Sign In

By signing in or creating an account, you agree with Associated Broadcasting Company's Terms & Conditions and Privacy Policy.

China Restaurant Explosion: ಚೀನಾದ ರೆಸ್ಟೋರೆಂಟ್​ನಲ್ಲಿ ಭಾರಿ ಸ್ಫೋಟ: 31 ಮಂದಿ ಸಾವು

ವಾಯುವ್ಯ ಚೀನಾದ ಯಿಂಚುವಾನ್‌ನಲ್ಲಿರುವ ರೆಸ್ಟೋರೆಂಟ್‌ನಲ್ಲಿ ಸ್ಫೋಟ ಸಂಭವಿಸಿ ಕನಿಷ್ಠ 31 ಜನರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

China Restaurant Explosion: ಚೀನಾದ ರೆಸ್ಟೋರೆಂಟ್​ನಲ್ಲಿ ಭಾರಿ ಸ್ಫೋಟ: 31 ಮಂದಿ ಸಾವು
ಚೀನಾ ಸ್ಫೋಟImage Credit source: Aaj Tak
Follow us
ನಯನಾ ರಾಜೀವ್
|

Updated on:Jun 22, 2023 | 9:02 AM

ವಾಯುವ್ಯ ಚೀನಾದ ಯಿಂಚುವಾನ್‌ನಲ್ಲಿರುವ ರೆಸ್ಟೋರೆಂಟ್‌ನಲ್ಲಿ ಸ್ಫೋಟ ಸಂಭವಿಸಿ ಕನಿಷ್ಠ 31 ಜನರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ರಾಜಧಾನಿಯ ಯಿಂಚುವಾನ್ ನಿಂಗ್ಕ್ಸಿಯಾ ಪ್ರದೇಶದ ಬಾರ್ಬೆಕ್ಯೂ ರೆಸ್ಟೋರೆಂಟ್‌ನಲ್ಲಿ ಈ ಘಟನೆ ನಡೆದಿದೆ. ಅನಿಲ ಸೋರಿಕೆಯಿಂದಾಗಿ ಸ್ಫೋಟಗೊಂಡಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಏಳು ಜನರು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ, ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಇತರ ಇಬ್ಬರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇಬ್ಬರಿಗೆ ಗಾಜಿನಿಂದ ಗೀರುಗಳು ಉಂಟಾಗಿವೆ ಎಂದು ಕ್ಸಿನ್ಹುವಾ ತಿಳಿಸಿದೆ.

ಮತ್ತಷ್ಟು ಓದಿ: Paris Explosion: ಪ್ಯಾರಿಸ್​ನ ಕಟ್ಟಡವೊಂದರಲ್ಲಿ ಸ್ಫೋಟ, 30ಕ್ಕೂ ಹೆಚ್ಚು ಮಂದಿಗೆ ಗಾಯ, 7 ಜನರ ಸ್ಥಿತಿ ಗಂಭೀರ

ರೆಸ್ಟೋರೆಂಟ್​ನ ಮುಂಭಾಗದಲ್ಲಿ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ 12ಕ್ಕೂ ಅಧಿಕ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದರು.

ಬುಧವಾರ ರಾತ್ರಿ 8.30ರ ಸುಮಾರಿಗೆ ಸ್ಪೋಟ ಸಂಭವಿಸಿದ್ದು,    ಗುರುವಾರ ಮುಂಜಾನೆ 4 ಗಂಟೆಯ ಹೊತ್ತಿಗೆ ರಕ್ಷಣಾ ಪ್ರಯತ್ನಗಳು ಪೂರ್ಣಗೊಂಡವು. ಇಲ್ಲಿಯವರೆಗೆ 31 ಮಂದಿ ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ. 2015 ರಲ್ಲಿ, ಉತ್ತರ ಬಂದರು ನಗರವಾದ ಟಿಯಾಂಜಿನ್‌ನಲ್ಲಿ ಸಂಭವಿಸಿದ ಸ್ಫೋಟದಲ್ಲಿ 173 ಜನರು ಸಾವನ್ನಪ್ಪಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:02 am, Thu, 22 June 23

ಬೆಂಗಳೂರು ಹೈವೇಯಲ್ಲಿ 3 ಬಾರಿ ಪಲ್ಟಿಯಾದ ನೀರಿನ ಟ್ಯಾಂಕರ್; ವಿಡಿಯೋ ವೈರಲ್
ಬೆಂಗಳೂರು ಹೈವೇಯಲ್ಲಿ 3 ಬಾರಿ ಪಲ್ಟಿಯಾದ ನೀರಿನ ಟ್ಯಾಂಕರ್; ವಿಡಿಯೋ ವೈರಲ್
ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ