ಕನ್ನಡಿಗ- ಅಮೆರಿಕದ ಸರ್ಜನ್ ಜನರಲ್ ಡಾ. ವಿವೇಕ್ ಮೂರ್ತಿ‌ ಅವರಿಂದ ಹುಟ್ಟೂರು ಮಂಡ್ಯಕ್ಕೆ ಭರಪೂರ ವೈದ್ಯಕೀಯ ನೆರವು

ಕನ್ನಡಿಗ- ಅಮೆರಿಕದ ಸರ್ಜನ್ ಜನರಲ್ ಡಾ. ವಿವೇಕ್ ಮೂರ್ತಿ‌ ಅವರಿಂದ ಹುಟ್ಟೂರು ಮಂಡ್ಯಕ್ಕೆ ಭರಪೂರ ವೈದ್ಯಕೀಯ ನೆರವು
ವೈದ್ಯ ವಿವೇಕ್​ ಮೂರ್ತಿ

ಮಂಡ್ಯದ ಹಲ್ಲೇಗೆರೆ ಮೂಲದವರಾದ ಡಾ.ವಿವೇಕ್ ಮೂರ್ತಿ‌ ಅಮೆರಿಕಾದ ಸರ್ಜನ್ ಜನರಲ್ ಆಗಿದ್ದಾರೆ. ಇನ್ನು ಸ್ಕೋಪ್ ಫೌಂಡೇಷನ್ ವತಿಯಿಂದ 70 ಆಕ್ಸಿಜನ್ ಕಾನ್ಸಂಟ್ರೇಟರ್ಗಳು, 4 ವೆಂಟಿಲೇಟರ್, ಎನ್ 95 ಮಾಸ್ಕ್ಗಳು, ರೆಸ್ಪರೇಟರ್ ಮಾಸ್ಕ್ಗಳು ಸೇರಿದಂತೆ 1.40 ಕೋಟಿ ಮೌಲ್ಯದ ವೈದ್ಯಕೀಯ ಸಾಮಾಗ್ರಿಗಳು ಶೀಘ್ರದಲ್ಲೇ ಬರಲಿದೆ ಎಂದು ವಿವೇಕ್ ಮೂರ್ತಿ ತಂದೆ ಲಕ್ಷ್ಮೀನರಸಿಂಹ ಮೂರ್ತಿ ತಿಳಿಸಿದ್ದಾರೆ.

Ayesha Banu

|

Jun 01, 2021 | 11:10 AM

ಮಂಡ್ಯ:ಕೊರೊನಾದ ಕಷ್ಟ ಕಾಲದಲ್ಲಿ ಡಾ. ವಿವೇಕ್ ಮೂರ್ತಿ‌ ಅವರು ತಮ್ಮ ತವರಿಗೆ ಭಾರೀ ನೆರವು ನೀಡಿದ್ದಾರೆ. ಅಮೆರಿಕದ ಸರ್ಜನ್ ಜನರಲ್ ಆಗಿರುವ ಕನ್ನಡಿಗ ಡಾ.ವಿವೇಕ್ ಮೂರ್ತಿ‌ ಕರ್ನಾಟಕ ರಾಜ್ಯದ ಆಸ್ಪತ್ರೆಗಳಿಗೆ 1.40 ಕೋಟಿ ಮೌಲ್ಯದ ವೈದ್ಯಕೀಯ ಉಪಕರಣಗಳ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ. ಕೊರೊನಾ ಚಿಕಿತ್ಸೆ ನೀಡಲು ಬೇಕಾಗುವ ವೈದ್ಯಕೀಯ ಸಾಮಾಗ್ರಿಗಳನ್ನು ಮಂಡ್ಯ ಮತ್ತು ಮಡಿಕೇರಿ ಆಸ್ಪತ್ರೆಗಳಿಗೆ ನೀಡಿದ್ದಾರೆ.

ಮಂಡ್ಯದ ಹಲ್ಲೇಗೆರೆ ಮೂಲದವರಾದ ಡಾ.ವಿವೇಕ್ ಮೂರ್ತಿ‌ ಅಮೆರಿಕಾದ ಸರ್ಜನ್ ಜನರಲ್ ಆಗಿದ್ದಾರೆ. ಇನ್ನು ಸ್ಕೋಪ್ ಫೌಂಡೇಷನ್ ವತಿಯಿಂದ 70 ಆಕ್ಸಿಜನ್ ಕಾನ್ಸಂಟ್ರೇಟರ್ಗಳು, 4 ವೆಂಟಿಲೇಟರ್, ಎನ್ 95 ಮಾಸ್ಕ್ಗಳು, ರೆಸ್ಪರೇಟರ್ ಮಾಸ್ಕ್ಗಳು ಸೇರಿದಂತೆ 1.40 ಕೋಟಿ ಮೌಲ್ಯದ ವೈದ್ಯಕೀಯ ಸಾಮಾಗ್ರಿಗಳು ಶೀಘ್ರದಲ್ಲೇ ಬರಲಿದೆ ಎಂದು ವಿವೇಕ್ ಮೂರ್ತಿ ತಂದೆ ಲಕ್ಷ್ಮೀನರಸಿಂಹ ಮೂರ್ತಿ ತಿಳಿಸಿದ್ದಾರೆ.

ಡಾ.ವಿವೇಕ್ ಮೂರ್ತಿ‌ ಕುಟುಂಬ ಕಳಿಸುತ್ತಿರುವ ಸಾಮಾಗ್ರಿಗಳು -ಅಡಾಪ್ಟರ್ ಹೊಂದಿರುವ 70 ಆಕ್ಸಿಜನ್ ಕಾನ್ಸಂಟ್ರೇಟರ್ಸ್ -25 ಡಿಜಿಟಲ್ ಥರ್ಮಾಮೀಟರ್, -1.96,000 N-95 ಮಾಸ್ಕ್. -5000 ಫೇಸ್‌ಶೀಲ್ಡ್, 5000 ಫೋರ್ ಹೆಡ್ ಫೋಮ್, 300 ಸರ್ಜಿಕಲ್ ಇಯರ್ ಲೋಬ್ ಮಾಸ್ಕ್ಗಳು, 1200 ವೈದ್ಯಕೀಯ ಫೇಸ್ ಮಾಸ್ಕ್, 400 ಗ್ಲೌಸ್, 50 ಆಕ್ಸಿಜನ್ ಕ್ಯಾನುಲಾ, 5 ವೋಲ್ಟೇಜ್ ಟ್ರಾನ್ಸ್‌ಫಾರ್ಮರ್ಸ್‌.. ಈ ಎಲ್ಲಾ ಸಾಮಾಗ್ರಿಗಳು ಈಗಾಗಲೇ ಬೆಂಗಳೂರಿಗೆ ತಲುಪಿದ್ದು ಆದಷ್ಟು ಬೇಗ ಇವುಗಳನ್ನು ಮಂಡ್ಯ ಮತ್ತು ಮಡಿಕೇರಿ ಆಸ್ಪತ್ರೆಗಳಿಗೆ ಹಸ್ತಾಂತರಿಸಲಾಗುತ್ತೆ. ಇವುಗಳನ್ನು ಇಂದು ಸಂಜೆ ಮಂಡ್ಯ ಜಿಲ್ಲಾಸ್ಪತ್ರೆಗೆ ವಿವೇಕ್ ಮೂರ್ತಿ ಕುಟುಂಬಸ್ಥರು ಹಸ್ತಾಂತರಿಸಲಿದ್ದಾರೆ.

ಇದನ್ನೂ ಓದಿ: ಡಾ. ವಿವೇಕ್ ಮೂರ್ತಿ ಮತ್ತೆ ಮುನ್ನೆಲೆಗೆ; US ಕೊವಿಡ್ ನಿಯಂತ್ರಣ ಕಾರ್ಯಪಡೆಗೆ ನಿಯೋಜನೆ!

Follow us on

Related Stories

Most Read Stories

Click on your DTH Provider to Add TV9 Kannada