ಅಮೆರಿಕ: ಖಲಿಸ್ತಾನಿ ಬೆಂಬಲಿಗರ ಎರಡು ಗುಂಪುಗಳ ನಡುವೆ ಘರ್ಷಣೆ

|

Updated on: Feb 05, 2024 | 2:55 PM

ಅಮೆರಿಕದಲ್ಲಿ ಎರಡು ಖಲಿಸ್ತಾನಿ ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಸಿಖ್ ಫಾರ್ ಜಸ್ಟಿಸ್ (SFJ) ಮುಖ್ಯಸ್ಥ ಮತ್ತು ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು ಇತ್ತೀಚೆಗೆ ಅಮೆರಿಕದಲ್ಲಿ ಖಲಿಸ್ತಾನಿ ಚಳವಳಿಯನ್ನು ಉತ್ತೇಜಿಸಲು ಜನಾಭಿಪ್ರಾಯ ಸಂಗ್ರಹಿಸಿದ್ದರು. ಇದೇ ವೇಳೆ ಖಲಿಸ್ತಾನಿ ಬೆಂಬಲಿಗರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಅಮೆರಿಕ ಪೋಲೀಸರ ಪ್ರಕಾರ, ಈ ಜನಾಭಿಪ್ರಾಯ ಸಂಗ್ರಹವನ್ನು ಸ್ಯಾನ್ ಫ್ರಾನ್ಸಿಸ್ಕೋ ನಗರದಲ್ಲಿ ಮಾಡಲಾಯಿತು. ಪನ್ನು ಎಲ್ಲಾ ಭಯೋತ್ಪಾದಕ ಸಂಘಟನೆಗಳನ್ನು ಗುಂಪುಗೂಡಿಸಲು ಆಹ್ವಾನಿಸಿದ್ದ. ಆಗ ಹೊಡೆದಾಟ ನಡೆದಿದೆ.

ಅಮೆರಿಕ: ಖಲಿಸ್ತಾನಿ ಬೆಂಬಲಿಗರ ಎರಡು ಗುಂಪುಗಳ ನಡುವೆ ಘರ್ಷಣೆ
ಗುರುಪತ್ವಂತ್ ಸಿಂಗ್ ಪನ್ನು
Follow us on

ಸಿಖ್ ಫಾರ್ ಜಸ್ಟಿಸ್ (SFJ) ಮುಖ್ಯಸ್ಥ ಮತ್ತು ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು(Guru Patwant Singh Pannun) ಇತ್ತೀಚೆಗೆ ಅಮೆರಿಕದಲ್ಲಿ ಖಲಿಸ್ತಾನಿ ಚಳವಳಿಯನ್ನು ಉತ್ತೇಜಿಸಲು ಜನಾಭಿಪ್ರಾಯ ಸಂಗ್ರಹಿಸಿದ್ದರು. ಇದೇ ವೇಳೆ ಖಲಿಸ್ತಾನಿ ಬೆಂಬಲಿಗರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಅಮೆರಿಕ ಪೋಲೀಸರ ಪ್ರಕಾರ, ಈ ಜನಾಭಿಪ್ರಾಯ ಸಂಗ್ರಹವನ್ನು ಸ್ಯಾನ್ ಫ್ರಾನ್ಸಿಸ್ಕೋ ನಗರದಲ್ಲಿ ಮಾಡಲಾಯಿತು. ಪನ್ನು ಎಲ್ಲಾ ಭಯೋತ್ಪಾದಕ ಸಂಘಟನೆಗಳನ್ನು ಗುಂಪುಗೂಡಿಸಲು ಆಹ್ವಾನಿಸಿದ್ದ.

ಅಷ್ಟರಲ್ಲಿ ಹರ್ದೀಪ್ ಸಿಂಗ್ ನಿಜ್ಜಾರ್ ಮತ್ತು ಸರಬ್ಜಿತ್ ಸಿಂಗ್ ಸಾಬಿ ಗುಂಪಿನ ಸದಸ್ಯರೂ ಅಲ್ಲಿಗೆ ತಲುಪಿದ್ದರು. ಈ ವೇಳೆ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದು ನಂತರ ಮಾತಿನ ಚಕಮಕಿ ನಡೆದಿದೆ. ನಿಜ್ಜಾರ್​ನ ಆಪ್ತ ಸ್ನೇಹಿತನ ಮನೆಯ ಮೇಲೆ ಗುಂಡಿನ ದಾಳಿ
ಇತ್ತೀಚೆಗೆ ಕೆನಡಾದಲ್ಲಿ ಹರ್ದೀಪ್ ಸಿಂಗ್ ನಿಜ್ಜಾರ್​ ಅವರ ಸಂಬಂಧಿಕರ ಮನೆಯಲ್ಲಿ ಗುಂಡಿನ ದಾಳಿ ನಡೆದಿದೆ.

2019 ರಲ್ಲಿ SFJ ಅನ್ನು ಭಾರತ ನಿಷೇಧಿಸಿತು
2019 ರಲ್ಲಿ, ಪನ್ನು ಅವರ ಸಂಘಟನೆ SFJ ಅನ್ನು ಭಾರತ ಸರ್ಕಾರವು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯಲ್ಲಿ ನಿಷೇಧಿಸಿತು. ಇದರ ನಂತರ, 1 ಜುಲೈ ಸರ್ಕಾರವು 40 SFJ-ಸಂಬಂಧಿತ ವೆಬ್ ಪುಟಗಳು ಮತ್ತು YouTube ಚಾನಲ್‌ಗಳನ್ನು ನಿಷೇಧಿಸಿತು. 2023 ರಲ್ಲಿ, ಏರ್ ಇಂಡಿಯಾಕ್ಕೆ ಬೆದರಿಕೆ ಹಾಕಿದ ನಂತರ ಪನ್ನು ವಿರುದ್ಧ 2 ಪ್ರಕರಣಗಳು ದಾಖಲಾಗಿದ್ದವು.

ಪಂಜಾಬ್: ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಆಸ್ತಿಗಳ ಮೇಲೆ ಎನ್​ಐಎ ದಾಳಿ
ರಾಷ್ಟ್ರೀಯ ತನಿಖಾ ಸಂಸ್ಥೆ(NIA)ಯ ಅಧಿಕಾರಿಗಳು ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು( Gurpatwant Singh Pannun ) ಆಸ್ತಿಗಳ ಮೇಲೆ ದಾಳಿ ನಡೆಸಿದೆ. ಆತ ನಿಷೇಧಿತ ಸಂಘಟನೆಯ ಸಿಖ್ ಫಾರ್ ಜಸ್ಟಿಸ್​ನ ಮುಖಂಡ. ಚಂಡೀಗಢ ಮತ್ತು ಅಮೃತಸರದಲ್ಲಿರುವ ಆತನ ಆಸ್ತಿಯನ್ನು ಎನ್‌ಐಎ ವಶಪಡಿಸಿಕೊಂಡಿದೆ. ಪನ್ನು ಅಮೃತಸರ ನಿವಾಸಿಯಾಗಿದ್ದು, ಆತನ ಸುಳಿವು ಕೊಟ್ಟವರಿಗೆ ಬಹುಮಾನ ನೀಡುವುದಾಗಿ ಎನ್​ಐಎ ಘೋಷಿಸಿದೆ.

ಮತ್ತಷ್ಟು ಓದಿ:  ಬೆದರಿಕೆ ವಿಡಿಯೊ: ಖಲಿಸ್ತಾನಿ ಉಗ್ರ ಗುರುಪತ್‌ವಂತ್ ಸಿಂಗ್ ಪನ್ನುನ್ ವಿರುದ್ಧ ಪ್ರಕರಣ ದಾಖಲು

ಕೆನಡಾದಲ್ಲಿ ಪನ್ನು ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಎನ್ನಲಾಗಿದೆ. ಭಾರತದಲ್ಲಿ ಪನ್ನು ವಿರುದ್ಧ ದೇಶವಿರೋಧಿ ಪಿತೂರಿ ಸೇರಿದಂತೆ ಒಟ್ಟು 7 ಪ್ರಕರಣಗಳು ದಾಖಲಾಗಿದ್ದು, ಅದರ ವಿವರಗಳನ್ನು ನೀಡಲಾಗಿದೆ. ಪನ್ನುನ ಅಪರಾಧಗಳ ಬಗ್ಗೆ ಕೆನಡಾಕ್ಕೆ ಹಲವಾರು ಬಾರಿ ತಿಳಿಸಲಾಗಿದೆ. ಆದರೆ ಕೆನಡಾ ಭಯೋತ್ಪಾದಕನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

ಚಂಡೀಗಢದಲ್ಲಿ, ಖಾಲಿಸ್ತಾನಿ ಗುರುಪತ್ವಂತ್ ಪನ್ನು ಅವರ ಸೆಕ್ಟರ್ 15 ರ ಮನೆಯನ್ನು ಎನ್ಐಎ ವಶಪಡಿಸಿಕೊಂಡಿದೆ. ಸುಮಾರು ಅರ್ಧ ಗಂಟೆ ಕಾಲ ಎನ್‌ಐಎ ತಂಡ ಇಲ್ಲಿ ಹಾಜರಿದ್ದು, ಮನೆಯ ಹೊರಗೆ ಸೂಚನಾ ಫಲಕ ಹಾಕಿತ್ತು. ಅದೇ ರೀತಿ ಅಮೃತಸರದ ಖಾನ್ಕೋಟ್ ಗ್ರಾಮದಲ್ಲಿ ಪನ್ನುವಿನ 46 ಕನಾಲ್ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:53 pm, Mon, 5 February 24