ಅಮೆರಿಕಾದ ಆಹಾರ ಮತ್ತು ಔಷಧ ನಿಯಂತ್ರಣಾ ಸಂಸ್ಥೆ (FDA) ಮಾಡೆರ್ನಾ ತಯಾರಿಸಿರುವ ಕೊರೊನಾ ಲಸಿಕೆಗೆ ಅನುಮತಿ ನೀಡುವ ಸಾಧ್ಯತೆ ಇದೆ. ಇತ್ತೀಚಿನ ಪರೀಕ್ಷೆಯಲ್ಲಿ ಮಾಡೆರ್ನಾ ಅಭಿವೃದ್ಧಿಪಡಿಸಿದ ಕೊರೊನಾ ಲಸಿಕೆ ಶೇ.94.1ರಷ್ಟು ಪರಿಣಾಮಕಾರಿಯಾಗಿ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರದಂದು ಮಾಡೆರ್ನಾ ಲಸಿಕೆಗೆ FDA ಅನುಮತಿ ಸೂಚಿಸಬಹುದು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಸದ್ಯ ಅಮೆರಿಕಾ 20 ಕೋಟಿ ಮಾಡೆರ್ನಾ ಕೊರೊನಾ ಲಸಿಕೆಗಳನ್ನು ಕಾಯ್ದಿರಿಸಿದೆ. 2021ರ ಆರಂಭದ ದಿನಗಳಲ್ಲಿ ಅಮೆರಿಕಾ ಪ್ರಜೆಗಳಿಗೆ ನಾವು ತಯಾರಿಸಿದ ಕೊರೊನಾ ಲಸಿಕೆ ಲಭಿಸಲಿದೆ ಎಂದು ಮಾಡೆರ್ನಾ ಸಂಸ್ಥೆಯ ಸಿಇಓ ಸ್ಟೀಫನ್ ಬನ್ಸೆಲ್ ಭರವಸೆ ನೀಡಿದ್ದಾರೆ.
ಕಳೆದ ಸೋಮವಾರವಷ್ಟೇ ಅಮೆರಿಕಾದ ಆರೋಗ್ಯ ಕಾರ್ಯಕರ್ತರು ಫೈಜರ್ ಕೊರೊನಾ ಲಸಿಕೆಯನ್ನು ಪಡೆದಿದ್ದಾರೆ. ಫೈಜರ್ ಅಭಿವೃದ್ಧಿಪಡಿಸಿದ ಕೊರೊನಾ ಲಸಿಕೆಗೆ FDA ಈಗಾಗಲೇ ಅನುಮತಿ ನೀಡಿದೆ. ಈಗ ಮಾಡೆರ್ನಾ ಲಸಿಕೆಗೂ ಅನುಮತಿ ಸಿಗುವ ಸಾಧ್ಯತೆ ದಟ್ಟವಾಗಿರುವುದರಿಂದ ಮುಂದಿನ ಎರಡು ವಾರದೊಳಗೆ ಅಮೆರಿಕಾದಲ್ಲಿ ಮಾಡೆರ್ನಾ ವಿತರಣೆ ಆರಂಭವಾಗಬಹುದು ಎಂದು ವರದಿಗಳು ತಿಳಿಸಿವೆ.
Explainer | ಬ್ರಿಟನ್, ಕೆನಡಾ ಮತ್ತು ಅಮೆರಿಕಗಳಲ್ಲಿ ಹೇಗೆ ನಡೆಯುತ್ತಿದೆ ಕೊರೊನಾ ಲಸಿಕೆ ವಿತರಣೆ?