AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾದ ಹುಟ್ಟೂರಲ್ಲಿ ಮತ್ತೆ ವೈರಸ್​ ಅಬ್ಬರ; ಆಸ್ಪತ್ರೆಗಳಲ್ಲಿ ಬೆಡ್​ ಕೊರತೆ, ತುಂಬಿರುವ ಶವಾಗಾರಗಳು, ಜನರು ಕಂಗಾಲು

ಜೀರೋ ಕೊವಿಡ್ ಕಾರ್ಯ ವಿಧಾನದ ನ್ಯೂನತೆಗಳನ್ನು ಹಾಂಗ್ ಕಾಂಗ್‌ನಲ್ಲಿ ಬಹಿರಂಗಪಡಿಸಲಾಗಿದೆ. ಅಲ್ಲಿ ದಕ್ಷಿಣ ಚೀನಾದ ನಗರದ ಸರ್ಕಾರದಿಂದ ಸಂದೇಶಗಳು ಆಹಾರ ಸರಬರಾಜುಗಳ ಸಂಗ್ರಹಣೆಗೆ ಉತ್ತೇಜನ ನೀಡಿವೆ.

ಕೊರೊನಾದ ಹುಟ್ಟೂರಲ್ಲಿ ಮತ್ತೆ ವೈರಸ್​ ಅಬ್ಬರ; ಆಸ್ಪತ್ರೆಗಳಲ್ಲಿ ಬೆಡ್​ ಕೊರತೆ, ತುಂಬಿರುವ ಶವಾಗಾರಗಳು, ಜನರು ಕಂಗಾಲು
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Mar 13, 2022 | 10:25 AM

Share

ಕೊರೊನಾದ ಹುಟ್ಟೂರಾದ ಚೀನಾದಲ್ಲಿ ಕೊವಿಡ್​ 19, ಒಮಿಕ್ರಾನ್​​ (Omicron Cases in China) ಏರಿಕೆಯಾಗುತ್ತಲೇ ಇದೆ. ಈಗಾಗಲೇ ಈಶಾನ್ಯ ಚೀನಾದಲ್ಲಿ ಲಾಕ್​ಡೌನ್ (Lock Down In China)​ ಮಾಡಲು ಆದೇಶಿಸಲಾಗಿದೆ. ಇನ್ನೊಂದೆಡೆ ಹಾಂಗ್​​ ಕಾಂಗ್​​ನಲ್ಲಿ ಒಮಿಕ್ರಾನ್​ ಅತ್ಯಂತ ವೇಗವಾಗಿ ಹರಡುತ್ತಿದೆ. ಅಲ್ಲಿ ಸಾಮೂಹಿಕ ತಪಾಸಣೆ, ಕ್ವಾರಂಟೈನ್​ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಮಧ್ಯೆ ಆಸ್ಪತ್ರೆಗಳಲ್ಲಿ ಬೆಡ್​ ಕೊರತೆ ಎದುರಾಗಿದೆ. ಮತ್ತೊಮ್ಮೆ ಲಾಕ್​ಡೌನ್ ಆಗಬಹುದು ಎಂಬ ಭಯದಲ್ಲಿ, ಅಗತ್ಯ ವಸ್ತುಗಳ ಖರೀದಿಗಾಗಿ ಸೂಪರ್​ ಮಾರ್ಕೆಟ್​, ಮಳಿಗೆಗಳಿಗೆ ಮುಗಿಬೀಳುತ್ತಿದ್ದಾರೆ. ಅದಕ್ಕಿಂತ ಭಯಾನಕವೆಂದರೆ ಶವಾಗಾರಗಳಲ್ಲೂ ಜಾಗವಿಲ್ಲದಂತಾಗಿದೆ. ಹೀಗಾಗಿ ಆಸ್ಪತ್ರೆ ಆಡಳಿತಗಳು ಶವಗಳನ್ನು ಶೈತ್ಯೀಕರಿಸಿದ ಶಿಪ್ಪಿಂಗ್​ ಕಂಟೇನರ್​ಗಳಲ್ಲಿ ಇಡುತ್ತಿದ್ದಾರೆ.

ಜಾಗತಿಕವಾಗಿ ಕೊರೊನಾದಿಂದ ಮೃತಪಡುವವರ ಸಂಖ್ಯೆ ಹೆಚ್ಚಿದೆ. ಈ ವಾರದಲ್ಲಿ ಆರು ಮಿಲಿಯನ್​ಗೆ ತಲುಪಿದೆ. ಹಾಂಗ್​ಕಾಂಗ್​​ನಲ್ಲಿ 2021ರ ಡಿಸೆಂಬರ್​ 31 ರಿಂದ ಇಲ್ಲಿಯವರೆಗೆ ಸುಮಾರು 2000 ಜನರು ಕೊರೊನಾದಿಂದ ಮೃತಪಟ್ಟಿದ್ದಾರೆ.  ಲಸಿಕೆ ನೀಡಿಕೆ ವೇಗ ಕುಂಠಿತಗೊಂಡಿದ್ದೇ ಕೊರೊನಾ ಹೆಚ್ಚಲು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಅದರಲ್ಲೂ ವಯಸ್ಸಾದವರಿಗೆ ಲಸಿಕೆ ನೀಡಿಕೆ ಪ್ರಮಾಣ ತುಂಬ ಕಡಿಮೆಯಾಗಿದೆ. ಹಾಂಗ್​ಕಾಂಗ್​​ನಲ್ಲಿ ಪ್ರಾರಂಭವಾದ ಪ್ರಸಕ್ತ ಅಲೆಯಲ್ಲಿ ಸುಮಾರು 1153 ಮಂದಿ ಮೃತಪಟ್ಟವರಲ್ಲಿ ಶೇ.8ರಷ್ಟು ಮಂದಿ ಮಾತ್ರ ಎರಡೂ ಡೋಸ್​ ಕೊರೊನಾ ಲಸಿಕೆ ಪಡೆದವರು ಎಂಬುದು ದೃಢಪಟ್ಟಿದೆ.

ಜೀರೋ ಕೊವಿಡ್ ಕಾರ್ಯ ವಿಧಾನದ ನ್ಯೂನತೆಗಳನ್ನು ಹಾಂಗ್ ಕಾಂಗ್‌ನಲ್ಲಿ ಬಹಿರಂಗಪಡಿಸಲಾಗಿದೆ. ಅಲ್ಲಿ ದಕ್ಷಿಣ ಚೀನಾದ ನಗರದ ಸರ್ಕಾರದಿಂದ ಸಂದೇಶಗಳು ಆಹಾರ ಸರಬರಾಜುಗಳ ಸಂಗ್ರಹಣೆಗೆ ಉತ್ತೇಜನ ನೀಡಿವೆ ಮತ್ತು ಜನರನ್ನು ಪ್ರತ್ಯೇಕತೆಗೆ ಕರೆದೊಯ್ಯಲಾಗುತ್ತದೆ ಎಂಬ ಸಾರ್ವಜನಿಕ ಭಯವನ್ನು ಉಂಟುಮಾಡಿದೆ. ಶಾಂಘೈನಲ್ಲಿ, ಕೆಲವು ವಸ್ತುಸಂಗ್ರಹಾಲಯಗಳನ್ನು ಶುಕ್ರವಾರದಿಂದ ತಾತ್ಕಾಲಿಕವಾಗಿ ಮುಚ್ಚಲಾಗುವುದು ಎಂದು ನಗರ ಸರ್ಕಾರ ಹೇಳಿದೆ. ದಕ್ಷಿಣದ ನಗರವಾದ ಶೆನ್‌ಜೆನ್ ಫೆಬ್ರವರಿಯಲ್ಲಿ ಆನ್‌ಲೈನ್ ಶಿಕ್ಷಣಆರಂಭವಾದಾಗ ಅಲ್ಲಿ ಪ್ರಕರಣಗಳು ಹೆಚ್ಚಾಗಲು ಪ್ರಾರಂಭಿಸಿದವು ಮತ್ತು ಹಾಗೆಯೇ ಉಳಿದಿವೆ. ಬೀಜಿಂಗ್‌ನಲ್ಲಿ ಹಲವಾರು ವಸತಿ ಸಮುಚ್ಚಯ ಸಂಪೂರ್ಣವಾಗಿ ಅಥವಾ ಭಾಗಶಃ ಲಾಕ್‌ಡೌನ್ ಮಾಡಲಾಗಿದೆ.

ಇದನ್ನೂ ಓದಿ: Shane Warne: ಸ್ಪಿನ್ ದಿಗ್ಗಜರ ಶೇನ್ ವಾರ್ನ್ ಸಾವಿಗೆ ಮುಳುವಾಯಿತೇ ಈ ಒಂದು ಕಾರಣ?

Published On - 9:30 am, Sun, 13 March 22

ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ