್ರಯಾಣ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ.  ಜಿಲಿಯನ್ ಪ್ರಾಂತ್ಯವೆಂದರೆ ರಷ್ಯಾ ಮತ್ತು ಉತ್ತರ ಕೊರಿಯಾ ಗಡಿ ಭಾಗವಾಗಿದ್ದು, ಇಲ್ಲಿನ ಜನರಿಗೆ ತುಸು ಜಾಸ್ತಿ ಎನ್ನಿಸುವಷ್ಟೇ ನಿರ್ಬಂಧ ವಿಧಿಸಲಾಗಿದೆ. ಮನೆ ಬಿಟ್ಟು ಎಲ್ಲಿಗೂ ಹೋಗದಂತೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಇಸ್ರೇಲ್ ಮಾದರಿಯಲ್ಲಿ ಗುಲಾಬಿ ಬೆಳೆಯುತ್ತಿರುವ ಎಂಟೆಕ್ ಪದವೀಧರ; ವರ್ಷಕ್ಕೆ ಒಂದು ಕೋಟಿ ರೂಪಾಯಿಗೂ ಅಧಿಕ ಲಾಭ ಗಳಿಕೆ

Published On - 7:56 am, Tue, 15 March 22

Follow Us
TV9 Web
TV9 Web

TV9 Kannada

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್