ಇಸ್ರೇಲ್ ಮಾದರಿಯಲ್ಲಿ ಗುಲಾಬಿ ಬೆಳೆಯುತ್ತಿರುವ ಎಂಟೆಕ್ ಪದವೀಧರ; ವರ್ಷಕ್ಕೆ ಒಂದು ಕೋಟಿ ರೂಪಾಯಿಗೂ ಅಧಿಕ ಲಾಭ ಗಳಿಕೆ
ವಿದೇಶದಲ್ಲಿನ ಕೆಲಸಕ್ಕೆ ಗುಡ್ ಬೈ ಹೇಳಿ ಬಂದ ಗಿರೀಶ್, ತಂದೆಯ 6 ಎಕರೆ ಜಮೀನಿನಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನ ಅಳವಡಿಸಿಕೊಂಡು ಗುಲಾಬಿ ಬೆಳೆ ಬೆಳೆಯುತ್ತಿದ್ದಾರೆ. 6 ಎಕರೆ ಜಮೀನಿನಲ್ಲಿ ಅರ್ಧ ಎಕರೆ. ಎಕರೆಗೊಂದರಂತೆ ಪಾಲಿಹೌಸ್ಗಳನ್ನ ನಿರ್ಮಿಸಿ ಸೈಟಿಫಿಕ್ ಮಾದರಿಯಲ್ಲಿ ಪಾಲಿಹೌಸ್ಗಳಲ್ಲಿ ಗುಲಾಬಿ ಬೆಳೆ ಬೆಳೆಯುತ್ತಿದ್ದಾರೆ.
ಬಳ್ಳಾರಿ: ವಿದೇಶದಲ್ಲಿ ತಿಂಗಳಿಗೆ ನಾಲ್ಕು ಲಕ್ಷ ರೂಪಾಯಿ ಸಂಬಳ(salary) ಬರುತ್ತಿದ್ದ ನೌಕರಿಯಲ್ಲಿದ್ದ ವ್ಯಕ್ತಿ ತನ್ನೂರಿಗೆ ಮರಳಿದ್ದು, ಕೃಷಿಯತ್ತ(Agriculture) ಮುಖ ಮಾಡಿದ್ದಾರೆ. ಜರ್ಮನಿಯ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡತ್ತಿದ್ದ ಆ ಪದವೀಧರ ಲಕ್ಷ ಲಕ್ಷ ಸಂಬಳದ ಕೆಲಸಕ್ಕೆ ಗುಡ್ ಬೈ ಹೇಳಿ ಕೃಷಿ ಕಾಯಕದಲ್ಲಿ ತೊಡಗಿದ್ದಾರೆ. ಇಸ್ರೇಲ್ ಮಾದರಿ ಅಳವಡಿಸಿಕೊಂಡು ಗುಲಾಬಿ(Rose) ಬೆಳೆ ಬೆಳೆಯುತ್ತಿರುವ ಈ ಪದವೀಧರ ವರ್ಷಕ್ಕೆ ಒಂದು ಕೋಟಿ ರೂಪಾಯಿ ಆದಾಯ ಗಳಿಸುವ ಮೂಲಕ ಇತರ ರೈತರಿಗೂ ಮಾದರಿಯಾಗಿದ್ದಾರೆ.
ಎಂಟೆಕ್ ಪದವೀಧರರಾಗಿರುವ ಗಿರೀಶ್ ಮುಚ್ಚಾಲ್ ಜರ್ಮನಿ ದೇಶದ ಖಾಸಗಿ ಕಂಪನಿಯಲ್ಲಿ ನಾಲ್ಕು ಲಕ್ಷ ರೂಪಾಯಿ ಸಂಬಳದ ನೌಕರಿಯಿತ್ತು. ಆದರೆ ಹುಟ್ಟೂರಿನಲ್ಲಿ ಎನಾದ್ರು ಮಾಡಬೇಕು. ಅದ್ರಲ್ಲೂ ಕೃಷಿಯಲ್ಲೆ ಸಾಧನೆ ಮಾಡಬೇಕು ಅಂತಾ ಕನಸು ಕಂಡಿದ್ದ ಗಿರೀಶ ಈಗ ರಾಜ್ಯದಲ್ಲಿ ಇಸ್ರೇಲ್ ಮಾದರಿಯಲ್ಲಿ ಕೃಷಿ ಕಾಯಕಕ್ಕೆ ಇಳಿದಿದ್ದಾರೆ. ವಿಜಯನಗರ ಜಿಲ್ಲೆಯ ಕೂಡ್ಲಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ತಾಂಡಾ ಬಳಿಯ ವಾಸುಪುರದಲ್ಲಿ ಗುಲಾಬಿ ತೋಟ ಮಾಡಿಕೊಂಡು ವಿನೂತನವಾಗಿ ಗುಲಾಬಿ ಬೆಳೆ ಬೆಳೆಯುತ್ತಿದ್ದಾರೆ.
ವಿದೇಶದಲ್ಲಿನ ಕೆಲಸಕ್ಕೆ ಗುಡ್ ಬೈ ಹೇಳಿ ಬಂದ ಗಿರೀಶ್, ತಂದೆಯ 6 ಎಕರೆ ಜಮೀನಿನಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನ ಅಳವಡಿಸಿಕೊಂಡು ಗುಲಾಬಿ ಬೆಳೆ ಬೆಳೆಯುತ್ತಿದ್ದಾರೆ. 6 ಎಕರೆ ಜಮೀನಿನಲ್ಲಿ ಅರ್ಧ ಎಕರೆ. ಎಕರೆಗೊಂದರಂತೆ ಪಾಲಿಹೌಸ್ಗಳನ್ನ ನಿರ್ಮಿಸಿ ಸೈಟಿಫಿಕ್ ಮಾದರಿಯಲ್ಲಿ ಪಾಲಿಹೌಸ್ಗಳಲ್ಲಿ ಗುಲಾಬಿ ಬೆಳೆ ಬೆಳೆಯುತ್ತಿದ್ದಾರೆ.
ಕೆಂಪು, ಹಳದಿ, ಬಿಳಿ, ಕೇಸರಿ ಸೇರಿದಂತೆ ವಿವಿಧ ತಳಿಯ ಐದು ವೈರಟಿಯಲ್ಲಿ ಗುಲಾಬಿ ಬೆಳೆಯನ್ನ ಇವರು ಬೆಳೆಯುತ್ತಿದ್ದಾರೆ. ಇವರು ಬೆಳೆಯುವ ಗುಲಾಬಿ ಹೂವುಗಳು ಸದ್ಯ ಶ್ರೀಲಂಕಾ, ಸೌದಿ ಅರೇಬಿಯಾ ದೇಶಕ್ಕೂ ರಫ್ತಾಗುತ್ತದೆ. ಜೊತೆಗೆ ದೇಶದ ವಿವಿಧ ಪ್ರಮುಖ ನಗರಗಳಿಗೂ ಇವರು ಗುಲಾಬಿ ಹೂವುಗಳನ್ನು ಕಳುಹಿಸಿ ಮಾರಾಟ ಮಾಡುವ ಮೂಲಕ ವರ್ಷಕ್ಕೆ ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.
ಕೃಷಿ ಮಾಡಬೇಕು ಎಂದುಕೊಂಡೆ ಆದರೆ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಕೃಷಿ ಮಾಡಲು ಮುಂದಾದ ವೇಳೆ ನಮ್ಮ ಜಮೀನಿನಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 36 ಬೋರವೇಲ್ ಕೊರಿಸಿದೆ, ಬೆಳೆ ಬೆಳೆಯೋಕೆ ನೀರು ದೊರೆಯಲಿಲ್ಲ. ಆದ್ರು ಪಟ್ಟು ಬಿಡದೆ ಕುಟುಂಬದ ಸದಸ್ಯರ ಜತೆ ಸೇರಿ ಪಾಲಿಹೌಸ್ಗಳ ಮೇಲೆ ಬೀಳುವ ಮಳೆ ನೀರು ಕೊಯ್ಲು ಮಾಡಿ ನೀರು ಸಂಗ್ರಹಣೆ ಮಾಡಿ ಲಾಭ ಗಳಿಸಿದ್ದೇನೆ ಎಂದು ಕೃಷಿ ಕಾಯಕದಲ್ಲಿ ತೊಡಗಿದ ಎಂಟೆಕ್ ಪದವೀಧರ ಗಿರೀಶ ಮುಚ್ಚಾಲ್ ಹೇಳಿದ್ದಾರೆ.
ಮಳೆ ನೀರು ಕೊಯ್ಲು ಮಾಡಲು ಒಂದೂವರೆ ಕೋಟಿ ಲೀಟರ್ನ ಕೆರೆ ಸಹ ತೋಟದಲ್ಲಿ ನಿರ್ಮಿಸಿದ್ದಾರೆ. ಗುಲಾಬಿ ಹೂವುಗಳ ಸಂರಕ್ಷಣೆಗೆ ತೋಟದಲ್ಲಿ ಕೋಲ್ಡ್ ಸ್ಟೋರೇಜ್ ಸಹ ನಿರ್ಮಾಣ ಮಾಡಿದ್ದಾರೆ. ಬ್ಯಾಂಕ್ನಿಂದ ಒಂದಲ್ಲ ಎರಡಲ್ಲ ಐದು ಕೋಟಿ ರೂಪಾಯಿ ಸಾಲ ಮಾಡಿ ಕೃಷಿ ಕಾಯಕದಲ್ಲಿ ತೊಡಗಿರುವ ಇವರ ಧೈರ್ಯ ಇತರ ರೈತರಿಗೂ ಮಾದರಿಯಾಗಿದೆ. ಗುಲಾಬಿ ಹೂವುಗಳನ್ನ ವಿದೇಶಕ್ಕೆ ಬೇಕಾಗುವ ಕ್ಯಾಲಿಟಿಯಲ್ಲೆ ಬೆಳೆದು ರಫ್ತು ಮಾಡುವ ಮೂಲಕ ಗಿರೀಶ್ ಪ್ರತಿ ವರ್ಷ ಒಂದು ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಆದರೆ ಕಳೆದೆರಡು ವರ್ಷಗಳ ಕಾಲ ಕಾಡಿದ ಕೊವಿಡ್ ಗಿರೀಶ್ಗೆ ನಷ್ಟವನ್ನು ಉಂಟು ಮಾಡಿದೆ. ಆದ್ರು ಚಲಬಿಡದೇ ಕೃಷಿಯಲ್ಲಿ ತೊಡಗಿರುವ ಗಿರೀಶ್ ಈಗ ಮತ್ತೆ ಲಾಭದತ್ತ ಮುಖ ಮಾಡಿದ್ದಾರೆ. ಗಿರೀಶ್ ಕೆಲಸ ಬಿಟ್ಟು ಬಂದು ಗುಲಾಬಿ ಬೆಳೆ ಬೆಳೆಯುವ ಮೂಲಕ ಲಾಭ ಕಂಡುಕೊಂಡಿರುವುದು ಕುಟುಂಬದವರಿಗೂ ಈಗ ಖುಷಿ ತಂದಿದೆ.
ಗಿರೀಶ್ ಮೊದ ಮೊದಲು ಕೃಷಿ ಕಾರ್ಯಕ್ಕೆ ತೊಡಗಿದ ವೇಳೆ ನಷ್ಟ ಹಾಗೂ ಮೋಸಕ್ಕೆ ತುತ್ತಾಗಿದ್ದು ಉಂಟು. ಮನೆಯವರ ವಿರೋಧವನ್ನ ಲೆಕ್ಕಿಸದೇ ಗುಲಾಬಿ ತೋಟ ಮಾಡಲು ಮುಂದಾದ ವೇಳೆ ಗಿರೀಶ್ಗೆ ಹಲವರು ಹಿಯಾಳಿಸಿದ್ದಾರೆ. ಆದರೂ ದೇಶಕ್ಕೆ ಅನ್ನ ಕೊಡುವ ರೈತ ಕೃಷಿ ಕಾಯಕ ಮರೆಯಬಾರದು ಅನ್ನುವಂತೆ ಇಸ್ರೇಲ್ ಮಾದರಿ ಅಳವಡಿಸಿಕೊಂಡು ಕಡಿಮೆ ನೀರು ಬಳಸಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಗುಲಾಬಿ ಬೆಳೆ ಬೆಳೆಯುವ ಮೂಲಕ ಕೋಟಿ ಕೋಟಿ ಲಾಭ ಗಳಿಸುತ್ತಿದ್ದಾರೆ. ಜೊತೆಗೆ ಅಕ್ಕ ಪಕ್ಕದ ಹಳ್ಳಿಯ ಜನರು ಸೇರಿದಂತೆ ಬೇರೆ ರಾಜ್ಯದ 30ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸಹ ನೀಡಿದ್ದಾರೆ. ಕೃಷಿ ಅಂದ್ರೆ ನಷ್ಟ. ಸಾಲ ಅನ್ನೋ ಹಲವು ರೈತರಿಗೆ ಗಿರೀಶ್ ಅವರು ನಿಜಕ್ಕೂ ಮಾದರಿಯಾಗಿದ್ದಾರೆ.
ವರದಿ: ವೀರಪ್ಪ ದಾನಿ
ರಂಗುರಂಗಿನ ದಿರಿಸಿನಲ್ಲಿ ಜೆನಿಲಿಯಾ ಡಿಸೋಜ ಚೆಂಗುಲಾಬಿಯಂತೆ ಕಾಣುತ್ತಾರೆ, ವಿಡಿಯೋ ನೋಡಿ ಮರುಳಾಗ್ತೀರಾ!!
ಬಿಕಾಂ ಪದವೀಧರನ ಕೃಷಿ ಪಯಣ; 20 ಎಕರೆ ಜಮೀನಿನಲ್ಲಿ ಸಮೃದ್ಧ ಬೆಳೆ, ಸ್ವಾವಲಂಬಿ ಜೀವನದ ಯಶೋಗಾಥೆ ಇಲ್ಲಿದೆ