Airline Shutdown: ಕಂಪ್ಯೂಟರ್ ತಾಂತ್ರಿಕ ದೋಷದಿಂದ ಯುಎಸ್‌ನಾದ್ಯಂತ ವಿಮಾನಯಾನ ಸ್ಥಗಿತ: ವರದಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 11, 2023 | 5:24 PM

ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್‌ ವಿಮಾನಯಾನ ಸಂಸ್ಥೆಯಲ್ಲಿ ಕಂಪ್ಯೂಟರ್​ ತಾಂತ್ರಿಕ ದೋಷದಿಂದಾಗಿ ಯುಎಸ್‌ನಾದ್ಯಂತ ವಿಮಾನಯಾನ ಸ್ಥಗಿತಗೊಂಡಿದೆ.

Airline Shutdown: ಕಂಪ್ಯೂಟರ್ ತಾಂತ್ರಿಕ ದೋಷದಿಂದ ಯುಎಸ್‌ನಾದ್ಯಂತ ವಿಮಾನಯಾನ ಸ್ಥಗಿತ: ವರದಿ
Computer glitch causes airline outages across US report
Image Credit source: syk News
Follow us on

ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್‌ ವಿಮಾನಯಾನ ಸಂಸ್ಥೆಯಲ್ಲಿ ಕಂಪ್ಯೂಟರ್​ ತಾಂತ್ರಿಕ ದೋಷದಿಂದಾಗಿ ಯುಎಸ್‌ನಾದ್ಯಂತ ವಿಮಾನಯಾನ ಸ್ಥಗಿತಗೊಂಡಿದೆ. ಕಂಪ್ಯೂಟರ್ ಸಿಸ್ಟಮ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ ಪರಿಣಾಮವಾಗಿ ಎಲ್ಲಾ ವಿಮಾನಗಳು ಗ್ರೌಂಡಿಂಗ್ ಮತ್ತು ಲಕ್ಷಾಂತರ ಪ್ರಯಾಣಿಕರು ಕಾಯುವಂತಾಗಿದೆ. ವಿಶ್ವದಾದ್ಯಂತದ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ ಎಂದು ವರದಿ ಹೇಳಿದೆ. LAX ನಿಂದ ಗ್ರೌಂಡ್ಡ್ ರೆಡ್-ಐ ಫ್ಲೈಟ್‌ನಲ್ಲಿ ಮೂರು ಗಂಟೆಗಳ ಕಾಲ ಕಾಯುತ್ತಿದ್ದೇನೆ ಎಂದು ಟೇಲರ್ ಬ್ರಾಷರ್ ಟ್ವೀಟ್ ಮಾಡಿದ್ದಾರೆ. ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ (FAA) ಪ್ರಕಾರ, ಯುನೈಟೆಡ್ ಸ್ಟೇಟ್ಸ್ ನೋಟಿಸ್ ಟು ಏರ್ ಮಿಷನ್ಸ್ (NOTAM) ವ್ಯವಸ್ಥೆಯು ವಿಫಲವಾಗಿದೆ.

NOTAMಗಳು ಪೈಲಟ್‌ಗಳಿಗೆ ವಿಮಾನದ ಸ್ಥಿತಿಯಲ್ಲಿನ ಬದಲಾವಣೆಗಳನ್ನು ಸೂಚಿಸಿದ್ದಾರೆ ಮತ್ತು ವಿಮಾನವು ಟೇಕ್ ಆಫ್ ಆಗುವ ಮೊದಲು ಈ ವಿಚಾರಗಳ ಬಗ್ಗೆ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.

ಹತ್ತಾರು ವಿಮಾನಗಳು ವಿಳಂಬ

ಟೋಕಿಯೊಗೆ ತೆರಳುವ ವಿಮಾನಗಳು ಸೇರಿದಂತೆ ಹತ್ತಾರು ವಿಮಾನಗಳು ಈ ದೋಷದಿಂದಾಗಿ ವಿಳಂಬವಾಗಿವೆ. ಟ್ಯಾಂಪಾ, ಫಿಲಡೆಲ್ಫಿಯಾ ಮತ್ತು ಹೊನೊಲುಲುವಿನ ವಿಮಾನ ನಿಲ್ದಾಣದಿಂದ ಹೊರಡುವ ವಿಮಾನಗಳು ವಿಳಂಬವಾಗಿವೆ ಎಂದು ವರದಿಯಾಗಿದೆ.

ಇದನ್ನು ಓದಿ:Akasa Airlines: ಮುಂಬೈನಿಂದ ಅಹಮದಾಬಾದ್​ಗೆ ಹಾರಿತು ಆಕಾಶ ಏರ್​ಲೈನ್ಸ್​ನ ಮೊದಲ ವಿಮಾನ

ಹೆಚ್ಚುವರಿಯಾಗಿ, ವರ್ಜೀನಿಯಾದ ಆರ್ಲಿಂಗ್ಟನ್‌ನಲ್ಲಿರುವ ರೊನಾಲ್ಡ್ ರೇಗನ್ ವಾಷಿಂಗ್‌ಟನ್ ವಿಮಾನ ನಿಲ್ದಾಣವು ವಿಳಂಬವನ್ನು ವರದಿ ಮಾಡಿದೆ. ವಿಮಾನ ನಿಲ್ದಾಣದ ಪ್ರಕಾರ, ನ್ಯೂಯಾರ್ಕ್‌ನ JFK ವಿಮಾನ ನಿಲ್ದಾಣದಿಂದ ಷಾರ್ಲೆಟ್ ಮತ್ತು ಲಾಸ್ ಏಂಜಲೀಸ್‌ಗೆ ಬೆಳಿಗ್ಗೆ 6 ಗಂಟೆಗೆ ET ಗೆ ಹೊರಡುವ ವಿಮಾನಗಳು ವಿಳಂಬವಾಗಿವೆ.

ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:20 pm, Wed, 11 January 23