ಬೆಂಗಳೂರಿನಲ್ಲಿ ಸರಿಯಾಗಿ ಮಾಸ್ಕ್ ಧರಿಸದ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಮತ್ತೊಬ್ಬ ಮಹಿಳೆ
ಮಾಸ್ಕ್ ಹಾಕಿಕೊಳ್ಳದ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಇನ್ನೊಂದು ಮಹಿಳೆ ನಾಯಿಯೊಂದಿಗೆ ವಾಕಿಂಗ್ ಬಂದಿದ್ದರು. ದೊಣ್ಣೆಯಿಂದ ಹೊಡೆದಿದ್ದರಿಂದ ಸಿಟ್ಟಿಗೆದ್ದ ಮಹಿಳೆ ಸ್ಥಳೀಯ ಠಾಣೆಗೆ ದೂರನ್ನು ನೀಡಿದರು. ಸದ್ಯ ನಾಯಿ ಸಮೇತ ಹಲ್ಲೆ ಮಾಡಿದ ಮಹಿಳೆಯನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಬೆಂಗಳೂರು: ಸದಾಶಿನಗರದಲ್ಲಿ ಮಾಸ್ಕ್ನ ಸರಿಯಾಗಿ ಧರಿಸದ ಮಹಿಳೆಯೊಬ್ಬರ ಮೇಲೆ ಮತ್ತೊಬ್ಬ ಮಹಿಳೆ ಹಲ್ಲೆ ನಡೆಸಿದ್ದಾರೆ. ಸರಿಯಾಗಿ ಮಾಸ್ಕ್ ಹಾಕದೆ ಮಹಿಳೆಯೊಬ್ಬರು ವಾಕಿಂಗ್ ಮಾಡುತ್ತಿದ್ದರು. ಇದೇ ವೇಳೆ ಮತ್ತೊಬ್ಬ ಮಹಿಳೆ ವಾಕಿಂಗ್ಗೆ ಬಂದಿದ್ದರು. ಸರಿಯಾಗಿ ಮಾಸ್ಕ್ ಹಾಕಿಲ್ಲವೆಂದು ದೊಣ್ಣೆಯಿಂದ ಮಹಿಳೆ ಹೊಡೆದಿದ್ದಾರೆ. ಮಾಸ್ಕ್ ಸರಿಯಾಗಿ ಹಾಕದಿದ್ದರೆ ಕೇಳಲು ಪೊಲೀಸರಿದ್ದಾರೆ. ನನ್ನನ್ನು ಹೊಡೆಯುವುದಕ್ಕೆ ನೀವು ಯಾರು ಎಂದು ಹಲ್ಲೆಗೊಳಗಾದ ಮಹಿಳೆ ಆಕ್ರೋಶ ಹೊರಹಾಕಿದ್ದಾರೆ.
ಮಾಸ್ಕ್ ಹಾಕಿಕೊಳ್ಳದ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಇನ್ನೊಂದು ಮಹಿಳೆ ನಾಯಿಯೊಂದಿಗೆ ವಾಕಿಂಗ್ ಬಂದಿದ್ದರು. ದೊಣ್ಣೆಯಿಂದ ಹೊಡೆದಿದ್ದರಿಂದ ಸಿಟ್ಟಿಗೆದ್ದ ಮಹಿಳೆ ಸ್ಥಳೀಯ ಠಾಣೆಗೆ ದೂರನ್ನು ನೀಡಿದರು. ಸದ್ಯ ನಾಯಿ ಸಮೇತ ಹಲ್ಲೆ ಮಾಡಿದ ಮಹಿಳೆಯನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ರೈಲ್ವೆ ನಿಲ್ದಾಣದಲ್ಲಿ ಜನಜಾತ್ರೆ ಬೆಂಗಳೂರಿನ ಕೆಎಸ್ಆರ್ ರೈಲ್ವೆ ನಿಲ್ದಾಣದಲ್ಲಿ ಜನಜಾತ್ರೆ ಕಂಡುಬಂದಿದೆ. ಜನರು ರೈಲುಗಳ ಮೂಲಕ ತಮ್ಮ ಊರಿಗೆ ತೆರಳುತ್ತಿದ್ದಾರೆ. ಕೊರೊನಾ ಸೋಂಕು ಇದ್ದರೂ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಪ್ರಯಾಣಿಕರು ಸಾಮಾಜಿಕ ಅಂತರ ಮರೆತು ನಿರ್ಲಕ್ಷ್ಯ ತೋರುತ್ತಿದ್ದಾರೆ.
ಇದನ್ನೂ ಓದಿ
ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ ರೂಪದರ್ಶಿ; ಬಾಲಿವುಡ್ ಪ್ರಮುಖ ನಟ ಸೇರಿ 9 ಮಂದಿ ವಿರುದ್ಧ ಎಫ್ಐಆರ್
(assault on woman who was not wearing a mask properly in Bengaluru)
Published On - 11:17 am, Tue, 1 June 21