California Shooting: 10 ಮಂದಿಯನ್ನು ಸಾವಿನ ದವಡೆಗೆ ನೂಕಿದ ಆರೋಪಿಯೂ ದಾಳಿ ವೇಳೆ ಸಾವು

TV9kannada Web Team

TV9kannada Web Team | Edited By: Nayana Rajeev

Updated on: Jan 23, 2023 | 7:21 AM

ಕ್ಯಾಲಿಫೋರ್ನಿಯಾ ಡ್ಯಾನ್ಸ್ ಕ್ಲಬ್​ನಲ್ಲಿ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಶಂಕಿತ ಆರೋಪಿಗಳ ಫೋಟೊವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಆರೋಪಿಯು ದಾಳಿ ವೇಳೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

California Shooting: 10 ಮಂದಿಯನ್ನು ಸಾವಿನ ದವಡೆಗೆ ನೂಕಿದ ಆರೋಪಿಯೂ ದಾಳಿ ವೇಳೆ ಸಾವು
ಕ್ಯಾಲಿಫೋರ್ನಿಯಾ ಗುಂಡಿನ ದಾಳಿ

ಕ್ಯಾಲಿಫೋರ್ನಿಯಾ ಡ್ಯಾನ್ಸ್ ಕ್ಲಬ್​ನಲ್ಲಿ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಶಂಕಿತ ಆರೋಪಿಗಳ ಫೋಟೊವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಆರೋಪಿಯು ದಾಳಿ ವೇಳೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ನಗರದಲ್ಲಿ ಚೀನೀಸ್ ಲೂನಾರ್ ನ್ಯೂ ಇಯರ್ ಆಚರಣೆ ನಡೆಯುತ್ತಿರುವ ವೇಳೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ 10 ಮಂದಿ ಮೃತಪಟ್ಟಿದ್ದರು. ಚೀನಾದ ಲೂನಾರ್ ನ್ಯೂ ಇಯರ್ ಆಚರಣೆಯಲ್ಲಿ 60 ಸಾವಿರಕ್ಕೂ ಹೆಚ್ಚು ಮಂದಿ ಸೇರಿದ್ದರು. ಸದ್ಯಕ್ಕೆ ತಿಳಿದುಬಂದಿರುವ ಮಾಹಿತಿ ಪ್ರಕಾರ, ಸಾವು, ನೋವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಲಾಸ್ ಏಂಜಲೀಸ್ ಟೈಮ್ಸ್ ವರದಿ ಮಾಡಿದೆ.

ಗುಂಡಿನ ದಾಳಿ ನಡೆಯುವ ವೇಳೆ ರಸ್ತೆಯುದ್ದಕ್ಕೂ ಸೆಯುಂಗ್ ವೊನ್ ಚೋಯ್ ಒಡೆತನದ ಸೀಫುಡ್ ಬಾರ್ಬೆಕ್ಯೂ ರೆಸ್ಟೋರೆಂಟ್ ಹರಡಿಕೊಂಡಿತ್ತು. ಮೂವರು ಈ ರೆಸ್ಟೋರೆಂಟ್​ಗೆ ನುಗ್ಗಿ ಡೋರ್ ಲಾಕ್ ಮಾಡುವಂತೆ ಒತ್ತಾಯಿಸಿದ್ದಾರೆ. ಅವರ ಪ್ರಕಾರ, ಶೂಟರ್ ಕೈಯಲ್ಲಿ ಮಷಿನ್ ಗನ್ ಇತ್ತು. ಬಹಳಷ್ಟು ಗುಂಡುಗಳು ಕೂಡ ಅದರಲ್ಲಿತ್ತು.

ಮತ್ತಷ್ಟು ಓದಿ: Los Angeles Shooting: ಅಮೆರಿಕದಲ್ಲಿ ಚೀನಿ ಹೊಸ ವರ್ಷಾಚರಣೆ ವೇಳೆ ಗುಂಡಿನ ದಾಳಿ; 10 ಮಂದಿ ಸಾವು

ಈ ರೆಸ್ಟೋರೆಂಟ್​ನ ಡ್ಯಾನ್ಸ್ ಕ್ಲಬ್​ನಲ್ಲಿ ಗುಂಡಿನ ಸದ್ದು ಕೇಳಿಬಂದಿತ್ತು. ಇತ್ತೀಚಿನ ದಿನಗಳಲ್ಲಿ ಅಮೆರಿಕದಲ್ಲಿ ಗುಂಡಿನ ದಾಳಿ ಪ್ರಕರಣಗಳು ಹೆಚ್ಚಾಗುತ್ತಿವೆ. ಚಿತ್ರಮಂದಿರ, ಶಾಲೆ ಹಾಗೂ ಇತರೆ ಸಾರ್ವಜನಿಕ ಪ್ರದೇಶಗಳಲ್ಲಿ ಅಪರಿಚಿತರ ಗುಂಡಿನ ದಾಳಿಗೆ ಹಲವು ಮುಗ್ಧ ಜೀವಗಳು ಬಲಿಯಾಗುತ್ತಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada