ಬ್ರಿಟನ್​ನಲ್ಲಿ ನೆಲೆಸಿರುವ ಭಾರತೀಯರ ಮಾನಸಿಕ ಆರೋಗ್ಯಕ್ಕೆ ಪೆಟ್ಟು ಕೊಟ್ಟ ಕೊರೊನಾ

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಲಾಕ್​ಡೌನ್​ ಆರಂಭವಾದ ಏಪ್ರಿಲ್​ ಸಮಯದಲ್ಲಿ ಬ್ರಿಟನ್​ ವಾಸಿ ಭಾರತೀಯರು ಅತಿ ಹೆಚ್ಚು ಮಾನಸಿಕ ಒತ್ತಡ ಅನುಭವಿಸಿದ್ದಾರೆ. ಅವರಲ್ಲಿ ನಿದ್ರಾಹೀನತೆ ಕಂಡುಬಂದಿದೆ.

ಬ್ರಿಟನ್​ನಲ್ಲಿ ನೆಲೆಸಿರುವ ಭಾರತೀಯರ ಮಾನಸಿಕ ಆರೋಗ್ಯಕ್ಕೆ ಪೆಟ್ಟು ಕೊಟ್ಟ ಕೊರೊನಾ
ಪ್ರಾತಿನಿಧಿಕ ಚಿತ್ರ
Skanda

| Edited By: sadhu srinath

Dec 16, 2020 | 6:28 PM

ಬ್ರಿಟನ್​ ದೇಶದಲ್ಲಿ ವಾಸಿಸುತ್ತಿರುವ ಭಾರತೀಯರಿಗೆ ಕೊವಿಡ್​ನಿಂದಾಗಿ ಮಾನಸಿಕ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಬ್ರಿಟನ್​ನ ಆಫೀಸ್ ಫಾರ್ ನ್ಯಾಶನಲ್​ ಸ್ಟ್ಯಾಟಿಸ್ಟಿಕ್ಸ್ (ONS) ಬಿಡುಗಡೆಗೊಳಿಸಿರುವ ಅಂಕಿ-ಅಂಶಗಳಿಂದ ಈ ವಿಷಯ ಬಯಲಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಲಾಕ್​ಡೌನ್​ ಆರಂಭವಾದ ಏಪ್ರಿಲ್​ ಸಮಯದಲ್ಲಿ ಬ್ರಿಟನ್​ ವಾಸಿ ಭಾರತೀಯರು ಅತಿ ಹೆಚ್ಚು ಮಾನಸಿಕ ಒತ್ತಡ ಅನುಭವಿಸಿದ್ದಾರೆ. ಅವರಲ್ಲಿ ನಿದ್ರಾಹೀನತೆ ಕಂಡುಬಂದಿದ್ದು ಬ್ರಿಟನ್​ ಪ್ರಜೆಗಳಿಗಿಂತ ಹೆಚ್ಚು ಒತ್ತಡಕ್ಕೆ ಸಿಲುಕಿದವರು ಅಲ್ಲಿನ ಭಾರತೀಯರು ಎಂದು ವರದಿಯಾಗಿದೆ.

ಒತ್ತಡಕ್ಕೆ ಮೂಲ ಕಾರಣ ಆದಾಯ ಮತ್ತು ಹಣಕಾಸು ಉಳಿತಾಯದ ವಿಚಾರ ಎಂದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಹಾಗೆ ನೋಡಿದರೆ ಲಾಕ್​ಡೌನ್​ ಪೂರ್ವದಲ್ಲಿ ಸಂಬಳ ಕಡಿತವಾದಾಗ ಆ ಸಂದರ್ಭವನ್ನು ಬ್ರಿಟನ್ನರಿಗಿಂತ ಚೆನ್ನಾಗಿ ಭಾರತೀಯರು ನಿಭಾಯಿಸಿದ್ದರು. ಹೆಚ್ಚೂ ಕಡಿಮೆ ಶೇ. 58ರಷ್ಟು ಭಾರತೀಯರು ತಮ್ಮ ಆಸ್ತಿ ಹಾಗೂ ಇತರ ಮೂಲಗಳ ಮೇಲೆ ಅವಲಂಬಿತರಾಗಿ ಕಠಿಣ ಪರಿಸ್ಥಿತಿಯನ್ನು ಸುಲಭವಾಗಿ ಎದುರಿಸಿದ್ದರು.

ಆದರೆ, ಲಾಕ್​ಡೌನ್ ನಂತರ ಭಾರತೀಯರೇ ಅತಿ ಹೆಚ್ಚು ಒತ್ತಡಕ್ಕೆ ಒಳಗಾಗಿದ್ದಾರೆ. ರಕ್ತದೊತ್ತಡ, ಸಕ್ಕರೆ ಕಾಯಿಲೆ, ವಾಯು ಸಮಸ್ಯೆಗಳು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿರುವ ಸಾಧ್ಯತೆಯೂ ಇದೆ ಎಂದು ವಿಶ್ಲೇಷಿಸಲಾಗಿದೆ.

ಅಂಗೈಯಲ್ಲಿ ಆರೋಗ್ಯ: ಪಾಲಿಸಿ ಪಂಚ ಸೂತ್ರ, ಪಡೆಯಿರಿ ಉತ್ತಮ ಆರೋಗ್ಯ!

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada