AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಕ್ರೇನ್​​ಗೆ ಜಗತ್ತಿನ ಡೆಡ್ಲಿ ಸ್ನೈಪರ್​ ವಾಲಿ ಬಲ; ದಿನಕ್ಕೆ 40 ಜನರನ್ನು ಕೊಲ್ಲುವ ಸಾಮರ್ಥ್ಯ ಹೊಂದಿದ್ದಾರಂತೆ ಈ ಯೋಧ !

40 ವರ್ಷದ ಈ ವಾಲಿ ಜಗತ್ತಿನ ಅತ್ಯುತ್ತಮ ಸ್ನೈಪರ್​ಗಳಲ್ಲಿ (ಗುರಿಕಾರ- ಮರೆಯಲ್ಲಿ ನಿಂತು ಗುಂಡು ಹೊಡೆದರೂ ಗುರಿ ತಪ್ಪದವ) ಒಬ್ಬರು ಎನ್ನಲಾಗಿದೆ. ವಾಲಿ ಕಂಪ್ಯೂಟರ್​ ವಿಜ್ಞಾನಿಯೂ ಹೌದು.

ಉಕ್ರೇನ್​​ಗೆ ಜಗತ್ತಿನ ಡೆಡ್ಲಿ ಸ್ನೈಪರ್​ ವಾಲಿ ಬಲ; ದಿನಕ್ಕೆ 40 ಜನರನ್ನು ಕೊಲ್ಲುವ ಸಾಮರ್ಥ್ಯ ಹೊಂದಿದ್ದಾರಂತೆ ಈ ಯೋಧ !
ವಾಲಿ
TV9 Web
| Edited By: |

Updated on: Mar 12, 2022 | 3:58 PM

Share

ಯುದ್ಧ ನಡೆಯುತ್ತಿರುವ ಉಕ್ರೇನ್​ನಲ್ಲಿ (Russia Attack On Ukraine) ಅಲ್ಲಿನ ಸೇನೆಯೊಂದಿಗೆ ಸೇರಿ ದೇಶದ ನಾಗರಿಕರೂ ಕೂಡ ರಷ್ಯಾ ವಿರುದ್ಧ ಹೋರಾಡುತ್ತಿದ್ದಾರೆ. ಜೀವನದಲ್ಲೆಂದೂ ಬಂದೂಕು, ರೈಫಲ್​ ಮುಟ್ಟಿರದವರೂ ಕೂಡ ಸ್ವಲ್ಪ ಸಮಯದಲ್ಲೇ ತರಬೇತಿ ಪಡೆದು ರಷ್ಯಾ ಸೈನಿಕರನ್ನು ಹಿಮ್ಮೆಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನೊಂದೆಡೆ ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky) ನೀಡಿದ್ದ ಕರೆಗೆ ವಿದೇಶಗಳ 20 ಸಾವಿರಕ್ಕೂ ಅಧಿಕ ಸ್ವಯಂ ಸೇವಕರು ಸ್ಪಂದಿಸಿ, ಉಕ್ರೇನ್​ ನೆಲದಲ್ಲಿ ನಿಂತು ರಷ್ಯಾ ವಿರುದ್ಧ ಸೆಣೆಸುತ್ತಿದ್ದಾರೆ. ಈ ಸ್ವಯಂ ಸೇವಕರಲ್ಲಿ ಯುಎಸ್​, ಯುಕೆ ಸೇರಿ ಹಲವು ದೇಶಗಳ ಜನರಿದ್ದಾರೆ. ಅಷ್ಟೇ ಅಲ್ಲ ಭಾರತದವರೂ ಕೆಲವರು ಇರುವುದಾಗಿ ವರದಿಯಾಗಿದೆ.

ಈ ಮಧ್ಯೆ ಕೆನಡಾ ಸೇನೆಯಲ್ಲಿದ್ದು, ಡೆಡ್ಲಿ ಸ್ನೈಪರ್​ ಎಂದೇ ಖ್ಯಾತರಾಗಿರುವ ಯೋಧನೊಬ್ಬ ಉಕ್ರೇನ್​ಗೆ ಕಾಲಿಟ್ಟಿದ್ದು, ಅವರೀಗ ಭರ್ಜರಿ ಸುದ್ದಿಯಲ್ಲಿದ್ದಾರೆ. ಎರಡು ದಿನಗಳ ಹಿಂದೆಯೇ ಉಕ್ರೇನ್​ ತಲುಪಿರುವ ಇವರು ರಾಯಲ್​ ಕೆನಡಿಯನ್​ 22ನೇ ರೆಜಿಮೆಂಟ್​​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವರು. ಇಟ್ಟ ಗುರಿ ತಪ್ಪದ ಯೋಧ ಎಂದೇ ಖ್ಯಾತರಾಗಿದ್ದಾರೆ. ಇನ್ನೊಂದೆಂದರೆ ಈ ವ್ಯಕ್ತಿಯ ಹೆಸರು ಇನ್ನೂ ಗೊತ್ತಾಗಿಲ್ಲ. ಆದರೆ ಸಾಮಾನ್ಯವಾಗಿ ವಾಲಿ ಎಂದೇ ಪ್ರಸಿದ್ಧರಾಗಿದ್ದಾರೆ. ಈ ಹೆಸರನ್ನು ಇವರಿಗೆ ಅಫ್ಘಾನಿಸ್ತಾನ ಕೊಟ್ಟಿದೆ ಎಂದೂ ಹೇಳಲಾಗಿದೆ.

ಯಾರು ಈ ವಾಲಿ?: 40 ವರ್ಷದ ಈ ವಾಲಿ ಜಗತ್ತಿನ ಅತ್ಯುತ್ತಮ ಸ್ನೈಪರ್​ಗಳಲ್ಲಿ (ಗುರಿಕಾರ- ಮರೆಯಲ್ಲಿ ನಿಂತು ಗುಂಡು ಹೊಡೆದರೂ ಗುರಿ ತಪ್ಪದವ) ಒಬ್ಬರು ಎನ್ನಲಾಗಿದೆ. ವಾಲಿ ಕಂಪ್ಯೂಟರ್​ ವಿಜ್ಞಾನಿಯೂ ಹೌದು. ಇವರಿಗೆ ವಿವಾಹವಾಗಿದ್ದು, ಮನೆಯಲ್ಲಿ ಒಂದುವರ್ಷದ ಮಗುವಿದೆ ಎಂದೂ ಹೇಳಲಾಗಿದೆ. ಕುಟುಂಬವನ್ನೆಲ್ಲ ಬಿಟ್ಟು ಉಕ್ರೇನ್​ಗೆ ಬಂದಿರುವ ಇವರು ರಷ್ಯಾ ವಿರುದ್ಧ ಹೋರಾಟ ಮಾಡಲು ಉತ್ಸಾಹದಿಂದ ಇದ್ದೇನೆ, ಉಕ್ರೇನಿಯನ್ನಿರಿಗೆ ಸಹಾಯ ಮಾಡಲು ಬಂದಿದ್ದೇನೆ ಎಂದು ಉಕ್ರೇನ್​ನ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಈಗಾಗಲೇ ರಷ್ಯಾದ ಆರು ಸೈನಿಕರನ್ನು ಹತ್ಯೆ ಮಾಡಿದ್ದಾರೆ ಎಂಬುದಾಗಿಯೂ ವರದಿಯಾಗಿದೆ.

ಡೆಡ್ಲಿ ಸ್ನೈಪರ್​:  ಒಂದು ದಿನದಲ್ಲಿ 40 ಜನರನ್ನು ಕೊಲ್ಲುವ ಸಾಮರ್ಥ್ಯ ಇರುವ ವಾಲಿ, ಅತ್ಯಂತ ಡೆಡ್ಲಿ ಗುರಿಕಾರರೆನಿಸಿದ್ದಾರೆ. ಇವರು 2009ರಿಂದ 2011ರವರೆಗೆ ಅಫ್ಘಾನಿಸ್ತಾನದ ಕಂದಹಾರ್​​ ಹೋರಾಟದಲ್ಲೂ ಪಾಲ್ಗೊಂಡಿದ್ದಾರೆ. ಇದೇ ವೇಳೆ ಅವರಿಗೆ ವಾಲಿ ಎಂಬ ಹೆಸರು ಬಂದಿದೆ. ಇದೊಂದು ಅರೇಬಿಕ್​ ಶಬ್ದವಾಗಿದ್ದು, ಹೀಗೆಂದರೆ ರಕ್ಷಕ ಎಂಬ ಅರ್ಥ ಕೊಡುತ್ತದೆ. ಉತ್ತಮ ಸ್ನೈಪರ್ ಅಥವಾ ಗುರಿಕಾರ ಎಂದು ಕರೆಸಿಕೊಳ್ಳಬೇಕೆಂದರೆ ಆತ ದಿನಕ್ಕೆ 5-6 ಮಂದಿಯನ್ನು ಕೊಲ್ಲುವಂತಿರಬೇಕು. ಶ್ರೇಷ್ಠ ಸ್ನೈಪರ್​ ಎಂಬ ಪಟ್ಟ ಬೇಕಾದರೆ ದಿನಕ್ಕೆ 7-10 ಮಂದಿಯನ್ನಾದರೂ ಸಾಯಿಸಬೇಕು. ಆದರೆ ಈ ವಾಲಿ ದಿನಕ್ಕೆ 40 ಜನರನ್ನು ಕೊಲ್ಲುವ ಶಕ್ತಿ ಹೊಂದಿದ್ದು, ಡೆಡ್ಲಿ ಸ್ನೈಪರ್​ ಎಂದೇ ಖ್ಯಾತರಾಗಿದ್ದಾರೆ ಎಂದು ಮಾಧ್ಯಮಗಳು, ಕೆಲವು ಡಾಕ್ಯುಮೆಂಟರಿಗಳಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Video: ಗೆದ್ದು 2ನೇ ಬಾರಿಗೆ ಸಿಎಂ ಆದ ಯೋಗಿ ಆದಿತ್ಯನಾಥ್​​ಗೆ ತಿಲಕವಿಟ್ಟು, ಶುಭಾಶಯ ಕೋರಿದ ಮುಲಾಯಂ ಸಿಂಗ್​ ಯಾದವ್​ ಸೊಸೆ, ಮೊಮ್ಮಗಳು

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?