‘ಕೊರೊನಾ’ ತನಿಖೆಗೆ ಮುಂದಾಯ್ತು WHO, ಮುಂದಿನ ತಿಂಗಳು ಚೀನಿಯರ ನಾಡಿಗೆ ತಜ್ಞರ ತಂಡ..
‘ಕೊರೊನಾ’ ಚೀನಾದಲ್ಲಿ ಸೃಷ್ಟಿಯಾಗಿ ಈಗ ವಿಶ್ವವನ್ನೇ ಆವರಿಸಿದೆ. ಹೆಮ್ಮಾರಿಗೆ ಹತ್ತಾರು ಲಕ್ಷ ಜನ ಬಲಿಯಾಗಿದ್ದಾರೆ. ಇಷ್ಟೆಲ್ಲದರ ನಂತರ ಅಲರ್ಟ್ ಆಗಿರುವ ವಿಶ್ವ ಆರೋಗ್ಯ ಸಂಸ್ಥೆ, ಚೀನಿ ತಾಯ್ನಾಡಲ್ಲಿ ವೈರಸ್ ತನಿಖೆಗೆ ಮುಂದಾಗಿದೆ. ಮುಂದಿನ ತಿಂಗಳು ತಜ್ಞರ ತಂಡ ಚೀನಾಗೆ ಭೇಟಿ ನೀಡಿ ಕೊರೊನಾ ಮೂಲದ ಬಗ್ಗೆ ಮಾಹಿತಿ ಕಲೆಹಾಕಲಿದೆ.
ಚೀನಿ ವೈರಸ್ ಇದೀಗ ಇಡೀ ಜಗತ್ತನ್ನೇ ಕಾಡುತ್ತಿದೆ. ಬರೋಬ್ಬರಿ ಒಂದು ವರ್ಷದಿಂದ ಈ ಕಂಟಕ ಜಗತ್ತನ್ನೇ ಬಾಧಿಸುತ್ತಿದ್ದು, ಬಡವ-ಶ್ರೀಮಂತ ಎಂಬ ಡಿಫರೆನ್ಸ್ ಇಲ್ಲದೆ ಭೂಮಿ ಮೇಲಿನ ಪ್ರತಿಯೊಂದು ದೇಶವೂ ಕೊರೊನಾ ಸುಳಿಗಾಳಿಗೆ ಸಿಲುಕಿ ನರಳಿದೆ. ಇಂತಹ ಹೊತ್ತಲ್ಲೇ ಚೀನಾಗೆ ತಕ್ಕ ಶಾಸ್ತಿ ಆಗಬೇಕು ಎಂಬ ಕೂಗು ಕೇಳಿಬಂದಿದೆ. ಆದ್ರೆ ಮೊದ ಮೊದಲು ಇದಕ್ಕೆ ಸೊಪ್ಪು ಹಾಕದ ವಿಶ್ವ ಆರೋಗ್ಯ ಸಂಸ್ಥೆ, ಇದೀಗ ದಿಢೀರ್ ಅಂತಾ ಎದ್ದು ಕೂತಿದೆ.
‘ಕೊರೊನಾ’ ತನಿಖೆಗೆ ಮುಂದಾಯ್ತು ವಿಶ್ವ ಆರೋಗ್ಯ ಸಂಸ್ಥೆ ಕೋಟಿ ಕೋಟಿ ಜನರಿಗೆ ಹರಡಿದ ಸೋಂಕು. ಈವರೆಗೂ ಲಕ್ಷಾಂತರ ಜನರ ಸಾವು. ಹೀಗೆ ಕೊರೊನಾ ಎಂಬ ಸುಳಿಗಾಳಿಗೆ ಸಿಲುಕಿ ಇಡೀ ಜಗತ್ತು ನರಳಿದೆ. ಆದರೆ ಈ ಕೊರೊನಾ ಸೋಂಕಿನ ಮೂಲವಾದ ಚೀನಾ ವಿರುದ್ಧ ಸೂಕ್ತ ತನಿಖೆಗೆ ಈವರೆಗೂ ವಿಶ್ವ ಆರೋಗ್ಯ ಸಂಸ್ಥೆ ಮುಂದಾಗಿರ್ಲಿಲ್ಲ.
ಇದು ಚೀನಿ ಸರ್ಕಾರಕ್ಕೆ ರಿಲೀಫ್ ನೀಡಿತ್ತು. ಆದ್ರೆ ಸದ್ಯ ಕೊರೊನಾ ಮೂಲವನ್ನು ಕೆದಕಲು ಡಬ್ಲ್ಯೂಎಚ್ಒ ಮುಂದಾಗಿದೆ. ಮುಂದಿನ ತಿಂಗಳು ವಿಶ್ವ ಆರೋಗ್ಯ ಸಂಸ್ಥೆಯಿಂದ ತಜ್ಞರ ತಂಡ ಚೀನಾಗೆ ಭೇಟಿ ನೀಡಿ ತನಿಖೆ ನಡೆಸಲಿದೆ. ಕೊರೊನಾ ಚೀನಾದಲ್ಲಿ ಹರಡಿದ್ದು ಹೇಗೆ ಮತ್ತು ಚೀನಾದಿಂದ ಡೆಡ್ಲಿ ವೈರಸ್ ಜಗತ್ತಿಗೆ ಮೆತ್ತಿದ್ದು ಹೇಗೆ ಎಂಬುದರ ಬಗ್ಗೆ ಇನ್ವೆಸ್ಟಿಗೇಷನ್ ನಡೆಯಲಿದೆ.
ಮತ್ತೆ ನಾಟಕ ಮಾಡುತ್ತಾ ನೌಟಂಕಿ ಚೀನಾ? ಇಷ್ಟು ದಿನಗಳ ಕಾಲ ಕೊರೊನಾ ಬಗ್ಗೆ ಬರೀ ಸುಳ್ಳನ್ನೇ ಹೇಳಿ ಬದುಕಿದ ಚೀನಿಯರು ಈಗಲಾದರೂ ಸತ್ಯವನ್ನು ಬಾಯಿ ಬಿಡ್ತಾರಾ, ಇಲ್ಲ ಮತ್ತದೇ ಉದ್ಧಟತನವನ್ನು ಮುಂದುವರೆಸುತ್ತಾರಾ ಎಂಬ ಪ್ರಶ್ನೆ ಕಾಡತೊಡಗಿದೆ. ಕೊರೊನಾ ಕಂಡ ಕೂಡಲೇ ಜಗತ್ತಿಗೆ ಸೂಕ್ತ ಮಾಹಿತಿ ಹಾಗೂ ಸಂದೇಶ ಕೊಡುವ ಬದಲು ಚೀನಾ ಬೇಕಂತಲೇ ಆಟ ಆಡಿಸಿತ್ತು ಎಂಬ ಆರೋಪವಿದೆ.
ಅಮೆರಿಕ, ಯುರೋಪ್, ಬ್ರಿಟನ್, ಭಾರತ ಸೇರಿದಂತೆ ವಿಶ್ವದ ಹತ್ತಾರು ದೇಶಗಳಿಗೆ ಈ ಬಗ್ಗೆ ಸಾಕಷ್ಟು ಅನುಮಾನವಿದೆ. ಇದೇ ಕಾರಣಕ್ಕೆ ಇಷ್ಟುದಿನ ವಿಶ್ವ ಆರೋಗ್ಯ ಸಂಸ್ಥೆ ತನಿಖೆ ನಡೆಸಬೇಕು ಎಂದು ಒತ್ತಡವನ್ನ ಹಾಕಲಾಗುತ್ತಿತ್ತು. ಇದೀಗ ಆ ಒತ್ತಡಕ್ಕೆ ಡಬ್ಲ್ಯೂಎಚ್ಒ ಮಣಿದಿದ್ದು, ಕಪಟಿ ಚೀನಾಗೆ ಸಂಕಷ್ಟ ಎದುರಾಗಿದೆ.
ಒಟ್ನಲ್ಲಿ ಕೊರೊನಾ ಕೂಪದಲ್ಲಿ ಇಡೀ ಜಗತ್ತು ನರಳುವಾಗ, ಕೊರೊನಾ ತವರಾದ ಚೀನಾ ಮೇಲೆ ರಿವೇಂಜ್ಗೆ ಜಗತ್ತು ಒಂದಾಗಿದೆ. ಆದ್ರೆ ಈ ಬಗ್ಗೆ ಚೀನಾ ಮತ್ತಿನ್ನೇನು ಕಿರಿಕ್ ಶುರು ಮಾಡುತ್ತೋ ಅನ್ನೋದನ್ನ ಕಾದು ನೋಡ್ಬೇಕು.