ಚೀನಾದಲ್ಲಿ 9 ದಿನಗಳಿಂದ ಕೊರೊನಾ ಕೇಸ್ ಇಲ್ಲ.. ಆದರೆ?

| Updated By: ಸಾಧು ಶ್ರೀನಾಥ್​

Updated on: Jul 15, 2020 | 3:21 PM

ದೆಹಲಿ: ತನ್ನೊಳಗೆ ಹುಟ್ಟಿದ ಕೊರೊನಾ ವೈರಸ್​ನಿಂದ ಬಳಲಿ ಬೆಂಡಾಗಿ ಹೋಗಿದ್ದ ನೆರೆಯ ಚೀನಾಕ್ಕೆ ಇದೀಗ ಕೊಂಚ ನಿಟ್ಟುಸಿರು ಬಿಡಲು ಅವಕಾಶ ಸಿಕ್ಕಿದೆ. ದೇಶದಲ್ಲಿ ಕಳೆದ 9 ದಿನಗಳಿಂದ ಯಾವುದೇ ಹೊಸ ಕೇಸ್ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ದೇಶದಲ್ಲಿ ಸ್ಥಳೀಯವಾಗಿ ಈವರೆಗೆ ಹೊಸ ಸೋಂಕಿನ ಪ್ರಕರಣ ಪತ್ತೆಯಾಗಿಲ್ಲ. ಕೇವಲ ವಿದೇಶದಿಂದ ಬಂದವರಲ್ಲಿ ಮಾತ್ರ ಸೋಂಕು ಪತ್ತೆಯಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಇದುವರೆಗೆ ಚೀನಾದಲ್ಲಿ ಒಟ್ಟು 83,611 ಕೊರೊನಾ ಕೇಸ್​ಗಳು ಪತ್ತೆಯಾಗಿವೆ. ಮಹಾಮಾರಿಯಿಂದ ಇಷ್ಟು ದಿನ ನಲುಗಿ ಹೋಗಿದ್ದ […]

ಚೀನಾದಲ್ಲಿ 9 ದಿನಗಳಿಂದ ಕೊರೊನಾ ಕೇಸ್ ಇಲ್ಲ.. ಆದರೆ?
Follow us on

ದೆಹಲಿ: ತನ್ನೊಳಗೆ ಹುಟ್ಟಿದ ಕೊರೊನಾ ವೈರಸ್​ನಿಂದ ಬಳಲಿ ಬೆಂಡಾಗಿ ಹೋಗಿದ್ದ ನೆರೆಯ ಚೀನಾಕ್ಕೆ ಇದೀಗ ಕೊಂಚ ನಿಟ್ಟುಸಿರು ಬಿಡಲು ಅವಕಾಶ ಸಿಕ್ಕಿದೆ. ದೇಶದಲ್ಲಿ ಕಳೆದ 9 ದಿನಗಳಿಂದ ಯಾವುದೇ ಹೊಸ ಕೇಸ್ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

ದೇಶದಲ್ಲಿ ಸ್ಥಳೀಯವಾಗಿ ಈವರೆಗೆ ಹೊಸ ಸೋಂಕಿನ ಪ್ರಕರಣ ಪತ್ತೆಯಾಗಿಲ್ಲ. ಕೇವಲ ವಿದೇಶದಿಂದ ಬಂದವರಲ್ಲಿ ಮಾತ್ರ ಸೋಂಕು ಪತ್ತೆಯಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಇದುವರೆಗೆ ಚೀನಾದಲ್ಲಿ ಒಟ್ಟು 83,611 ಕೊರೊನಾ ಕೇಸ್​ಗಳು ಪತ್ತೆಯಾಗಿವೆ.

ಮಹಾಮಾರಿಯಿಂದ ಇಷ್ಟು ದಿನ ನಲುಗಿ ಹೋಗಿದ್ದ ಚೀನಾದಲ್ಲಿ ಇದೀಗ ಸ್ಥಳೀಯ ಪ್ರವಾಸೋದ್ಯಮ ಪುನಃ ಆರಂಭವಾಗಿದೆ. ಆದರೆ, ಚೀನಾದ ಹಾಂಗ್​ಕಾಂಗ್ ನಗರದಲ್ಲಿ ಸೋಂಕಿನ ಕೇಸ್​ಗಳು ಹೆಚ್ಚಳವಾಗಿರೋ ಹಿನ್ನೆಲೆಯಲ್ಲಿ ಅಲ್ಲಿನ ಆಡಳಿತ ಕಟ್ಟುನಿಟ್ಟಿನ ಕ್ರಮಗಳನ್ನ ಜರುಗಿಸಿದೆ.  ಹೋಟೆಲ್​, ರೆಸ್ಟೋರೆಂಟ್ ಮತ್ತು ಥೀಮ್​ ಪಾರ್ಕ್​ಗಳನ್ನ ಬಂದ್​ ಮಾಡಲು ನಿರ್ಧರಿಸಿದೆ. ಹಾಗಾಗಿ, ಕಳೆದ ಜೂನ್​ನಲ್ಲಿ ಓಪನ್​ ಆಗಿದ್ದ ಖ್ಯಾತ ಥೀಮ್​ ಪಾರ್ಕ್​ ಡಿಸ್ನಿಲ್ಯಾಂಡ್ ಇದೀಗ ಮತ್ತೆ ಬಂದ್ ಆಗಲಿದೆ.