ಕೊರೊನಾ ಕೇವಲ ‘ಗಾಳಿಮಾತು’ ಎಂದು ನಂಬಿ ಸೋಂಕಿತನ ಪಾರ್ಟಿಗೆ ಹೋದ, ಸತ್ತ!
ಕೊರೊನಾ ಮಹಾಮಾರಿಯ ಮೃತ್ಯುಕೂಪದಲ್ಲಿ ಸಿಲುಕಿ ವಿಶ್ವದ ದೊಡ್ಡಣ್ಣ ಅಮೆರಿಕ ಅಕ್ಷರಶಃ ನಲುಗಿಹೋಗಿದ್ದಾನೆ. ಜಗತ್ತಿನಲ್ಲೇ ಅತಿ ಹೆಚ್ಚು ಸೋಂಕಿತರ ಮತ್ತು ಸಾವಿನ ಸಂಖ್ಯೆ ಹೊಂದಿರುವ ಅಮೆರಿಕಾದಲ್ಲಿ ಹೆಮ್ಮಾರಿಯ ರುದ್ರತಾಂಡವ ಬಲು ಭೀಕರ. ಆದರೆ, ಕೊರೊನಾ ವೈರಸ್ ಅನ್ನೋದು ಬರೀ ಗಾಳಿಮಾತು. ಅದರಿಂದ ನಂಗೆ ಏನು ಆಗಲ್ಲ ಅಂತಾ ಭಾವಿಸಿ ಸೋಂಕಿತನೊಬ್ಬನ ಪಾರ್ಟಿಗೆ ಹೋದ ವ್ಯಕ್ತಿ ಕೊನೆಗೆ ವೈರಸ್ಗೇ ಬಲಿಯಾಗಿರೋ ನಿಜ ಸಂಗತಿ ಅಮೆರಿಕಾದ ಟೆಕ್ಸಾಸ್ನಲ್ಲಿ ಬೆಳಕಿಗೆ ಬಂದಿದೆ. ಹೌದು, ಕೇಳೋಕೆ ಆಶ್ಚರ್ಯ ಅನ್ನಿಸಿದ್ರೂ ಇದು ರಿಯಲ್ ಸ್ಟೋರಿ. ಟೆಕ್ಸಾಸ್ನ […]
ಕೊರೊನಾ ಮಹಾಮಾರಿಯ ಮೃತ್ಯುಕೂಪದಲ್ಲಿ ಸಿಲುಕಿ ವಿಶ್ವದ ದೊಡ್ಡಣ್ಣ ಅಮೆರಿಕ ಅಕ್ಷರಶಃ ನಲುಗಿಹೋಗಿದ್ದಾನೆ. ಜಗತ್ತಿನಲ್ಲೇ ಅತಿ ಹೆಚ್ಚು ಸೋಂಕಿತರ ಮತ್ತು ಸಾವಿನ ಸಂಖ್ಯೆ ಹೊಂದಿರುವ ಅಮೆರಿಕಾದಲ್ಲಿ ಹೆಮ್ಮಾರಿಯ ರುದ್ರತಾಂಡವ ಬಲು ಭೀಕರ. ಆದರೆ, ಕೊರೊನಾ ವೈರಸ್ ಅನ್ನೋದು ಬರೀ ಗಾಳಿಮಾತು. ಅದರಿಂದ ನಂಗೆ ಏನು ಆಗಲ್ಲ ಅಂತಾ ಭಾವಿಸಿ ಸೋಂಕಿತನೊಬ್ಬನ ಪಾರ್ಟಿಗೆ ಹೋದ ವ್ಯಕ್ತಿ ಕೊನೆಗೆ ವೈರಸ್ಗೇ ಬಲಿಯಾಗಿರೋ ನಿಜ ಸಂಗತಿ ಅಮೆರಿಕಾದ ಟೆಕ್ಸಾಸ್ನಲ್ಲಿ ಬೆಳಕಿಗೆ ಬಂದಿದೆ.
ಹೌದು, ಕೇಳೋಕೆ ಆಶ್ಚರ್ಯ ಅನ್ನಿಸಿದ್ರೂ ಇದು ರಿಯಲ್ ಸ್ಟೋರಿ. ಟೆಕ್ಸಾಸ್ನ ಸಾನ್ ಌಂಟೋನಿಯೋದಲ್ಲಿರುವ ಮೆಥಾಡಿಸ್ಟ್ ಆಸ್ಪತ್ರೆಗೆ ದಾಖಲಾದ ಮೃತ ಸೋಂಕಿತನೇ ಖುದ್ದು ಈ ವಿಷಯವನ್ನ ಅಲ್ಲಿನ ಸಿಬ್ಬಂದಿಗೆ ಹೇಳಿದ್ದಾನಂತೆ.
ಚಾಲೆಂಜ್ ಒಪ್ಪಿಕೊಂಡಿದ್ದೇ ಮುಳುವಾಯ್ತಾ? ಈ ಬಗ್ಗೆ ಮಾತನಾಡಿದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಜೇನ್ ಌಪಲ್ಬೀ ಸೋಂಕಿತ ತಾನು ಇನ್ನು ಚಿಕ್ಕ ವಯಸ್ಸಿನವ. ಕೇವಲ ಮೂವತ್ತರ ಹರೆಯ ನನಗೆ. ಹೀಗಾಗಿ ಈ ವೈರಸ್ ನಂಗೆ ಏನು ಮಾಡಲ್ಲ ಅಂತಾ ಹಾಯಾಗಿ ಇದ್ದನಂತೆ. ಈ ನಡುವೆ ಸೋಂಕಿಗೆ ತುತ್ತಾಗಿದ್ದ ತನ್ನ ಸ್ನೇಹಿತನೊಬ್ಬ ಈತನನ್ನ ನನ್ನ ಪಾರ್ಟಿಗೆ ಬಾ ಅಂತಾ ಕರೆದನಂತೆ. ನಂಗೆ ಸೋಂಕು ತಗಲಿದೆ. ಹೀಗಾಗಿ, ನೀನು ನನ್ನ ಪಾರ್ಟಿಗೆ ಬಂದ್ರೇ ನಿಂಗೂ ಕೊರೊನಾ ಬರುತ್ತೆ. ಆಗ ನೀನು ಸೋಂಕಿನಿಂದ ಬಚಾವ್ ಆಗ್ತಿಯೋ ಇಲ್ವೋ ಅಂತಾ ನೋಡೋಣ ಎಂದು ಚಾಲೆಂಜ್ ಹಾಕಿದ್ದಾನಂತೆ. ಅದಕ್ಕೆ ಒಪ್ಪಿಕೊಂಡು ಈತ ಸ್ನೇಹಿತನ ಪಾರ್ಟಿಗೆ ಹೋಗೇ ಬಿಟ್ಟ.
‘ನಾನು ಆ ಪಾರ್ಟಿಗೆ ಹೋಗಿ ತಪ್ಪು ಮಾಡಿಬಿಟ್ಟೆ’ ಮುಂದೇನಾಗಿರುತ್ತೆ ಅಂತಾ ನಿಮಗೆ ವಿವರಿಸೋ ಅಗತ್ಯವಿಲ್ಲ. ಕೊನೆಗೂ ಸೋಂಕು ತಗಲಿಸಿಕೊಂಡವ ಆಸ್ಪತ್ರೆ ಪಾಲಾದ. ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ. ವಿಪರ್ಯಾಸವೆಂದರೆ ಸಾಯುವ ಹಂತ ತಲುಪಿದ್ದ ಈ ಬಲಿಷ್ಠ 30ರ ಹರೆಯದವನು ನಾನು ಆ ಪಾರ್ಟಿಗೆ ಹೋಗಿ ತಪ್ಪು ಮಾಡಿಬಿಟ್ಟೆ ಅಂತಾ ಆಸ್ಪತ್ರೆಯ ನರ್ಸ್ ಬಳಿ ಹೇಳಿಕೊಂಡನಂತೆ. ಆದರೆ, ಏನು ಪ್ರಯೋಜನ? ಕೊರೊನಾ ಎಂಬುದು ಗಾಳಿಮಾತಲ್ಲ. ಗಾಳಿಯಲ್ಲಿ ಹರಡುವ ಮಾರಕ ಮಹಾಮಾರಿ ಎಂದು ಈತ ಅರಿತುಕೊಳ್ಳಲೇ ಇಲ್ಲ.