ಬ್ರೆಜಿಲ್​ನ ಸೆರಾನಾ ನಗರದಲ್ಲಿ ಲಸಿಕೆ ಪಡೆದದ್ದು ಶೇ 75 ಮಂದಿ, ಶೇ 95ರಷ್ಟು ಇಳಿಕೆ ಆಯ್ತು ಕೊವಿಡ್ ಸಾವು ಪ್ರಕರಣ

|

Updated on: May 31, 2021 | 6:23 PM

Brazil: ವ್ಯಾಕ್ಸಿನೇಷನ್ ಪೂರ್ಣಗೊಳಿಸಲು ವಿಜ್ಞಾನಿಗಳು ಸೆರಾನಾವನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿದ್ದಾರೆ. ಎಲ್ಲಾ ಮೂರು ಪ್ರದೇಶಗಳಲ್ಲಿ ಲಸಿಕೆಯ ಎರಡನೇ ಡೋಸ್ ಜತೆಗೆ ಸೋಂಕು ಪ್ರಕರಣದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ರೋಗಲಕ್ಷಣಗಳ ರೋಗಿಗಳ ಸಂಖ್ಯೆ 80 ಪ್ರತಿಶತದಷ್ಟು ಕಡಿಮೆಯಾಗಿದೆ ಮತ್ತು ಆಸ್ಪತ್ರೆಗೆ ದಾಖಲಾಗುವ ಪ್ರಕರಣಗಳ ಸಂಖ್ಯೆಯನ್ನು ಶೇಕಡಾ 86 ರಷ್ಟು ಕಡಿಮೆ ಮಾಡಲಾಗಿದೆ

ಬ್ರೆಜಿಲ್​ನ ಸೆರಾನಾ ನಗರದಲ್ಲಿ ಲಸಿಕೆ ಪಡೆದದ್ದು ಶೇ 75 ಮಂದಿ, ಶೇ 95ರಷ್ಟು ಇಳಿಕೆ ಆಯ್ತು ಕೊವಿಡ್ ಸಾವು ಪ್ರಕರಣ
ಪ್ರಾತಿನಿಧಿಕ ಚಿತ್ರ
Follow us on

ಸಾವೊಪೌಲೊ (ಬ್ರೆಜಿಲ್): ವಯಸ್ಕರಿಗೆ ವ್ಯಾಕ್ಸಿನೇಷನ್ ಪೂರ್ಣಗೊಂಡ ನಂತರ, ಬ್ರೆಜಿಲ್ ದೇಶದ ಸೆರಾನಾದಲ್ಲಿ ಕೊವಿಡ್ ಸಾವುಗಳು 95% ರಷ್ಟು ಕಡಿಮೆಯಾಗಿದೆ. ಹೆಚ್ಚಿನ ವಯಸ್ಕರಿಗೆ ಲಸಿಕೆ ಹಾಕಿದ್ದರಿಂದ ಕೊವಿಡ್ ಸಾವು ಕಡಿಮೆ ಆಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕೊವಿಡ್ ರೋಗಿಗಳು ಮತ್ತು ಸಾವು ಪ್ರಕರಣಗಳಲ್ಲಿ ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ. ಕೊವಿಡ್ ಸೋಂಕಿನಿಂದ ಬ್ರೆಜಿಲ್‌ನಲ್ಲಿ 46.1 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಲಸಿಕೆ ಕೊರತೆಯಿಂದಾಗಿ ಇಲ್ಲಿ ವ್ಯಾಕ್ಸಿನೇಷನ್ ತುಂಬಾ ನಿಧಾನವಾಗಿತ್ತು.

ಸೆರಾನಾ ಬ್ರೆಜಿಲ್‌ನಲ್ಲಿ ಚೀನಾದ ಸಿನೋವಾಕ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೊರೊನಾವಾಕ್ ಲಸಿಕೆಯನ್ನು ಉತ್ಪಾದಿಸುವ ಇನ್‌ಸ್ಟಿಟ್ಯೂಟೊ ಬುಟಾಂಟನ್ (Instituto Butantan) ಅವರ ಅಧ್ಯಯನದ ವಿಷಯವಾಗಿತ್ತು .ವ್ಯಾಕ್ಸಿನೇಷನ್ ಪ್ರಾರಂಭವಾದಾಗ ನಗರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದವು. ಆದಾಗ್ಯೂ, ಸುಮಾರು 75 ಪ್ರತಿಶತ ಜನರು ಲಸಿಕೆ ಪಡೆದ ನಂತರ ಇದು ಕುಸಿದಿದೆ.

ವ್ಯಾಕ್ಸಿನೇಷನ್ ಪೂರ್ಣಗೊಳಿಸಲು ವಿಜ್ಞಾನಿಗಳು ಸೆರಾನಾವನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿದ್ದಾರೆ. ಎಲ್ಲಾ ಮೂರು ಪ್ರದೇಶಗಳಲ್ಲಿ ಲಸಿಕೆಯ ಎರಡನೇ ಡೋಸ್ ಜತೆಗೆ ಸೋಂಕು ಪ್ರಕರಣದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ರೋಗಲಕ್ಷಣಗಳ ರೋಗಿಗಳ ಸಂಖ್ಯೆ 80 ಪ್ರತಿಶತದಷ್ಟು ಕಡಿಮೆಯಾಗಿದೆ ಮತ್ತು ಆಸ್ಪತ್ರೆಗೆ ದಾಖಲಾಗುವ ಪ್ರಕರಣಗಳ ಸಂಖ್ಯೆಯನ್ನು ಶೇಕಡಾ 86 ರಷ್ಟು ಕಡಿಮೆ ಮಾಡಲಾಗಿದೆ. ಕೊವಿಡ್ ಸಾವುಗಳು ಶೇಕಡಾ 95 ರಷ್ಟು ಕಡಿಮೆಯಾಗಿದೆ ಎಂದು ಬುಟಾಂಟನ್ ಅಂಕಿ ಅಂಶಗಳ ಆಧಾರದ ಮೇಲೆ ಟಿವಿ ಗ್ಲೋಬೊ ವರದಿ ಮಾಡಿದೆ.

ಬ್ರೆಜಿಲ್​ನ ಲ್ಲಿ ಭಾನುವಾರ 43,520 ಹೊಸ ಕೊವಿಡ್ ಪ್ರಕರಣ ದಾಖಲಾಗಿದ್ದು, ಒಟ್ಟು 16.5 ದಶಲಕ್ಷ ಪ್ರಕರಣಗಳನ್ನು ತಲುಪಿದೆ. ವಿಶ್ವದಲ್ಲಿ ಕೊವಿಡ್ ಸಾವುಗಳನ್ನು ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್ ನಲ್ಲಿ 874 ಹೊಸ ಸಾವು ಪ್ರಕರಣ ದಾಖಲಿಸಿದ್ದು, ಒಟ್ಟು ಸಾವಿನ ಸಂಖ್ಯೆ 4.61,931 ಕ್ಕೆ ಏರಿದೆ.

ಅಧ್ಯಕ್ಷ ಜೈರ್ ಬೋಲ್ಸನಾರೊ ವಿರುದ್ಧ ಪ್ರತಿಭಟನೆ
ಅಧ್ಯಕ್ಷ ಜೈರ್ ಬೋಲ್ಸನಾರೊ ಅವರ ಸರ್ಕಾರದ ಕೋವಿಡ್ -19 ಬಿಕ್ಕಟ್ಟಿನ ನಿರ್ವಹಣೆ ಕುರಿತು ಬ್ರೆಜಿಲ್ ದೇಶದಾದ್ಯಂತ ಪ್ರತಿಭಟನೆಗಳು ನಡೆದಿವೆ. ರಾಜಧಾನಿ ಬ್ರೆಸಿಲಿಯಾದಲ್ಲಿ, ಸಾವಿರಾರು ಜನರು ಕಾಂಗ್ರೆಸ್ ಮುಂದೆ ಜಮಾಯಿಸಿ ಅಧ್ಯಕ್ಷರ ದೋಷಾರೋಪಕ್ಕೆ ಕರೆ ನೀಡಿದರು ಮತ್ತು ಹೆಚ್ಚಿನ ಲಸಿಕೆಗಳನ್ನು ಕೋರಿದರು. ರಿಯೊ ಡಿ ಜನೈರೊ ಸೇರಿದಂತೆ ಇತರ ಪ್ರಮುಖ ನಗರಗಳಲ್ಲಿ ಪ್ರದರ್ಶನಗಳು ನಡೆದವು.

ಸಾಂಕ್ರಾಮಿಕ ರೋಗಕ್ಕೆ ಅವರ ಪ್ರತಿಕ್ರಿಯೆಯ ಮೇಲೆ ಬೋಲ್ಸೊನಾರೊ ಅವರ ಜನಪ್ರಿಯತೆಯು ಕುಸಿಯಿತು.
ಬ್ರೆಜಿಲ್ ಸುಮಾರು 460,000 ಸಾವುಗಳನ್ನು ದಾಖಲಿಸಿದೆ. ಅಮೆರಿಕ ನಂತರ ವಿಶ್ವದ ಎರಡನೇ ಅತಿ ಹೆಚ್ಚು ಸಾವು ಪ್ರಕರಣ ವರದಿ ಆಗಿದ್ದು ಇಲ್ಲೇ. ಕೊರೊನಾವೈರಸ್ ಪ್ರಕರಣಗಳಲ್ಲಿ ಮೂರನೇ ಸ್ಥಾನದಲ್ಲಿದೆ ಬ್ರೆಜಿಲ್.

ಶನಿವಾರದ ಪ್ರತಿಭಟನೆಯು ಬೋಲ್ಸೊನಾರೊ ಅವರ ಮೇಲೆ ಮತ್ತಷ್ಟು ಒತ್ತಡವನ್ನು ಬೀರಿತು. ಸಾಂಕ್ರಾಮಿಕ ರೋಗವನ್ನು ನಿಭಾಯಿಸಿದ ರೀತಿ ಮತ್ತು ಲಸಿಕೆ ಕಾರ್ಯಕ್ರಮದ ನಿಧಾನಗತಿಯ ಬಗ್ಗೆ ಬ್ರೆಜಿಲ್ ನ ಸೆನೆಟ್ ತನಿಖೆ ನಡೆಸಲಿದೆ.

ವಿರೋಧ ಪಕ್ಷಗಳು, ಕಾರ್ಮಿಕ ಸಂಘಗಳು ಮತ್ತು ಸಾಮಾಜಿಕ ಚಳುವಳಿಗಳು ಬೋಲ್ಸನಾರೊ ಅವರು ಕಾರ್ಯಕ್ರಮವನ್ನು ಸ್ಥಗಿತಗೊಳಿಸಿದ್ದಾರೆ ಮತ್ತು ಅದರ ಪರಿಣಾಮಗಳನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿವೆ.

ಇದನ್ನೂ ಓದಿ: Coronavirus: ವಿಶ್ವದಲ್ಲಿ ಅತೀ ಹೆಚ್ಚು ಕೊವಿಡ್ ರೋಗಿಗಳಿರುವ ದೇಶಗಳ ಪಟ್ಟಿಯಲ್ಲಿ ಬ್ರೆಜಿಲ್ ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ ಭಾರತ

Published On - 6:20 pm, Mon, 31 May 21