ಬೀಜಿಂಗ್: ಚೀನಾದಲ್ಲಿ (China) ಜನವರಿ 13 ಮತ್ತು 19 ರ ನಡುವೆ ಆಸ್ಪತ್ರೆಗಳಲ್ಲಿ ಸುಮಾರು 13,000 ಕೋವಿಡ್ ಸಂಬಂಧಿತ (Covid-19) ಸಾವುಗಳನ್ನು ವರದಿ ಆಗಿದೆ. ಜನಸಂಖ್ಯೆಯ ಬಹುಪಾಲು ಜನರು ಈಗಾಗಲೇ ವೈರಸ್‌ನಿಂದ (Coronavirus) ಸೋಂಕಿಗೆ ಒಳಗಾಗಿದ್ದಾರೆ ಎಂದು ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಜನವರಿ 12 ರ ಹೊತ್ತಿಗೆ ಆಸ್ಪತ್ರೆಗಳಲ್ಲಿ ಸುಮಾರು 60,000 ಜನರು ಕೋವಿಡ್‌ನಿಂದ ಸಾವಿಗೀಡಾಗಿದ್ದಾರೆ ಎಂದು ಚೀನಾ ಒಂದು ವಾರದ ಹಿಂದೆ ಹೇಳಿತ್ತು. ಆದರೆ ಬೀಜಿಂಗ್ ಕಳೆದ ತಿಂಗಳು ಥಟ್ಟನೆ ಆಂಟಿ-ವೈರಸ್ ನಿಯಂತ್ರಣಗಳನ್ನು ತೆಗೆದುಹಾಕಿದಾಗಿನಿಂದ ಅಧಿಕೃತ ಮಾಹಿತಿಯ ಮೇಲೆ ವ್ಯಾಪಕ ಸಂದೇಹವಿದೆ. ಕೊರೊನಾವೈರಸ್ ಸೋಂಕಿನಿಂದ ಉಂಟಾದ ಉಸಿರಾಟದ ವೈಫಲ್ಯದಿಂದ ಆಸ್ಪತ್ರೆಗೆ ದಾಖಲಾದ 681 ರೋಗಿಗಳು ಸಾವಿಗೀಡಾಗಿದ್ದಾರೆ. ಈ ಅವಧಿಯಲ್ಲಿ ಸೋಂಕಿನೊಂದಿಗೆ ಇತರ ಕಾಯಿಲೆಗಳಿಂದ 11,977 ಮಂದಿ ಸಾವನ್ನಪ್ಪಿದ್ದಾರೆ ಎಂದು ಚೀನಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ) ಶನಿವಾರ ಹೇಳಿಕೆಯಲ್ಲಿ ತಿಳಿಸಿದೆ.
ಅದೇ ವೇಳೆ ಮನೆಯಲ್ಲೇ ವೈರಸ್‌ನಿಂದ ಸಾವಿಗೀಡಾದವರ ಸಂಖ್ಯೆಯನ್ನು ಈ ಅಂಕಿಅಂಶಗಳು ಒಳಗೊಂಡಿಲ್ಲ. ಸ್ವತಂತ್ರ ಮುನ್ಸೂಚನಾ ಸಂಸ್ಥೆಯಾದ ಏರ್‌ಫಿನಿಟಿ, ಚಂದ್ರನ ಹೊಸ ವರ್ಷದ ರಜಾದಿನಗಳಲ್ಲಿ ಚೀನಾದಲ್ಲಿ ದೈನಂದಿನ ಕೋವಿಡ್ ಸಾವುಗಳು ಸುಮಾರು 36,000 ಕ್ಕೆ ಏರುತ್ತದೆ ಎಂದು ಅಂದಾಜಿಸಿದೆ.
ಡಿಸೆಂಬರ್‌ನಲ್ಲಿ ಚೀನಾ ಶೂನ್ಯ-ಕೋವಿಡ್ ನೀತಿಯನ್ನು ಕೈಬಿಟ್ಟ ನಂತರ 600,000 ಕ್ಕೂ ಹೆಚ್ಚು ಜನರು ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ ಎಂದು ಸಂಸ್ಥೆ ಅಂದಾಜಿಸಿದೆ.
ಭಾನುವಾರದಂದು ಲೂನಾರ್ ಕ್ಯಾಲೆಂಡರ್ ನ ಅತಿದೊಡ್ಡ ರಜಾದಿನವನ್ನು ಗುರುತಿಸಲು ಕುಟುಂಬಗಳೊಂದಿಗೆ ಬಹುನಿರೀಕ್ಷಿತ ಪುನರ್ಮಿಲನಕ್ಕಾಗಿ ಇತ್ತೀಚಿನ ದಿನಗಳಲ್ಲಿ ಹತ್ತಾರು ಮಿಲಿಯನ್ ಜನರು ದೇಶದಾದ್ಯಂತ ಪ್ರಯಾಣಿಸಿದ್ದಾರೆ, ಇದು ಕೋವಿಡ್ ಉಲ್ಬಣದ ಭಯವನ್ನು ಹೆಚ್ಚಿಸಿದೆ.
ಆದರೆ ಇದೇ ಹೊತ್ತಲ್ಲಿ ಲಕ್ಷಾಂತರ ಜನರು ಹಳ್ಳಿಗಳಿಗೆ ಹಿಂದಿರುಗಿದ ನಂತರ ಮುಂದಿನ ಎರಡು ಮೂರು ತಿಂಗಳಲ್ಲಿ ಚೀನಾ ಎರಡನೇ ತರಂಗ ಕೋವಿಡ್ ಸೋಂಕನ್ನು ಅನುಭವಿಸುವುದಿಲ್ಲ ಎಂದು ಉನ್ನತ ಆರೋಗ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಏಕೆಂದರೆ ಸುಮಾರು 80 ಪ್ರತಿಶತದಷ್ಟು ಜನಸಂಖ್ಯೆಯು ಈಗಾಗಲೇ ವೈರಸ್‌ನಿಂದ ಸೋಂಕಿಗೆ ಒಳಗಾಗಿದೆ.
“ವಸಂತೋತ್ಸವದ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಪ್ರಯಾಣಿಸುವಾಗ ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸಬಹುದು.ಪ್ರಸ್ತುತ ಸಾಂಕ್ರಾಮಿಕ ರೋಗವು ಈಗಾಗಲೇ ದೇಶದ ಸುಮಾರು 80 ಪ್ರತಿಶತದಷ್ಟು ಜನರಿಗೆ ಸೋಂಕು ತಗುಲಿಸಿದೆ ಎಂದು ಚೀನಾ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್‌ನ ಮುಖ್ಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ವು ಜುನ್ಯೂ, ಶನಿವಾರ ವೈಬೋ ಪ್ಲಾಟ್‌ಫಾರ್ಮ್‌ನ ಪೋಸ್ಟ್‌ನಲ್ಲಿ ಹೇಳಿದ್ದಾರೆ.
“ಅಲ್ಪಾವಧಿಯಲ್ಲಿ, ಉದಾಹರಣೆಗೆ, ಮುಂದಿನ ಎರಡು ಮೂರು ತಿಂಗಳುಗಳಲ್ಲಿ, ದೇಶದಾದ್ಯಂತ ಸಾಂಕ್ರಾಮಿಕ ರೋಗದ ಎರಡನೇ ಅಲೆ ತುಂಬಾ ಚಿಕ್ಕದಾಗಿದೆ.” ಚೀನಾದ ಸಾರಿಗೆ ಅಧಿಕಾರಿಗಳು ಈ ತಿಂಗಳು ಫೆಬ್ರವರಿಯಲ್ಲಿ ವಿಶ್ವದ ಅತಿದೊಡ್ಡ ಜನಸಮೂಹಗಳಲ್ಲಿ ಒಂದಾದ ಎರಡು ಬಿಲಿಯನ್ ಪ್ರವಾಸಗಳನ್ನು ಮಾಡಲಾಗುವುದು ಎಂದು ಭವಿಷ್ಯ ನುಡಿದಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ