Horrible Video: ಬ್ರೆಜಿಲ್​​​ನ ಪ್ರಖ್ಯಾತ ಪ್ರವಾಸಿ ತಾಣದಲ್ಲಿ ದುರಂತ; ಪ್ರವಾಸಿಗರ ಬೋಟ್​​ಗಳ ಮೇಲೆ ಗುಡ್ಡ ಕುಸಿದು 7 ಮಂದಿ ಸಾವು, 20ಕ್ಕೂ ಹೆಚ್ಚು ಜನ ನಾಪತ್ತೆ

| Updated By: Lakshmi Hegde

Updated on: Jan 09, 2022 | 10:37 AM

ಇದೊಂದು ಅದ್ಭುತ ಪ್ರವಾಸಿ ತಾಣವಾಗಿದ್ದು, ಸರೋವರದ ಸುತ್ತಲೂ ಕಲ್ಲಿನ ಗುಡ್ಡವಿದೆ. ಅಷ್ಟೇ ಅಲ್ಲ ಗುಹೆಗಳು, ಜಲಪಾತಗಳೂ ಇವೆ. ಇಲ್ಲೊಂದು ಜಲವಿದ್ಯುತ್​ ಅಣೆಕಟ್ಟು ಕೂಡ ಇದೆ.

Horrible Video: ಬ್ರೆಜಿಲ್​​​ನ ಪ್ರಖ್ಯಾತ ಪ್ರವಾಸಿ ತಾಣದಲ್ಲಿ ದುರಂತ; ಪ್ರವಾಸಿಗರ ಬೋಟ್​​ಗಳ ಮೇಲೆ ಗುಡ್ಡ ಕುಸಿದು 7 ಮಂದಿ ಸಾವು, 20ಕ್ಕೂ ಹೆಚ್ಚು ಜನ ನಾಪತ್ತೆ
ದುರ್ಘಟನೆ ನಡೆದ ಜಾಗ
Follow us on

ಬ್ರೆಜಿಲ್​​​ನ ಸರೋವರವೊಂದರಲ್ಲಿ ಮೂರು ಬೋಟ್​​ಗಳ ಮೇಲೆ ಗುಡ್ಡ ಕುಸಿದುಬಿದ್ದ ಪರಿಣಾಮ ಸುಮಾರು 7 ಮಂದಿ ಸಾವನ್ನಪ್ಪಿದ್ದಾರೆ. 20ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದು, 32 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಗ್ನಿಶಾಮಕದಳದ ಕಮಾಂಡರ್​ ಕರ್ನಲ್ ಎಡ್ಗಾರ್ಡ್ ಎಸ್ಟೆವೊ ಡಾ ಸಿಲ್ವಾ ತಿಳಿಸಿದ್ದಾರೆ.  ಈ ಘಟನೆ ನಡೆದದ್ದು ಬ್ರೆಜಿಲ್​ನ ಪ್ರಖ್ಯಾತ ಪ್ರವಾಸಿ ತಾಣ ಫರ್ನಾಸ್ ಸರೋವರದಲ್ಲಿ. ಈ ಸರೋವರ ಸಾವೊ ಪಾಲೊದಿಂದ ಉತ್ತರಕ್ಕೆ ಸುಮಾರು 260 ಮೈಲುಗಳಷ್ಟು ದೂರವಿದೆ. ಅಪಾಯದಲ್ಲಿ ಸಿಲುಕಿರುವವರನ್ನು ರಕ್ಷಿಸಲು ಬ್ರೆಜಿಲ್​ ನೇವಿ ಮತ್ತು ಸ್ಥಳೀಯ ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. 

ಶನಿವಾರ ಮಧ್ಯಾಹ್ನ 12.30ರ ಹೊತ್ತಿಗೆ ಘಟನೆ ನಡೆದಿದೆ. ಫರ್ನಾಸ್​ ಸರೋವರದಲ್ಲಿ ಹಲವು ಪ್ರವಾಸಿಗರ ಬೋಟ್​ಗಳು ಇದ್ದವು. ಈ ಹೊತ್ತಲ್ಲಿ ಅಲ್ಲಿದ್ದ ದೊಡ್ಡ ಕಲ್ಲುಗುಡ್ಡದ ಒಂದು ಭಾಗ ಒಡೆದು ಮೂರು ಬೋಟ್​ಗಳ ಮೇಲೆ ಬಿದ್ದಿದೆ. ಶನಿವಾರ ವೀಕೆಂಡ್  ಆಗಿದ್ದರಿಂದ ಸಹಜವಾಗಿಯೇ ಇಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ. ಹಾಗೇ ನಿನ್ನೆ ಕೂಡ ಹಲವು ಪ್ರವಾಸಿಗರು ಬಂದಿದ್ದರು. ಆದರೆ ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ. ನಿನ್ನೆಯಿಂದಲೂ ಅಗ್ನಿಶಾಮಕದಳ, ನೌಕಾಪಡೆ ಸಿಬ್ಬಂದಿ ಅಲ್ಲಿಯೇ ಬೀಡುಬಿಟ್ಟಿದ್ದಾರೆ.

ಇದೊಂದು ಅದ್ಭುತ ಪ್ರವಾಸಿ ತಾಣವಾಗಿದ್ದು, ಸರೋವರದ ಸುತ್ತಲೂ ಕಲ್ಲಿನ ಗುಡ್ಡವಿದೆ. ಅಷ್ಟೇ ಅಲ್ಲ ಗುಹೆಗಳು, ಜಲಪಾತಗಳೂ ಇವೆ. ಇಲ್ಲೊಂದು ಜಲವಿದ್ಯುತ್​ ಅಣೆಕಟ್ಟು ಕೂಡ ಇದೆ. ಆದರೆ ಈ ಸುಂದರ ಪ್ರದೇಶದಲ್ಲಿ ನಡೆದ ದುರಂತದ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಘಟನೆಯನ್ನು ಕಣ್ಣಾರೆ ನೋಡಿದವರಂತೂ ಕಂಗಾಲಾಗಿ ಹೋಗಿದ್ದಾರೆ.

ಇದನ್ನೂ ಓದಿ: ಸಮಂತಾ ದೂರಾದ ಬಳಿಕ ನಾಗ ಚೈತನ್ಯ ಜತೆ ಖಾಸಗಿ ವಿಮಾನದಲ್ಲಿ ಕಾಣಿಸಿಕೊಂಡ ಈ ಸುಂದರಿ ಯಾರು?

Published On - 8:48 am, Sun, 9 January 22